ಜಪಾನ್ ಇಂಜಿನಿಯರ್ ವಿದ್ಯಾರ್ಥಿ ತಂಡ ಪುತ್ತೂರು ಮಾಸ್ಟರ್ ಪ್ಲಾನರಿ ಸಂಸ್ಥೆಗೆ ಭೇಟಿ

ಪುತ್ತೂರು,ಸೆ.24: ಜಪಾನಿನ ‘ಸಾಗ’ ವಿಶ್ವವಿದ್ಯಾನಿಲಯದ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳ ತಂಡವೊಂದು ಅಧ್ಯಯನ ನಡೆಸಲು ಪುತ್ತೂರಿನ ಮಾಸ್ಟರ್ ಪ್ಲಾನರಿ ಸಂಸ್ಥೆಗೆ ಶನಿವಾರ ಭೇಟಿ ನೀಡಿದರು.
ಜಪಾನಿನ 15 ವಿದ್ಯಾರ್ಥಿಗಳ ತಂಡವು ಸುರತ್ಕಲ್ ಎನ್‌ಐಟಿಕೆ ಇಂಜಿನಿಯರಿಂಗ್ ಕಾಲೇಜ್‌ನ ಉಪನ್ಯಾಸಕರಾದ ಬಾಬು ನಾರಾಯಣ್, ಶಿವ ಶಂಕರ್, ಸುನಿನ್ ಬಿ.ಎಂ ಇವರೊಂದಿಗೆ ಪುತ್ತೂರಿನ ನೆಹರು ನಗರದಲ್ಲಿರುವ ಮೆ. ಮಾಸ್ಟರ್ ಪ್ಲಾನರಿ ಸಂಸ್ಥೆಗೆ ಭೇಟಿ ನೀಡಿ ಇಲ್ಲಿನ ವಿವಿಧ ಕಾಂಕ್ರೀಟು ಉತ್ಪನ್ನಗಳ ವೈಶಿಷ್ಟ್ಯತೆಗಳ ಬಗ್ಗೆ ಅಧ್ಯಯನ ನಡೆಸಿದರು.
ಈ ತಂಡದಲಿ ಜಪಾನ್, ಕೊರಿಯಾ, ಟ್ಯುನೇಷಿಯಾ, ನೇಪಾಳ ಮುಂತಾದ ದೇಶಗಳ ವಿದ್ಯಾರ್ಥಿಗಳಿದ್ದರು. ಮಾಸ್ಟರ್ ಪ್ಲಾನರಿ ಮಾಲಕ ಎಸ್.ಕೆ. ಆನಂದ ಸ್ವಾಗತಿಸಿದರು.
Next Story





