Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಉನ್ನತ ಶಿಕ್ಷಣ ಸಂಸ್ಥೆಗಳ ಆತ್ಮಹತ್ಯೆಯ...

ಉನ್ನತ ಶಿಕ್ಷಣ ಸಂಸ್ಥೆಗಳ ಆತ್ಮಹತ್ಯೆಯ ಕಥನಗಳು

ಮಂಜುನಾಥ ನರಗುಂದಮಂಜುನಾಥ ನರಗುಂದ24 Sept 2016 10:45 PM IST
share
ಉನ್ನತ ಶಿಕ್ಷಣ ಸಂಸ್ಥೆಗಳ ಆತ್ಮಹತ್ಯೆಯ ಕಥನಗಳು


ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಾದ ಅಐಐಖ, ಕೇಂದ್ರೀಯ ವಿವಿಗಳು, ಐಐ 
ಯಂತಹ ತಾಂತ್ರಿಕ ಸಂಸ್ಥೆಗಳ ತಾಣಗಳಲ್ಲಿ ಆಗುತ್ತಿರುವ ಕೆಳವರ್ಗದ ಬಡಮಕ್ಕಳ ಇಂತಹ ಆತ್ಮಹತ್ಯೆಗಳು ಒಂದು ರೀತಿಯ ಅಚ್ಚರಿಯ ಜೊತೆಗೆ ಸಂಶಯವನ್ನು ಮೂಡಿಸುತ್ತದೆ. 

  ನನ್ನ ರಾಜ್ಯಶಾಸ್ತ್ರದ ಸ್ನಾತ್ತಕೋತ್ತರ ಕೋರ್ಸ್‌ನ ಅವಧಿ ಮುಗಿದ ಮೂರೂವರೆ ತಿಂಗಳ ನಂತರ ನಾನು ಇತ್ತೀಚೆಗೆ ಮತ್ತೆ ಹೈದರಾಬಾದ್ ಕೇಂದ್ರೀಯ ವಿವಿಗೆ ಹೋಗಿದ್ದೆ. ನಾನು ಅಂತಿಮ ಸೆಮಿಸ್ಟರ್ ಹಂತದಲ್ಲಿದ್ದಾಗ ನಡೆದ ರೋಹಿತ್ ವೇಮುಲಾರ ಸಾಂಸ್ಥಿಕ ಹತ್ಯೆಯ ಪರಿಣಾಮವು ದೇಶದಾದ್ಯಂತ ವಿದ್ಯಾರ್ಥಿ ಚಳ ವಳಿಯಲ್ಲಿ ಒಂದು ರೀತಿಯ ಹೊಸ ಸಂಚಲನ ಮೂಡಿಸಿದ ಘಟನೆಯಾಗಿತ್ತು. ಈ ಘಟನೆಯ ಪರಿಣಾಮದ ಕುರುಹುಗಳನ್ನು ಹುಡುಕುವ ಮತ್ತೊಮ್ಮೆ ಅವಲೋಕನಕ್ಕೆ ಒಳಪಡಿಸುವ ಸಣ್ಣ ಕುತೂಹಲ ನನಗೆ ಈ ಭೇಟಿಯ ಸಂದರ್ಭದಲ್ಲಿತ್ತು.

   ರೋಹಿತ್ ವೇಮುಲಾ ಚಳವಳಿಯ ಕೇಂದ್ರ ಬಿಂದುವಾಗಿದ್ದ ವಿವಿಯ ಉತ್ತರ ಕ್ಯಾಂಪಸ್‌ನ ಭಾಗವಾಗಿದ್ದ ಶಾಪಿಂಗ್ ಕಾಂಪ್ಲೆಕ್ಸ್ ಮಧ್ಯದಲ್ಲಿ ಮುಕ್ಕಾಗಿರುವ ನಗು ಮುಖದ ರೋಹಿತ್ ಸ್ತೂಪ ಹಾಗೂ ಸಾಮಾಜಿಕ ಬಹಿಷ್ಕಾರದ ಪ್ರತೀಕದಂತಿರುವ ವೆಲ್ಲಿವಾಡ(ಟೆಂಟ್) ಈಗ ದುಸ್ಥಿತಿಯಲ್ಲಿದೆ. ಅಲ್ಲದೆ ಹೆಬ್ಬೆರಳನ್ನು ಕತ್ತರಿಸಿದ ಸ್ತಬ್ಧಚಿತ್ರಕ್ಕೆ ಕೂಡ ಅಂಥದ್ದೇ ಸ್ಥಿತಿ. ಯಾವ ಘೋಷಣೆಗಳ ಸದ್ದಿಲ್ಲ, ಮಾಧ್ಯಮದ ಅಂಗಡಿಗಳ ‘ಪೀಪ್ಲಿ ಲೈವ್ ಶೋ’ಗಳ ಭರಾಟೆಯ ಸದ್ದಂತೂ ಇಲ್ಲವೇ ಇಲ್ಲ. ಇನ್ನು ವಿದ್ಯಾರ್ಥಿಗಳ ಧ್ವನಿಯನ್ನು ಕುಗ್ಗಿಸಲು ಚಳವಳಿಯ ಕೇಂದ್ರ ಭಾಗದಲ್ಲಿ ಸಿಸಿ ಕ್ಯಾಮೆರಾಗಳ ಮೂಲಕ ಅವರ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದೆ. ಮತ್ತೆ ಅದೇ ಕುಲಪತಿ, ಅದೇ ವ್ಯವಸ್ಥೆ, ಅದೇ ವಿವಿ ಎಂದಿನಂತೆ ಏನೂ ಆಗಿಲ್ಲವೆನ್ನುವಂತೆ ಕಾರ್ಯ ನಿರ್ವಹಿಸುತ್ತಿದೆ. ಇದು ನನ್ನ ಇತ್ತೀಚಿನ ವಿಶ್ವವಿದ್ಯಾನಿಲಯ ಭೇಟಿಯ ಸಂದರ್ಭದಲ್ಲಿ ಕಂಡು ಬಂದಂತಹ ನೈಜ ಚಿತ್ರಣ. ಸರಿಯಾಗಿ ಈ ಭೇಟಿಯ ಹತ್ತು ದಿನಗಳ ನಂತರ ಮತ್ತೊಂದು ಸುದ್ದಿ. ಪ್ರವೀಣ ಎನ್ನುವ ಹೈದರಾಬಾದ್ ವಿವಿಯ ‘ಸರೋಜಿನಿ ನಾಯ್ಡು ಸ್ಕೂಲ್ ಆಫ್ ಕಮ್ಯೂನಿಕೇಶನ್’ ವಿಭಾಗದ ಪ್ರಥಮ ವರ್ಷದ ಎಂಎಫ್‌ಎ ವಿದ್ಯಾರ್ಥಿಯ ಆತ್ಮಹತ್ಯೆ....!. ಇಲ್ಲಿ ನಾನು ಜನವರಿ 17ರ ರೋಹಿತ್ ವೇಮುಲಾರ ಆತ್ಮಹತ್ಯೆಯಿಂದ ಮೊನ್ನೆಯಷ್ಟೇ ಅಂದರೆ ಸೆಪ್ಟಂಬರ್ 17ರಂದು ನಡೆದ ಪ್ರವೀಣರ ಆತ್ಮಹತ್ಯೆಯವರೆಗೂ ವಿಶ್ವವಿದ್ಯಾನಿಲಯದಲ್ಲಿ ಮತ್ತು ವಿದ್ಯಾರ್ಥಿ ಸಂಘಟನೆಗಳಲ್ಲಿ ಹಾಗೂ ರಾಜಕೀಯ ಪಕ್ಷಗಳಲ್ಲಿ ನಡೆದ ವಿವಿಧ ಘಟನಾವಳಿಗಳನ್ನು ಗಮನಿಸಿದಾಗ ನಾವು ಇನ್ನು ಇತಿಹಾಸದಿಂದ ಪಾಠ ಕಲಿಯದೆ ಇರುವ ಅಂಶ ಸ್ಪಷ್ಟವಾಗಿ ಕಂಡು ಬರುತ್ತದೆ. ಹಾಗಾದರೆ ನಾವು ಇಂತಹ ಗಂಭೀರ ವಿಷಯಗಳನ್ನು ಗ್ರಹಿಸುವಲ್ಲಿ ಎಡವುತ್ತಿರುವುದಾದರೂ ಎಲ್ಲಿ ಎನ್ನುವುದು ಇನ್ನೂ ಕೂಡ ಪ್ರಮುಖ ಪ್ರಶ್ನೆಯಾಗಿದೆ. ಈ ವರ್ಷ ಹೈದರಾಬಾದ್ ವಿವಿಯಲ್ಲಿ ನಡೆದ ಈ ಎರಡು ಆತ್ಮಹತ್ಯೆಗಳಲ್ಲಿ ನಾವು ಹಲವು ವೈರುಧ್ಯ ಅಂಶಗಳನ್ನು ಕಾಣಬಹುದು. ಅಂದರೆ ಇಲ್ಲಿ ರೋಹಿತ್ ವೇಮುಲಾ ರಾಜಕೀಯವಾಗಿ ಸಂಘಟನಾತ್ಮಕ ಹಾಗೂ ಅಕಾಡಮಿಕ್ ದೃಷ್ಟಿಕೋನದಲ್ಲಿ ಖಂಡಿತವಾದಿ ಮತ್ತು ವ್ಯವಸ್ಥೆಯೊಂದಿಗೆ ಪ್ರತಿಭಟನೆಯ ಮೂಲಕ ನೇರ ಹಣಾಹಣಿಗೆ ಇಳಿದಂತಹ ವ್ಯಕ್ತಿಯಾದರೆ, ಪ್ರವೀಣ್ ಅರೆ ಪಟ್ಟಣದ ಭಾಗದಿಂದ ಬಂದಂತಹ ಮತ್ತು ರೋಹಿತ್ ತರಹದ ಯಾವುದೇ ಸಂಘಟನಾತ್ಮಕ ಹಿನ್ನಲೆ ಇರದಂತಹ ತುಂಬಾ ಅಂತರ್ಮುಖಿ ಸ್ವಭಾವದ ವ್ಯಕ್ತಿತ್ವ. ಈ ಎರಡು ವೈರುಧ್ಯದ ವ್ಯಕ್ತಿತ್ವಗಳನ್ನು ಹೊಂದಿರುವ ಇವರ ಆತ್ಮಹತ್ಯೆಗಳನ್ನು ಗಮನಿಸಿದಾಗ ಒಂದು ಅಂಶ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ರೋಹಿತ್‌ರಂತಹ ಬುದ್ದಿವಂತ ಹಾಗೂ ಸಂಘಟನಾತ್ಮಕವಾಗಿ ಕ್ರಿಯಾಶೀಲರಾಗಿರುವ ವಿದ್ಯಾರ್ಥಿಗಳನ್ನು ರಾಜಕೀಯ ಪ್ರಭಾವದ ಮೂಲಕವಾಗಿ ಸಾಂಸ್ಥಿಕ ಹತ್ಯೆ ಮಾಡಿರುವುದು ಒಂದಡೆಯಾದರೆ, ಇನ್ನೊಂದೆಡೆಗೆ ಪ್ರವೀಣ್‌ರಂತಹ ಮುಗ್ದರು ಸಾಮಾಜಿಕ ಅಪಮಾನದ ಮೂಲಕವಾಗಿ ಆತ್ಮಹತ್ಯೆಯಾಗಿರುವಂಥದ್ದು. ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಾದ ಅಐಐಖ, ಕೇಂದ್ರೀಯ ವಿವಿಗಳು, ಐಐ   
 ಯಂತಹ ತಾಂತ್ರಿಕ ಸಂಸ್ಥೆಗಳ ತಾಣಗಳಲ್ಲಿ ಆಗುತ್ತಿರುವ ಕೆಳವರ್ಗದ ಬಡಮಕ್ಕಳ ಇಂತಹ ಆತ್ಮಹತ್ಯೆಗಳು ಒಂದು ರೀತಿಯ ಅಚ್ಚರಿಯ ಜೊತೆಗೆ ಸಂಶಯವನ್ನು ಮೂಡಿಸುತ್ತದೆ. ಹಾಗಾದರೆ ಈ ರೀತಿಯ ಆತ್ಮಹತ್ಯೆಗಳಿಗೆ ನಾವು ದೂರಬೇಕಾಗಿರುವುದು ಯಾರನ್ನು? ವಿದ್ಯಾರ್ಥಿಗಳನ್ನೋ, ಪ್ರಾಧ್ಯಾಪಕರನ್ನೋ, ಅಥವಾ ಇವೆಲ್ಲವೂಗಳ ಸುತ್ತ ಹೆಣೆದಿರುವ ಸಾಮಾಜಿಕ ವ್ಯವಸ್ಥೆಯನ್ನೋ ಎನ್ನುವುದು ಪ್ರಶ್ನೆಯಾಗಿದೆ. ಈ ಸಂದಿಗ್ಧ ಪ್ರಶ್ನೆಯ ಮಧ್ಯದಲ್ಲಿಯೂ ಕೂಡ ಇಂತಹ ಪರಿಸ್ಥಿತಿಗಳಿಗೆ ಕಾರಣರಾದವರನ್ನು ಮುಖ್ಯವಾಗಿ ಪಟ್ಟಿ ಮಾಡಬೇಕಾಗಿರುವುದು ಪ್ರಾಧ್ಯಾಪಕರು, ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಶಾಶ್ವತ ರೂಪದ ಕ್ರಮಕ್ಕೆ ಹೋರಾಟ ಮಾಡದೇ ಇರುವ ವಿದ್ಯಾರ್ಥಿ ಸಂಘಟನೆಗಳು. ಇನ್ನು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಹಿನ್ನೆಲೆಯನ್ನು ಗಮನಿಸಿದಾಗ ನಾವು ಗ್ರಾಮೀಣ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಎನ್ನುವ ಬಹುವಿಭಜಿತ ಹಿನ್ನೆಲೆಗಳಾಗಿ ವರ್ಗೀಕರಿಸಬಹುದು. ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಮುಖ್ಯ ಕಾರಣ ಸಮಾಜದ ಸ್ತರಶ್ರೇಣಿಯಂತೆ ಇಲ್ಲಿಯೂ ಕೂಡ ನಿರ್ಮಿತವಾಗಿರುವ ಶ್ರೇಣೀಕೃತ ಸಾಮಾಜಿಕ ರಚನೆಯಂತಹ ಅಂಶ ಮೂಲ ಕಾರಣಗಳಾಗಿವೆ. ಆದ್ದರಿಂದ ಇಲ್ಲಿ ನಡೆಯುವ ಈ ತಾರತಮ್ಯ ನೀತಿಗಳು ಮುಖ್ಯವಾಗಿ ಈ ಸಾಮಾಜಿಕ ರಚನೆಯ ಯಥಾವತ್ ರೂಪವಾಗಿ ಕಾರ್ಯನಿರ್ವಹಿಸುತ್ತಿರುವುದು ಇಂದಿನ ಆತಂಕಕಾರಿ ಬೆಳವಣಿಗೆಯಾಗಿದೆ. ಒಂದು ಕಡೆ ಉನ್ನತ ಶಿಕ್ಷಣ ಎನ್ನುವುದು ಈ ವರ್ಗಗಳಿಗೆ ಇನ್ನೂ ಮರೀಚಿಕೆಯಾಗಿಯೇ ಉಳಿದಿರುವ ಈ ಸಂದರ್ಭದಲ್ಲಿ ಸತತ ಪರಿಶ್ರಮ ಮತ್ತು ಅಧ್ಯಯನದಿಂದ ಇಂತಹ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೆಟ್ಟಿಲೇರಿರುವ ಮೊದಲನೆ ತಲೆಮಾರಿನ ವಿದ್ಯಾರ್ಥಿಗಳು, ಮುಖ್ಯವಾಗಿ ಎದುರಿಸುವ ಸವಾಲುಗಳೆಂದರೆ ಸಂಪೂರ್ಣಮಯ ಬ್ರಾಹ್ಮಿಣಿಕಲ್ ಆಗಿರುವ ಅಕಾಡಮಿಕ್ ವ್ಯವಸ್ಥೆಗಳು, ಈ ವ್ಯವಸ್ಥೆ ತಮ್ಮ ಬೌದ್ಧಿಕ ಪ್ರಭುತ್ವವನ್ನು ಇಂತಹ ವಿದ್ಯಾರ್ಥಿಗಳ ಮೇಲೆ ತೋರುತ್ತಾ ಆ ಮೂಲಕ ಅವರನ್ನು ಕುಗ್ಗಿಸುವ ಮತ್ತು ಮಾನಸಿಕವಾಗಿ ಹತಾಶೆಗೊಳಪಡಿಸುವುದನ್ನು ಈ ದೇಶದ ಎಲ್ಲ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸ್ಥಾಪಿತವಾಗಿರುವ ಅಂಶಗಳನ್ನು ಗಮನಿಸಬಹುದು. ಇಂದು ನಾವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾಜಿಕ ನ್ಯಾಯದ ಆಶಯಗಳಿಗೆ ಧ್ವನಿಯಾಗಿ ಮಾದರಿಯಾಗಿರುವ ಜೆಎನ್‌ಯುನಂತಹ ವಿವಿಯಲ್ಲಿ ಸರಕಾರ ನಿಗಿದಿಪಡಿಸಿದ ಮೀಸಲಾತಿಯಂತೆ ಪರಿಶಿಷ್ಟ ಜಾತಿಗೆ ಶೇ.15, ಪರಿಶಿಷ್ಟ ಪಂಗಡಕ್ಕೆ ಶೇ.7.5 ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಶೇ.27ರಂತೆ ಮೀಸಲಾತಿಯ ಪ್ರಮಾಣದಷ್ಟು ಬೋಧಕ ವರ್ಗಗಳಿಲ್ಲ ಎನ್ನುವುದು ವಾಸ್ತವ ಕಟುಸತ್ಯವಾಗಿದೆ.

ಇನ್ನೊಂದು ಮುಖ್ಯ ಅಂಶವೆಂದರೆ ಮಂಡಲ್ ಸಮಿತಿಯ ನಂತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿದ ಹಿಂದುಳಿದ ವರ್ಗಗಳ ಪ್ರವೇಶಾತಿಯ ಮಟ್ಟ, ಅದರಲ್ಲೂ ವೈದ್ಯಕೀಯ ಮತ್ತು ತಾಂತ್ರಿಕ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಪ್ರತಿಭಾಹರಣವಾಗುತ್ತಿದೆ ಎನ್ನುವ ವಾದದೊಂದಿಗೆ ಮೀಸಲಾತಿ ವಿರೋಧಿ ಆಂದೋಲನಕ್ಕೆ ಚಾಲನೆ ನೀಡಿದರು. ಅವರ ವಾದದಂತೆ ಮೆರಿಟ್ ಅಥವಾ ಪ್ರತಿಭೆಗೆ ಮನ್ನಣೆ ನೀಡಬೇಕೆನ್ನುವ ನಿಲುವನ್ನು ಮುಂಚೂಣಿಯಲ್ಲಿಟ್ಟು ಆ ಮೂಲಕ ತಮ್ಮ ವಾದಗಳಿಗೆ ಸ್ಪಷ್ಟೀಕರಣ ಕೊಟ್ಟಿರುವಂತದ್ದು. ಆದರೆ ವಾಸ್ತವಿಕವಾಗಿ ಅವರು ಪ್ರತಿಪಾದಿಸುವ ಈ ‘ಪ್ರತಿಭೆ’ಯು ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯ ಹಾಗೂ ಪಾಲಕರ ಪೋಷಣೆಯಿಂದಾಗಿ ಮೂರ್ತರೂಪವನ್ನು ಪಡೆದುಕೊಂಡಿರುವಂತದ್ದು. ಸಾಮಾಜಿಕ ನ್ಯಾಯದ ಆಶಯವು ಅಂಬೇಡ್ಕರ್ ಅವರು ಕಂಡ ಕನಸಾಗಿತ್ತು. ಆದ್ದರಿಂದಲೇ ಅವರು ಸಂವಿಧಾನದ ಚೌಕಟ್ಟಿನಲ್ಲಿ ಇಂತಹ ಆಶಯಗಳನ್ನು ಈಡೇರಿಸುವ ಪ್ರಯತ್ನದ ಫಲವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಒದಗುವ ಮೀಸಲಾತಿಯಂತಹ ಕ್ರಮಗಳಿಂದಾಗಿ ಅಂತಹ ವ್ಯಕ್ತಿಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಿದವು. ಆದರೆ ಈ ಸಮಾಜದ ಒಳಗೊಳ್ಳುವಿಕೆಯ ನೀತಿಗಳಿಂದಾಗಿ ಒಂದು ಕಡೆ ಶ್ರೇಣಿಕೃತ ಸಮಾಜದ ಮೂಲ ರಚನೆಗೆ ಹೊಡೆತ ಬಿದ್ದಿರುವುದಂತೂ ಸತ್ಯ. ಆದ್ದರಿಂದ ಮಂಡಲ್ ವರದಿಯ ಜಾರಿಯ ನಂತರ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಉನ್ನತ ವರ್ಗಗಳು ಇಂತಹ ಮೀಸಲಾತಿ ವಿರೋಧಿ ಚಳುವಳಿಗಳನ್ನು ಆರಂಭಿಸಿದರು. ಆದ್ದರಿಂದ ಈ ಎಲ್ಲ ಹಿನ್ನೆಲೆಗಳ ಭಾಗವಾಗಿ ಇಂದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ಜನರಲ್ ಕೆಟಗರಿ’ ಹಾಗೂ ‘ರಿಸರ್ವ್ಡ್ ಕೆಟಗರಿ’ಗಳ ನಡುವೆ ಒಂದು ರೀತಿ ಶೀತಲ ಸಮರವನ್ನು ಬಿಂಬಿಸುವ ಒಂದು ಪರಿಕ್ರಮ ಪ್ರಾರಂಭವಾಗಿದೆ. ಇದಕ್ಕೆ ವಿದ್ಯಾರ್ಥಿಗಳು, ಪಾಲಕರು, ಪ್ರಾಧ್ಯಾಪಕರು ಹಾಗೂ ಸಾಮಾಜಿಕ ವ್ಯವಸ್ಥೆಯನ್ನೊಳಗೊಂಡ ಈ ಜೋಡನೆಯು ಪೂರಕವಾಗಿಯೇ ಕಾರ್ಯನಿರ್ವಹಿಸುತ್ತಿರುವುದು ವಾಸ್ತವದ ಸಂಗತಿಯಾಗಿದೆ.
 

share
ಮಂಜುನಾಥ ನರಗುಂದ
ಮಂಜುನಾಥ ನರಗುಂದ
Next Story
X