ಈ ರಾಜ್ಯದಲ್ಲಿ ಗಂಟೆಗೆ 5 ವಿವಾಹ ವಿಚ್ಛೇದನ!

ತ್ರಿಶ್ಯೂರ್, ಸೆಪ್ಟಂಬರ್ 24: ರಾಜ್ಯದಲ್ಲಿ ವಿವಾಹ ವಿಚ್ಛೇದನ ಪ್ರಕರಣದಲ್ಲಿಕ್ರಮಾತೀತ ಹೆಚ್ಚಳವಾಗಿದೆ ಎಂದು ಕೌಂಟುಂಬಿಕ ನ್ಯಾಯಾಲಯದ ವಿವರಗಳು ಬಹಿರಂಗಪಡಿಸಿವೆ ಎಂದುವರದಿಯಾಗಿದೆ. ಕಳೆದ ಒಂದೂವರೆವರ್ಷದಲ್ಲಿ ಕೇರಳದಲ್ಲಿ1.96 ಲಕ್ಷ ವಿವಾಹ ವಿಚ್ಛೇದನ ಕೇಸುಗಳು ದಾಖಲಾಗಿವೆ. ದೇಶದ ಪ್ರತೀವರ್ಷ ನಡೆಯುವ ವಿವಾಹವಿಚ್ಛೇದನಗಳಲ್ಲಿಶೇ.8.36ರಷ್ಟು ವಿಚ್ಛೇದನ ಪ್ರಕರಣಗಳು ಕೇರಳಕ್ಕೆ ಸಂಬಂಧಿಸಿದ್ದಾಗಿವೆ. ಪ್ರತಿ ಗಂಟೆಯಲ್ಲಿ ಐದು ಮಂದಿಗೆ ವಿಚ್ಛೇದನ ಎಂಬ ಪ್ರಮಾಣದಲ್ಲಿ ವಿವಾಹವಿಚ್ಛೇದನದ ಪ್ರಕರಣಗಳಲ್ಲಿ ಹೆಚ್ಚಳವಾಗಿವೆ. ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರಕಾರಕ್ಕೆ ನೀಡಲಾದ ಲೆಕ್ಕಗಳನ್ನು ಕೇರಳ ಸರಕಾರ ಬಹಿರಂಗಪಡಿಸಿದ್ದು, 2014ರಲ್ಲಿ ಪ್ರತಿದಿನ 130ಕ್ಕೂ ಅಧಿಕ ವಿವಾಹವಿಚ್ಛೇದನ ಪ್ರಕರಣಗಳಿಗೆ ರಾಜ್ಯದಲ್ಲಿ ತೀರ್ಪು ನೀಡಲಾಗಿದೆ. ಈವರ್ಷ ಜನವರಿಯಿಂದ ಜೂನ್‌ವರೆಗೆ 26,885 ವಿವಾಹವಿಚ್ಛೇದನ ಕೇಸುಗಳು ದಾಖಲಾಗಿವೆ. 2011ರಲ್ಲಿ ಕೌಟುಂಬಿಕ ಕೋರ್ಟಿನಲ್ಲಿ 44,326 ವಿವಾಹವಿಚ್ಛೇದನ ಕೇಸುಗಳು ದಾಖಲಾಗಿದ್ದು, ಇವುಗಳಲ್ಲಿ ಒಂದಕ್ಕೂ ತೀರ್ಪು ಬಂದಿಲ್ಲ. 2005ರಲ್ಲಿ 8,456 ವಿವಾಹವಿಚ್ಛೇದನ ಪ್ರಕರಣಗಳು ದಾಖಲಾಗಿದ್ದು,2012ರಕ್ಕಾಗುವಾಗ 24,815 ಪ್ರಕರಣಗಳಾಗಿ ಹೆಚ್ಚಳವಾಗಿವೆ.
ತಿರುವನಂತಪುರಂ ಜಿಲ್ಲೆಯಲ್ಲಿ ವಿವಾಹವಿಚ್ಛೇದನಕ್ಕೆ ಅರ್ಜಿಸಲ್ಲಿಸಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಿರುವನಂತಪುರದ, ನೆಡುಮಂಗಾಡ್ ಕುಟುಂಬಕೋರ್ಟಿನಲ್ಲಿ ಅತ್ಯಧಿಕ ಕೇಸುಗಳು ದಾಖಲಾಗಿವೆ.2011-12ರಲ್ಲಿ ಈ ಕೋರ್ಟಿನಲ್ಲಿ 6000 ಪ್ರಕರಣಗಳು ದಾಖಲಾಗಿವೆ.ಅತ್ಯಂತ ಕಡಿಮೆ ಪ್ರಕರಣಗಳು ಕಾಸರಗೋಡಿನಲ್ಲಿ(445)ದಾಖಲಾಗಿದೆ. 2014-15ರಲ್ಲಿ ವಿವಾಹವಿಚ್ಛೇದನ ಪ್ರಕರಣಗಳಲ್ಲಿ ಭಾರೀ ಹೆಚ್ಚಳವಾಗಿದೆ. ರಾಜ್ಯದಲ್ಲಿ ಈ ಅವಧಿಯಲ್ಲಿ ಒಂದು ಲಕ್ಷದಷ್ಟು ಪ್ರಕರಣಗಳು ದಾಖಲಾಗಿವೆ.
ಎರ್ನಾಕುಲಂ ವಿವಾಹ ವಿಚ್ಛೇದನದಲ್ಲಿ ಮುಂದಿರುವ ಇನ್ನೊಂದುಜಿಲ್ಲೆಯಾಗಿದ್ದು, ಇಲ್ಲಿ ದಾದಿಯರಲ್ಲಿ ಮತ್ತು ಐಟಿ ಉದ್ಯೋಗಿಗಳಲ್ಲಿ ವಿವಾಹವಿಚ್ಛೇದನದ ಬೇಡಿಕೆ ಹೆಚ್ಚಿದೆ. ಕುಟುಂಬಕೋರ್ಟಿಗೆ ವಿವಾಹವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುವವರಲ್ಲಿ ಹೆಚ್ಚಿನವರು ಯುವಕರು ಮತ್ತುಯುವತಿಯರಾಗಿದ್ದಾರೆ ಎಂದು ವರದಿ ತಿಳಿಸಿದೆ.







