ಅಲೆಪ್ಪೊದಲ್ಲಿ ವಾಯು ದಾಳಿ: 25 ನಾಗರಿಕರು ಹತ
ಬೆರೂತ್, ಸೆ. 24: ಬಂಡುಕೋರರ ನಿಯಂತ್ರಣದಲ್ಲಿರುವ ಅಲೆಪ್ಪೊದ ಪೂರ್ವ ಭಾಗದಲ್ಲಿ ಶನಿವಾರ ರಶ್ಯ ಮತ್ತು ಸಿರಿಯದ ಪಡೆಗಳು ನಡೆಸಿದ ಭೀಕರ ವಾಯು ದಾಳಿಯಲ್ಲಿ ಕನಿಷ್ಠ 25 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯನ್ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ. ಉಪನಗರ ಬುಸ್ತಾನ್ ಅಲ್-ಕಸರ್‌ನ ಮಾರುಕಟ್ಟೆಯೊಂದರಲ್ಲಿ ಸಾಮಾನು ಖರೀದಿಸಲು ಸರದಿಯಲ್ಲಿ ನಿಂತಿದ್ದ ಏಳು ಮಂದಿ ದಾಳಿಯಲ್ಲಿ ಮೃತಪಟ್ಟವರಲ್ಲಿ ಸೇರಿದ್ದಾರೆ ಎಂದು ಬ್ರಿಟನ್‌ನಲ್ಲಿ ನೆಲೆ ಹೊಂದಿರುವ ವೀಕ್ಷಣಾಲಯ ತಿಳಿಸಿದೆ.
Next Story





