ಸ್ಮಾರ್ಟ್ ಸಿಟಿ ಯಶಸ್ವಿಗೆ ಜನರ ಸಹಕಾರ ಅಗತ್ಯ : ವೆಂಕಯ್ಯ ನಾಯ್ದು

ಹುಬ್ಬಳ್ಳಿ,ಸೆ.24: ಸ್ಮಾರ್ಟ್ ಸಿಟಿ ಯೋಜನೆ ಯಶಸ್ವಿಯಾಗಬೇಕಾದರೆ ಜನರ ಸಹಕಾರ ಅಗತ್ಯವಾಗಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದರು.
ಅವರು ಶನಿವಾರ ಮಹಾನಗರಪಾಲಿಕೆ ವತಿಯಿಂದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು.
ಸ್ಮಾರ್ಟ್ ಸಿಟಿ ದೂರದೃಷ್ಟಿ ಉಪಯುಕ್ತ ಯೋಜನೆಯಾಗಬೇಕು. ಜನರಿಗೆ ಹತ್ತಿರವಾಗುವ ಸ್ಮಾರ್ಟ್ ಯೋಜನೆರೂಪಿಸಿ. ನಾವು ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತಂದಿರುವ ಹೈದ್ರಾಬಾದ್, ಕಲ್ಕತ್, ಮುಂಬೈ, ಅಹ್ಮದಾಬಾದ್ ನಗರಗಳಲ್ಲಿ ಅನೇಕ ಸಮಸ್ಯೆ ಎದುರುಸುತ್ತಿದ್ದೇವೆ ಆ ಸಮಸ್ಯೆಗಳು ಇಲ್ಲಿ ಪುನಾರ್ವತನೆಯಾಗಬಾರದು ಎಂದು ಸಚಿವರು, ಸ್ಮಾರ್ಟ್ ಸಿಟಿ ಹೆಸರಿನಂತೆ ಯೋಜನೆ ಸಹ ಸ್ಮಾರ್ಟ್ ಆಗಬೇಕು ಎಂದರು.
ಕೈಕೊಟ್ಟ ವಿದ್ಯುತ್ : ಕೇಂದ್ರ ಸಚಿವರು ಮಾತನಾಡುವ ಮಧ್ಯದಲ್ಲಿಯೇ 8 ನಿಮಿಷಗಳ ಕಾಲ ವಿದ್ಯುತ್ ಕೈಕೊಟ್ಟಿತು. ಇದರಿಂದಾಗಿ ಮಾತನಾಡದೆ ಸುಮ್ಮನೆ ಕುಳಿತರು. ನಂತರ ಪಾಲಿಕೆ ಸಿಬ್ಬಂಧಿಗಳು ಜನರೇಟರ್ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿ ಸಚಿವರಿಗೆ ಮಾತನಾಡಲು ಅನುವು ಮಾಡಿಕೊಟ್ಟರು.





