‘ವಿದೇಶಿ ಆಕ್ರಮಣ ನಡೆದರೆ ಪಾಕ್‌ಗೆ ಚೀನಾದ ಬೆಂಬಲ’
ಲಾಹೋರ್, ಸೆ. 24: ಯಾವುದೇ ‘ವಿದೇಶಿ’ ಆಕ್ರಮಣ ಉಂಟಾದ ಸಂದರ್ಭದಲ್ಲಿ ಬೆಂಬಲ ನೀಡುವುದಾಗಿ ಚೀನಾ ಪಾಕಿಸ್ತಾನಕ್ಕೆ ಭರವಸೆ ನೀಡಿದೆ ಹಾಗೂ ಕಾಶ್ಮೀರ ವಿವಾದದಲ್ಲೂ ಪಾಕ್‌ನ ನಿಲುವನ್ನು ಅದು ಬೆಂಬಲಿಸಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ. ಲಾಹೋರ್‌ನಲ್ಲಿ ಪಂಜಾಬ್ ಮುಖ್ಯಮಂತ್ರಿ ಶಹಬಾಝ್ ಶರೀಫ್ ಜೊತೆ ನಡೆಸಿದ ಮಾತುಕತೆಯ ವೇಳೆ ಲಾಹೋರ್‌ನಲ್ಲಿ ಚೀನಾದ ಕಾನ್ಸುಲ್ ಜನರಲ್ ಆಗಿರುವ ಯು ಬೊರೆನ್ ಈ ಭರವಸೆ ನೀಡಿದ್ದಾರೆ ಎಂದು ‘ಡಾನ್’ ವರದಿ ಮಾಡಿದೆ.
Next Story





