ಗುಜರಾತ್: 52,000 ಸರಕಾರಿ ಹುದ್ದೆಗಳಿಗೆ ಇಬಿಸಿ ಕೋಟಾ ಜಾರಿ ಸದ್ಯಕ್ಕೆ ಅಮಾನತು
ಅಹ್ಮದಾಬಾದ್, ಸೆ.24: ಅಧ್ಯಯನಪೂರ್ಣ ಕ್ರಮವೊಂದರಲ್ಲಿ ಗುಜರಾತ್ ಸರಕಾರವು ಆರ್ಥಿಕವಾಗಿ ದುರ್ಬಲ ವರ್ಗ(ಇಬಿಸಿ)ಗಳಿಗಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಗಳಿಗೆ ಮತ್ತು ಮುಂಬರುವ ಸುಮಾರು 52,000 ಸರಕಾರಿ ಹುದ್ದೆಗಳಿಗೆ ನೇಮಕಾತಿಯಲ್ಲಿ ಶೇ.10 ಮೀಸಲಾತಿಯ ಅನುಷ್ಠಾನವನ್ನು ಅಮಾನತಿನಲ್ಲಿರಿಸಿದೆ. ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸುವರೆಗೆ 52,000ಕ್ಕೂ ಅಧಿಕ ಹುದ್ದೆಗಳನ್ನು ತುಂಬಲು ಕಳೆದ ಎರಡು ದಶಕಗಳಲ್ಲಿ ಗುಜರಾತ್ ಸರಕಾರದ ಅತ್ಯಂತ ದೊಡ್ಡ ನೇಮಕಾತಿ ಪ್ರಕ್ರಿಯೆಯನ್ನು ಸದ್ಯಕ್ಕೆ ಅಮಾನತಿನಲ್ಲಿರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಶುಕ್ರವಾರ ಹೇಳಿದ್ದು ಮಹತ್ವದ್ದಾಗಿದೆ. ಇಬಿಸಿ ಕೋಟಾ ಆಧಾರದಲ್ಲಿ ನಡೆಸಲಾಗಿರುವ 3000ಕ್ಕೂ ಅಧಿಕ ವೈದ್ಯಕೀಯ ಸೀಟುಗಳ ಆಯ್ಕೆಗೆ ಸಂಬಂಧಿಸಿದಂತೆ ಪ್ರವೇಶ ಪ್ರಕ್ರಿಯೆ ಅಬಾಧಿತವಾಗಿರಲಿದೆ ಎಂದು ಪಟೇಲ್ ಸ್ಪಷ್ಟಪಡಿಸಿದ್ದಾರೆ.
ಪಾಟಿದಾರ್ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ವರ್ಷದ ಮೇ 1ರಂದು ಆನಂದಿ ಬೆನ್ ಪಟೇಲ್ ಸರಕಾರವು ಅಧ್ಯಾದೇಶವೊಂದರ ಮೂಲಕ ಇಬಿಸಿ ಕೋಟಾವನ್ನು ಘೋಷಿಸಿತ್ತು.





