ಸುಳ್ಯದಲ್ಲಿ 1000ನೇ ಮದ್ಯವರ್ಜನ ಶಿಬಿರ ಆರಂಭ : 120ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗಿ
ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಡಾ.ಚಿದಾನಂದ ಕರೆ
.jpg)
ಸುಳ್ಯ,ಸೆ.24:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ 1000ನೇ ಮದ್ಯವರ್ಜನ ಶಿಬಿರಕ್ಕೆ ಶನಿವಾರ ಚಾಲನೆ ನೀಡಲಾಗಿದೆ.
ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ಶಿಬಿರವನ್ನು ಉದ್ಘಾಟಿಸಿದರು. ಹಲವು ಖಾಯಿಲೆಗಳ ಉಲ್ಬಣಕ್ಕೆ ಮದ್ಯ ಸೇವನೆಯೇ ಕಾರಣವಾಗಿದೆ.ಮದ್ಯಮುಕ್ತರಾದರೆ ಆರೋಗ್ಯವನ್ನು ರಕ್ಷಿಸಬಹುದಾಗಿದೆ ಎಂದ ಅವರು ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹಗ್ಗೆಡಯವರ ಕೊಡುಗೆಯನ್ನು ಕೊಂಡಾಡಿದರು. ಸಂಪೂರ್ಣ ಸುರಕ್ಷಾ ಯೋಜನೆ ಉತ್ತಮ ಯೋಜನೆ ಆದರೆ ಮದ್ಯಸೇವನೆಯಿಂದ ಖಾಯಿಲೆ ಉಲ್ಬಣಿಸಿದೆ ಎಂದು ವೈದ್ಯರು ಕೇಸ್‌ಶೀಟ್‌ನಲ್ಲಿ ಬರೆದರೆ ವಿಮೆಯನ್ನು ಕ್ಲೈಂ ಮಾಡಲು ಆಗುವುದಿಲ್ಲ ಎಂದವರು ಹೇಳಿದರು.
ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷೆ ವಿಮಲಾ ರಂಗಯ್ಯ ಮಾತನಾಡಿ, ಈ ವರೆಗೆಗಿನ 990 ಶಿಬಿರಗಳಲ್ಲಿ ಭಾಗವಹಿಸಿದವರಲ್ಲಿ ಶೇ.80ರಷ್ಟು ಮಂದಿ ಇಂದು ಮದ್ಯಮುಕ್ತರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದರು.
ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಎನ್.ಎ.ರಾಮಚಂದ್ರ, ಸುಳ್ಯ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಮಾಧವ, ಸದಸ್ಯರಾದ ಪ್ರಕಾಶ್ ಹೆಗ್ಡೆ, ಗೋಪಾಲ ಎಸ್. ನಡುಬೈಲು ಅತಿಥಿಗಳಾಗಿದ್ದರು. ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಜನಜಾಗೃತಿ ವೇದಿಕೆಯ ಪಿ.ಸಿ.ಜಯರಾಮ, ಎಂ.ವೆಂಕಪ್ಪ ಗೌಡ, ಚಂದ್ರಾ ಕೋಲ್ಚಾರ್, ಜನಜಾಗೃತಿ ವೇದಿಕೆಯ ನಿಯೋಜಿತ ಅಧ್ಯಕ್ಷ ಮಹೇಶ್ ರೈ ಮೇನಾಲ, ಮಲ್ಲೇಶ ಬೆಟ್ಟಂಪಾಡಿ, ವಲಯಾಧ್ಯಕ್ಷರುಗಳಾದ ಮಾಧವ ಗೌಡ ದೊಡ್ಡಿಹಿತ್ಲು, ರಘುನಾಥ ಶೆಟ್ಟಿ ಎಣ್ಮೂರು, ಲೋಕೇಶ್ ಪೀರನಮನೆ, ಮೋನಪ್ಪ ಬೊಳ್ಳಾಜೆ, ಪದ್ಮನಾಭ ಶೆಟ್ಟಿ, ಶಿವಪ್ರಸಾದ್ ಮಾದನಮನೆ, ಜಗನ್ಮೋಹನ ರೈ ರೆಂಜಾಳ, ಶಿಬಿರಾಧಿಕಾರಿ ದೇವಿಪ್ರಸಾದ್ ಯೋಜನಾಧಿಕಾರಿ ಯುವರಾಜ ಜೈನ್ ವೇದಿಕೆಯಲ್ಲಿದ್ದರು. ಧರ್ಮಸ್ಥಳ ಯೋಜನೆಯ ನಿರ್ದೇಶಕ ಸೀತಾರಾಮ ಶೆಟ್ಟಿ ಸ್ವಾಗತಿಸಿದರು. ಬೂಡು ರಾಧಾಕೃಷ್ಣ ರೈ ನಿರೂಪಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ಸುಳ್ಯ, ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಸುಳ್ಯ, ನ.ಪಂ. ಸುಳ್ಯ, ಜನಜಾಗೃತಿ ವೇದಿಕೆ ಸುಳ್ಯ ತಾಲ್ಲೂಕು, ಶ್ರೀ ಭಗವತಿ ಯುವ ಸೇವಾ ಸಮಗ ಬೂಡು-ಕೇರ್ಪಳ-ಕುರುಂಜಿಗುಡ್ಡೆ, ಪಯಸ್ವಿನಿ ಯುವಕ ಮಂಡಲ ಕೇರ್ಪಳ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಮತ್ತು ನವಜೀವನ ಸಮಿತಿಗಳು ಸುಳ್ಯ ತಾಲ್ಲೂಕು, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಊರ ದಾನಿಗಳ ಆಶ್ರಯದಲ್ಲಿ 1000ನೇ ಮದ್ಯವರ್ಜನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಒಂದು ವಾರಗಳ ಕಾಲ ನಡೆಯುವ ಶಿಬಿರದಲ್ಲಿ ವ್ಯಾಯಾಮ, ಸ್ವಚ್ಛತೆ ಪಾಠ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ಕೌಟುಂಬಿಕ ಸಲಹೆ, ಸಾಂಸ್ಕೃತಿಕ ಕಾರ್ಯಕ್ರಮ, ಭಜನೆಗಳು ನಡೆಯಲಿದೆ.







