ಮಂಗಳೂರು: ತಾಯಿ, ಮಗಳು ನಾಪತ್ತೆ
ಮಂಗಳೂರು, ಸೆ. 24: ತಾಯಿ ಮತ್ತು ಮಗಳು ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಜಾಲ್‌ನ ಮುಸ್ಕಾನ್ ಕಾಟೇಜ್ ನಿವಾಸಿ ತಾಹೀರಾ ಬಾನು ಮತ್ತಾಕೆಯ 9 ವರ್ಷದ ಮಗಳು ಅಫ್‌ಶೀನಾ ಕಾಣೆಯಾದವರು.
ತಾಹೀರಾ ಅವರನ್ನು 2005ರಲ್ಲಿ ಖಾದರ್ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಅಫ್‌ಶೀನ್ ಹೆಣ್ಣುಮಗು ಇದ್ದು, ಕಳೆದ ಒಂದು ವರ್ಷದಿಂದ ಗಂಡನಿಂದ ಬೇರ್ಪಟ್ಟು ತಾಯಿ, ಮಗಳು ಆಕೆಯ ಅಕ್ಕ ಮುನೀರಾ ಎಂಬವರೊಂದಿಗೆ ವಾಸವಾಗಿದ್ದರು. ಆದರೆ, ಸೆ. 20ರಂದು ಹೆಳಗ್ಗೆ 11 ಗಂಟೆಗೆ ಬೊಂದೇಲ್ನಲ್ಲಿರುವ ಗುರುಗಳನ್ನು ಭೇಟಿ ಮಾಡಿ ಬರುವುದಾಗಿ ಹೇಳಿ ಅಫ್‌ಶೀನಾಳೊಂದಿಗೆ ಮನೆಯಿಂದ ಹೊರ ಹೋದವರು ಮತ್ತೆ ವಾಪಾಸು ಬಾರದೆ ಕಾಣೆಯಾಗಿದ್ದಾರೆ ಎಂದು ಮುನೀರಾ ಪೋಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





