ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
.jpg)
ಉಪ್ಪಿನಂಗಡಿ,ಸೆ.24: ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ 2015-16ನೇ ಸಾಲಿನಲ್ಲಿ 84,16,58,463.77 ಕೋಟಿ ವ್ಯವಹಾರ ನಡೆಸಿ, 43,38,365.05 ಲಕ್ಷ ರೂಪಾಯಿ ಲಾಭ ಗಳಿಸಿದೆ. ಪ್ರಸಕ್ತ ಸಾಲಿನಲ್ಲಿಯೂ ಸಂಘದ ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದ್ದು, ಈ ಬಾರಿಯೂ ಸಂಘವು ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಎಸ್.ತೋಯಜಾಕ್ಷ ಶೆಟ್ಟಿ ತಿಳಿಸಿದರು.
ಸಂಘದ ಸಭಾಂಗಣದಲ್ಲಿ ಸೆ.24ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ವರ್ಷಾಂತ್ಯದಲ್ಲಿ 1260 ಎ ದರ್ಜೆಯ ಹಾಗೂ 2763 ಸಿ ದರ್ಜೆಯ ಸದಸ್ಯರನ್ನು ಹೊಂದಿದ್ದು, 99,47,592 ಲಕ್ಷ ರೂಪಾಯಿ ಪಾಲು ಬಂಡವಾಳವನ್ನು ಹೊಂದಿದೆ. ಇದು ಕಳೆದ ವರ್ಷಕ್ಕಿಂತ ಶೇ.8.38 ವೃದ್ಧಿಯಾಗಿದೆ. ಸಾಲ ಮತ್ತು ಮಾರಾಟ ಜೋಡಣೆಯಂತೆ ರೈತರ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ವರದಿ ವರ್ಷದಲ್ಲಿ 3,46,87,784 ಕೋಟಿ ರೂಪಾಯಿ ಮೌಲ್ಯದ 129 ಟನ್ ಅಡಿಕೆಯನ್ನು ಕ್ಯಾಂಪ್ಕೋ ಮೂಲಕ ವ್ಯವಹಾರ ನಡೆಸಿದೆ. ಸಂಘವು ವರ್ಷಾಂತ್ಯಕ್ಕೆ 8,68,38,500.05 ಕೋಟಿ ಠೇವಣಾತಿಯಿದ್ದು, ಠೇವಣಾತಿ ಸಂಗ್ರಹದಲ್ಲಿ ಶೇ.18.23 ವೃದ್ಧಿಯಾಗಿದೆ. 10 ವರ್ಷದಲ್ಲಿ ಸತತವಾಗಿ ಸಂಘವು ಶೇ.100 ಸಾಲ ವಸೂಲಾತಿ ಮಾಡುತ್ತಿದೆ. ಈ ಯಶಸ್ಸಿಗೆ ಸಂಘದ ಸದಸ್ಯರು, ಗ್ರಾಹಕರು, ಠೇವಣಿದಾರರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಂಘದ ಸಿಬ್ಬಂದಿ ಕಾರಣವಾಗಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಹಿರಿಯ ಸದಸ್ಯರಾದ ಬಾಬು ಪೂಜಾರಿ ಕುರಿಯ, ಬಾಬು ಮೂಲ್ಯ, ಜನಾರ್ದನ ಆಚಾರ್ಯ, ವಿಠಲ ರೈ, ರಮಾನಾಥ ನಾಯಕ್, ನಾರಾಯಣ ಭಟ್, ಈಶ್ವರ ಭಟ್, ರಾಮಣ್ಣ ನಾಯಕ್ ನೂಜಿನಡ್ಕ, ಸಂಜೀವ, ವಿಜಯಕುಮಾರ್, ಜೊಸೇಫ್ ಪಿರೇರಾ, ಹೀನಾನ್ ಫೆರ್ನಾಂಡೀಸ್, ತುಕ್ರ ಮುಗೇರ, ರಕ್ಮ ಪೂಜಾರಿ, ನಾರಾಯಣ ಶೆಟ್ಟಿ, ವೀರಪ್ಪ ಗೌಡ, ಕೃಷ್ಣ ಅಗರ್ತಬೈಲು, ಮುಹಮ್ಮದ್ ಕುಂಞಿ ಕುರಿಯ, ತಿಮ್ಮಪ್ಪ ಪೂಜಾರಿ, ಮಾಯಿಲಪ್ಪ ನಾಯ್ಕ, ಗಿರಿಯಪ್ಪ ಆಚಾರ್ಯ, ಶಿವಪ್ಪ ಮೂಲ್ಯ, ಪದ್ಮಾವತಿ, ಗಿರಿಜಾ, ಬಾಬು ನಾಯ್ಕ ಹೊಳೆಬದಿ, ನರಸಿಂಹ ನಾಯಕ್ ಪೆರ್ನೆ, ಯಮುನಾ, ತಿಮ್ಮಪ್ಪ ಗೌಡ, ಶಂಕರ ನಾರಾಯಣ ಭಟ್, ಭೀಪಾತುಮ ಕಡಂಬು ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಅಬ್ದುಲ್ ಶಾಫಿ, ನಿರ್ದೇಶಕರಾದ ಡಾ. ರಾಜಗೋಪಾಲ್ ಶರ್ಮ, ಗೋಪಾಲ ಶೆಟ್ಟಿ ಎಸ್., ನೀಲಪ್ಪ ಗೌಡ, ತನಿಯಪ್ಪ ಪೂಜಾರಿ, ಲಕ್ಷ್ಮಣ ನಾಯ್ಕ, ಜಯಲಕ್ಷ್ಮಿ, ರೇವತಿ, ಗ್ರೇಟ್ಟಾ ಪಿಂಟೋ ಹಾಗೂ ಆರ್ಥಿಕ ಬ್ಯಾಂಕ್‌ನ ಪ್ರತಿನಿಧಿ ಯೊಗೀಶ್ ಎಚ್. ಉಪಸ್ಥಿತರಿದ್ದರು. ಸಂಘದ ಸದಸ್ಯರಾದ ಉಮಾನಾಥ ಶೆಟ್ಟಿ, ಶ್ರೀಧರ್ ಗೌಡ, ವಿಶ್ವನಾಥ್ ಶೆಟ್ಟಿ, ಮಿತ್ರದಾಸ್ ರೈ, ಸುಂದರ ರೈ, ಮೋನಪ್ಪ ಗೌಡ, ಶಶಿಕಲಾ, ಕುಸುಮಾಧರ ಗೌಡ, ಕೃಷ್ಣ ನಾಯಕ್, ನರಸಿಂಹ ನಾಯಕ್, ಶಂಕರ್ ಭಟ್, ನಾರಾಯಣ ಭಟ್, ಪ್ರಕಾಶ್ ನಾಯಕ್, ನವೀನ್ ಬರೆಪ್ಪಾಡಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಡಿ. ವರದಿ ವಾಚಿಸಿದರು. ಸಂಘದ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ ಸ್ವಾಗತಿಸಿ, ವಂದಿಸಿದರು.







