ಪಾಕಿಸ್ತಾನದ ವಾಣಿಜ್ಯ ವಸ್ತುಪ್ರದರ್ಶನ ರದ್ದು
ಞಇಸ್ಲಾಮಾಬಾದ್, ಸೆ. 24: ಮುಂದಿನ ತಿಂಗಳು ಭಾರತದಲ್ಲಿ ನಡೆಯಬೇಕಾಗಿದ್ದ ವ್ಯಾಪಾರ ಪ್ರದರ್ಶನವೊಂದನ್ನು ಪಾಕಿಸ್ತಾನ ರದ್ದುಪಡಿಸಿದೆ.
ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಸೇನಾ ನೆಲೆಯೊಂದರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯ ಬಳಿಕ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಈ ಕ್ರಮ ತೆಗೆದುಕೊಂಡಿದೆ.
‘ಆಲಿಶಾನ್ ಪಾಕಿಸ್ತಾನ್ ಎಕ್ಸಿಬಿಶನ್’ನ ಮೂರನೆ ಆವೃತ್ತಿ ಹೊಸದಿಲ್ಲಿಯಲ್ಲಿ ಅಕ್ಟೋಬರ್‌ನಲ್ಲಿ ನಡೆಯಬೇಕಾಗಿತ್ತು.
Next Story





