ಮೊದಲ ಟೆಸ್ಟ್‌ನಲ್ಲಿ ಭಾರತ ಮೇಲುಗೈ
ಜಡೇಜ - ಅಶ್ವಿನ್‌ದಾಳಿಗೆ ತತ್ತರಿಸಿದ ಕಿವೀಸ್

ಕಾನ್ಪುರ, ಸೆ.24: ಗ್ರೀನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ.
ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ ಮತ್ತು ರವಿಚಂದ್ರನ್ ಅಶ್ವಿನ್ ಅವರ ಸ್ಪಿನ್ ದಾಳಿಗೆ ತತ್ತರಿಸಿದ ನ್ಯೂಝಿಲೆಂಡ್ ಮೊದಲ ಇನಿಂಗ್ಸ್‌ನ್ನು 95.5 ಓವರ್‌ಗಳಲ್ಲಿ 262 ರನ್‌ಗಳಿಗೆ ಮುಗಿಸಿದೆ.
ದಿನದಾಟದಂತ್ಯಕ್ಕೆ ಭಾರತ ಎರಡನೆ ಇನಿಂಗ್ಸ್‌ನಲ್ಲಿ 47 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 159 ರನ್ ಗಳಿಸಿದೆ.
ಆರಂಭಿಕ ದಾಂಡಿಗ ಮುರಳಿ ವಿಜಯ್ 64 ರನ್ ಮತ್ತು ಚೇತೇಶ್ವರ ಪೂಜಾರ ಔಟಾಗದೆ 50 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಭಾರತ 215 ರನ್‌ಗಳ ಮುನ್ನಡೆ ಸಾಧಿಸಿದೆ. ವಿಜಯ್ ಮತ್ತು ಪೂಜಾರ ಮುರಿಯದ ಜೊತೆಯಾಟದಲ್ಲಿ ಎರಡನೆ ವಿಕೆಟ್‌ಗೆ 107 ರನ್‌ಗಳನ್ನು ಸೇರಿಸಿ ಬ್ಯಾಟಿಂಗ್‌ನ್ನು ನಾಲ್ಕನೆ ದಿನಕ್ಕೆ ಕಾಯ್ದಿರಿಸಿದ್ದಾರೆ.
ಮೊದಲ ಇನಿಂಗ್ಸ್‌ನಲ್ಲಿ ನ್ಯೂಝಿಲೆಂಡ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ್ದ ಭಾರತ 56 ರನ್‌ಗಳ ಮುನ್ನಡೆ ಸಾಧಿಸಿತ್ತು.
ಎರಡನೆ ಇನಿಂಗ್ಸ್ ಆರಂಭಿಸಿದ ಮುರಳಿ ವಿಜಯ್ ಮತ್ತು ಲೋಕೇಶ್ ರಾಹುಲ್ ಮೊದಲ ವಿಕೆಟ್‌ಗೆ 52 ರನ್‌ಗಳನ್ನು ಸೇರಿಸಿದರು. ನ್ಯೂಝಿಲೆಂಡ್‌ನ ಸ್ಪಿನ್ನರ್ ಐಶ್ ಸೋಧಿ ಅವರು ರಾಹುಲ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.
ವಿಜಯ್ 13ನೆ ಅರ್ಧಶತಕ ದಾಖಲಿಸಿದರು. 7 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರು. ಪೂಜಾರ 8 ಬೌಂಡರಿ ಬಾರಿಸಿದರು. ಅವರು 36ನೆ ಟೆಸ್ಟ್‌ನಲ್ಲಿ ಎಂಟು ಬೌಂಡರಿಗಳ ಸಹಾಯದಿಂದ 8ನೆ ಅರ್ಧಶತಕ ದಾಖಲಿಸಿದರು.
ನ್ಯೂಝಿಲೆಂಡ್ ದಿಢೀರನೆ ಕುಸಿತ: ಇಂದು ಬೆಳಗ್ಗೆ ನ್ಯೂಝಿಲೆಂಡ್ ಮೂರನೆ ದಿನದ ಆಟ ಮುಂದುವರಿಸಿತು. ಎರಡನೆ ದಿನ ಮಳೆಯಿಂದಾಗಿ ಆಟ ಸ್ಥಗಿತಗೊಂಡಾಗ ನ್ಯೂಝಿಲೆಂಡ್ 47 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 152 ರನ್ ಗಳಿಸಿತ್ತು. ಲಥಾಮ್ 56ರನ್ ಮತ್ತು ವಿಲಿಯಮ್ಸನ್ 65 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಇಂದು ಈ ಮೊತ್ತಕ್ಕೆ 110 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ.
ದಿನದ ಐದನೆ ಓವರ್‌ನಲ್ಲಿ ಆಫ್ ಸ್ಪಿನ್ನರ್ ಲಥಾಮ್ ಅವರನ್ನು ಅಶ್ವಿನ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. 54 ರನ್ ಗಳಿಸಿದ ಲಥಾಮ್ ನಿರ್ಗಮನದೊಂದಿಗೆ ಲಥಾಮ್ ಮತ್ತು ವಿಲಿಯಮ್ಸನ್ ಅವರ 124 ರನ್‌ಗಳ ಜೊತೆಯಾಟ ಕೊನೆಗೊಂಡಿತು.
ಎಡಗೈ ಬ್ಯಾಟ್ಸ್‌ಮನ್ ಲಥಾಮ್ ನಿನ್ನೆಯ ಮೊತ್ತಕ್ಕೆ ಕೇವಲ 2 ರನ್ ಸೇರಿಸಿದ್ದರು.ರಾಸ್ ಟೇಲರ್ ಎದುರಿಸಿದ ಎರಡನೆ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದರು. ವಿಲಿಯಮ್ಸನ್ 75 ರನ್ ಗಳಿಸಿ ಶತಕದ ಕಡೆಗೆ ನೋಡುತ್ತಿದ್ದರು. ಆದರೆ ಅಪಾಯಕಾರಿ ಬ್ಯಾಟ್ಸ್‌ಮನ್ ವಿಲಿಯಮ್ಸನ್ ಅವರು ಅಶ್ವಿನ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಲ್ಯುಕ್ ರೊಂಚಿ 38 ರನ್ ಗಳಿಸಿ ಜಡೇಜಗೆ ವಿಕೆಟ್ ಒಪ್ಪಿಸಿದರು. ಐದನೆ ವಿಕೆಟ್‌ಗೆ ರೊಂಚಿ ಮತ್ತು ಸ್ಯಾಂಟ್ನೆರ್ 49 ರನ್‌ಗಳ ಜೊತೆಯಾಟ ನೀಡಿದರು.
95ನೆ ಓವರ್‌ನಲ್ಲಿ ಜಡೇಜಗೆ ಹ್ಯಾಟ್ರಿಕ್ ಅವಕಾಶ ತಪ್ಪಿತು. ಸ್ಯಾಂಟ್ನೆರ್ 32 ರನ್ ಗಳಿಸಿ ಔಟಾದರು.
94.2ನೆ ಓವರ್‌ನಲ್ಲಿ ಕ್ರೇಗ್ (0) ಅವರನ್ನು ಜಡೇಜ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. 94.3ನೆ ಓವರ್‌ನಲ್ಲಿ ಸೋಧಿ (0)ಎದುರಿಸಿದ ಮೊದಲ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದರು. ಮುಂದಿನ ಎಸೆತದಲ್ಲಿ ಜಡೇಜಗೆ ಹ್ಯಾಟ್ರಿಕ್ ಅವಕಾಶ ಇತ್ತು.
ಆದರೆ ಟ್ರೆಂಟ್ ಬೌಲ್ಟ್ ಇದಕ್ಕೆ ಅವಕಾಶ ನೀಡಲಿಲ್ಲ. ಆ ಓವರ್‌ನ ಕೊನೆಯ ಎಸೆತದಲ್ಲಿ ಟ್ರೆಂಟ್ ಬೌಲ್ಟ್ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಜಡೇಜ ಹ್ಯಾಟ್ರಿಕ್ ಪಡೆಯದಿದ್ದರೂ ಒಂದೇ ಓವರ್‌ನಲ್ಲಿ3 ವಿಕೆಟ್ ಪಡೆದರು. 34 ಓವರ್‌ಗಳಲ್ಲಿ 73ಕ್ಕೆ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.
ಅಂತಿಮವಾಗಿ ವಿಕೆಟ್ ಕೀಪರ್ ಬಿಜೆ ವಾಟ್ಲಿಂಗ್ ಅವರು ಅಶ್ವಿನ್ ಎಸೆತದಲ್ಲಿ ರಿಟರ್ನ್ ಕ್ಯಾಚ್ ನೀಡಿ ನಿರ್ಗಮಿಸುವುದರೊಂದಿಗೆ ನ್ಯೂಝಿಲೆಂಡ್ ಆಲೌಟಾಯಿತು. ಅಶ್ವಿನ್ 93ಕ್ಕೆ 4 ವಿಕೆಟ್ ಮತ್ತು ಉಮೇಶ್ ಯಾದವ್ 33ಕ್ಕೆ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ಭಾರತ ಪ್ರಥಮ ಇನಿಂಗ್ಸ್: 97 ಓವರ್‌ಗಳಲ್ಲಿ 318 ರನ್‌ಗೆ ಆಲೌಟ್
ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್: 95.5 ಓವರ್‌ಗಳಲ್ಲಿ 262 ರನ್‌ಗೆ ಆಲೌಟ್
ಗಪ್ಟಿಲ್ ಎಲ್‌ಬಿಡಬ್ಲು ಯಾದವ್ 21
ಲಥಾಮ್ ಎಲ್‌ಬಿಡಬ್ಲು ಅಶ್ವಿನ್ 58
ವಿಲಿಯಮ್ಸನ್ ಬಿ ಅಶ್ವಿನ್ 75
ರಾಸ್ ಟೇಲರ್ ಎಲ್‌ಬಿಡಬ್ಲು ಜಡೇಜ 00
ರೊಂಚಿ ಎಲ್‌ಬಿಡಬ್ಲು ಜಡೇಜ 38
ಸ್ಯಾಂಟ್ನರ್ ಸಿ ಸಹಾ ಬಿ ಅಶ್ವಿನ್ 32
ವಾಟ್ಲಿಂಗ್ ಸಿ ಮತ್ತು ಬಿ ಅಶ್ವಿನ್ 21
ಕ್ರೆಗ್ ಎಲ್‌ಬಿಡಬ್ಲು ಜಡೇಜ 02
ಸೋಧಿ ಎಲ್‌ಬಿಡಬ್ಲು ಜಡೇಜ 00
ಬೌಲ್ಟ್ ಸಿ ಶರ್ಮ ಬಿ ಜಡೇಜ 00
ವಾಗ್ನರ್ ಔಟಾಗದೆ 00
ಇತರ 15
ವಿಕೆಟ್ ಪತನ: 1-35, 2-159, 3-160, 4-170, 5-219, 6-255, 7-258, 8-258, 9-258, 10-262.
ಬೌಲಿಂಗ್ ವಿವರ:ಮುಹಮ್ಮದ್ ಶಮಿ 11-1-35-0
ಉಮೇಶ್ ಯಾದವ್ 15-5-33-1
ರವೀಂದ್ರ ಜಡೇಜ 34-7-73-5
ಆರ್.ಅಶ್ವಿನ್ 30.5-7-93-4
ಎಂ.ವಿಜಯ್ 4-0-10-0
ರೋಹಿತ್ ಶರ್ಮ 1-0-5-0.
ಭಾರತ ದ್ವಿತೀಯ ಇನಿಂಗ್ಸ್: 47 ಓವರ್‌ಗಳಲ್ಲಿ 159/1
ಕೆಎಲ್ ರಾಹುಲ್ ಸಿ ಟೇಲರ್ ಬಿ ಸೋಧಿ 38
ಮುರಳಿ ವಿಜಯ್ ಔಟಾಗದೆ 64
ಚೇತೇಶ್ವರ ಪೂಜಾರ ಔಟಾಗದೆ 50
ಇತರ 07
ವಿಕೆಟ್ ಪತನ: 1-52
ಬೌಲಿಂಗ್ ವಿವರ:
ಟಿಮ್ ಬೌಲ್ಟ್ 5-0-11-0
ಸ್ಯಾಂಟ್ನರ್ 13-5-33-0
ಕ್ರೆಗ್ 11-1-48-0
ವಾಗ್ನರ್ 8-3-17-0
ಸೋಧಿ 7-2-29-1
ಗಪ್ಟಿಲ್ 3-0-14-0







