Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ರಾಹುಲ್ ಅನುಯಾಯಿ

ರಾಹುಲ್ ಅನುಯಾಯಿ

ವಾರ್ತಾಭಾರತಿವಾರ್ತಾಭಾರತಿ25 Sept 2016 12:07 AM IST
share
ರಾಹುಲ್ ಅನುಯಾಯಿ

ರಾಹುಲ್‌ ಗಾಂಧಿಯವರ ಉತ್ತರ ಪ್ರದೇಶ ಪ್ರವಾಸ ಒಂದಷ್ಟು ಪುಳಕಕ್ಕೆ ಕಾರಣವಾಗಿದೆ. ಆದರೆ ಚುನಾವಣಾ ಪ್ರತಿಫಲ ಮಾತ್ರ ದೂರದ ಕನಸಾಗಿಯೇ ಉಳಿದಿದೆ. ಆದರೆ ರಾಹುಲ್ ಅವರ ದಲಿತ ಕುಟುಂಬಗಳನ್ನು ಓಲೈಸುವ ನೀತಿ ಮಾತ್ರ ಪಕ್ಷದಲ್ಲೇ ಆತಂಕಕ್ಕೆ ಕಾರಣವಾಗಿದೆ. ಒಂದು ಹಂತದಲ್ಲಿ ಅವರಿಗೆ ಆತಿಥ್ಯ ನೀಡಿದ ಮಾವ್ ದಲಿತ ಕುಟುಂಬಕ್ಕೇ ಇದು ಆತಂಕ ಮೂಡಿಸಿತು. ಮಾವ್ ಪ್ರದೇಶದ ದಲಿತ ಕುಟುಂಬ, ರಾಹುಲ್ ಅವರ ಆತಿಥ್ಯಕ್ಕಾಗಿಯೇ ಸಾಲ ಮಾಡಬೇಕಾದ ಪರಿಸ್ಥಿತಿ ಇತ್ತು. ಆದರೆ ರಾಹುಲ್ ಅವರಿಗೆ ಆತಿಥ್ಯ ನೀಡಿದ ಸ್ವಾಮಿನಾಥ್ ಮಾತ್ರ ಯಾವುದೇ ದೂರು ಹೇಳಿಕೊಳ್ಳಲಿಲ್ಲ. ಅದಕ್ಕೆ ಕಾರಣವೂ ಇರಲಿಲ್ಲ. ಇವರ ಮನೆಯಲ್ಲಿ ವಾಸ್ತವ್ಯ ಹೂಡಲು ರಾಹುಲ್ ನಿರ್ಧರಿಸಿದಾಗ, ಮನೆಯಲ್ಲಿ ಗೋಧಿಹಿಟ್ಟು, ತರಕಾರಿ ಅಥವಾ ಕಾಂಗ್ರೆಸ್ ಉಪಾಧ್ಯಕ್ಷನಿಗೆ ಬಡಿಸಲು ಒಳ್ಳೆಯ ಪಾತ್ರೆಗಳೂ ಇರಲಿಲ್ಲ. ಅವರ ನೆರೆಹೊರೆಯವರು 10 ಕೆಜಿ ಗೋಧಿಹಿಟ್ಟು ನೀಡಿದರು. ಕೆಲ ಸ್ಟೀಲ್ ಪಾತ್ರೆಗಳು ಹಾಗೂ ಲೋಟಗಳನ್ನು ನೀಡಿದರು. ರೋಟಿ ಹಾಗೂ ಆಲೂ ಚೋಕಾವನ್ನು ಇಷ್ಟಪಟ್ಟು ಸೇವಿಸಿ ರಾಹುಲ್ ಇಲ್ಲಿಂದ ತೆರಳಿದ ಕೆಲವೇ ನಿಮಿಷಗಳಲ್ಲಿ, ಸ್ಥಳೀಯ ಸಮಾಜವಾದಿ ಪಕ್ಷದ ಮುಖಂಡರು, ಕಾಂಗ್ರೆಸ್ ಪಕ್ಷವನ್ನು ತೆಗಳಲು ಸ್ವಾಮಿನಾಥ್‌ಗೆ 25 ಸಾವಿರ ರೂಪಾಯಿ ನಗದು ನೀಡಲು ಮುಂದಾದರು. ಆದರೆ ಸ್ವಾಮಿನಾಥ್ ಅದನ್ನು ನಿರಾಕರಿಸಿದರು. ಆದರೆ ತಮಗೆ ರಾಹುಲ್ ನೀಡಿದ ಗೌರವಕ್ಕಾಗಿ ಅಲ್ಲ; ತನ್ನ ತಂದೆ ಕಟ್ಟಾ ಕಾಂಗ್ರೆಸ್ ಬೆಂಬಲಿಗರಾಗಿದ್ದ ಕಾರಣಕ್ಕೆ!


ದಿಗ್ವಿಜಯ ತಿರುಗುಬಾಣ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅವರೆದುರು ದಿಲ್ಲಿ ಕಚೇರಿಯಲ್ಲಿ ಇತ್ತೀಚೆಗೆ ಕೆಲ ದಿಢೀರ್ ಸಂದರ್ಶಕರು ಪ್ರತ್ಯಕ್ಷರಾದರು. ಅವರು ‘ಗೋರಕ್ಷಾ ಮಂಚ್’ ಹೆಸರಿನ ಸಂಘಟನೆಯ ಗೋರಕ್ಷಕರು. ಹಸುವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಹಾಗೂ ಗೋಹತ್ಯೆಯ ಸಂಪೂರ್ಣ ನಿಷೇಧವಾಗಬೇಕು ಎಂಬ ತಮ್ಮ ಆಗ್ರಹಕ್ಕೆ ಬೆಂಬಲ ನೀಡುವಂತೆ ದಿಗ್ವಿಜಯ ಸಿಂಗ್ ಅವರನ್ನು ಕೋರಲು ಆಗಮಿಸಿದ್ದರು. ಸಿಂಗ್ ಅವರನ್ನು ಕೊಠಡಿಗೆ ಆಹ್ವಾನಿಸಿ, ಕ್ಯಾಮರಾ ಕಣ್ಣುಗಳ ಮುಂದೆಯೇ ಗೋರಕ್ಷಕರಿಗೆ ಉಪನ್ಯಾಸ ಕೊಟ್ಟರು. ಕಾಂಗ್ರೆಸ್ ಪಕ್ಷ ಹೇಗೆ ಸದಾ ಗೋಸಂರಕ್ಷಣೆಯ ಪರವಾಗಿದೆ; ಸಂಘ ಪರಿವಾರ ಹೇಗೆ ಇದೀಗ ಗೋವಿನ ಹೆಸರಿನಲ್ಲಿ ಹಿಂಸೆಯಲ್ಲಿ ತೊಡಗಿದೆ; ಸ್ವಾತಂತ್ರ್ಯಕ್ಕೂ ಮುನ್ನವೇ ತಮ್ಮ ಪಕ್ಷ ಸಂಪೂರ್ಣ ಗೋಹತ್ಯೆ ನಿಷೇಧದ ನಿರ್ಣಯವನ್ನು ಹೇಗೆ ಅಂಗೀಕರಿಸಿತ್ತು ಎಂಬ ಬಗ್ಗೆ ಸುದೀರ್ಘ ಬೋಧನೆ ಮಾಡಿದರು. ಗೋಸಂರಕ್ಷಕರು ಏನು ತಿಳಿದುಕೊಂಡರೋ? ಆದರೆ ಸಿಂಗ್ ಮುಖದಲ್ಲಿ ಮಾತ್ರ ನಸು ನಗೆ ಎಂದಿನಂತೆಯೇ ಇತ್ತು. ತಮ್ಮ ವಿರುದ್ಧ ಬಾಣಪ್ರಯೋಗಕ್ಕೆ ಮುಂದಾಗಿದ್ದ ಗೋರಕ್ಷಕರಿಗೇ ಅದನ್ನು ತಿರುಗಿಸಿದರು.

ಸಿಹಿ ಸಿಹಿ ಮನೆ
ಅಲ್ಪಸಂಖ್ಯಾತರ ಅಭಿವೃದ್ಧಿ ಖಾತೆ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ಇತ್ತೀಚಿನ ದಿನಗಳಲ್ಲಿ ತುಂಬು ಹುಮ್ಮಸ್ಸಿನಲ್ಲಿರುತ್ತಾರೆ. ಇದಕ್ಕೆ ಕಾರಣ ಮನೆ ಬದಲಾವಣೆ. ದಿಲ್ಲಿಯ ಮಂಗಳಕರ ಭವ್ಯ ಬಂಗಲೆಗೆ ಚಿತ್ತೈಸಿದ್ದಾರೆ. ಪ್ರತಿಷ್ಠಿತ ಸಫ್ದರ್‌ಜಂಗ್ ರಸ್ತೆಯ 7ನೆ ನಂಬರ್ ಬಂಗಲೆಯಲ್ಲಿ ವಾಸ. ಅದು 1996ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಮೊಟ್ಟಮೊದಲ ಬಾರಿಗೆ ಪ್ರಧಾನಿಯಾಗಿದ್ದಾಗ ವಾಸವಿದ್ದ ಮನೆ. ನಖ್ವಿ ಸಂತೋಷಕ್ಕೆ ಇನ್ನೂ ಒಂದು ಕಾರಣವಿದೆ. ಸಂಪುಟದಲ್ಲಿ ಇವರಿಗಿಂತ ಹಿರಿಯ ಸ್ಥಾನದಲ್ಲಿದ್ದ ನಜ್ಮಾ ಹೆಫ್ತುಲ್ಲಾ ಅವರು ಮಣಿಪುರಕ್ಕೆ ಗಂಟುಮೂಟೆ ಕಟ್ಟಿದ್ದಾರೆ. ಇವರು ತಮ್ಮ ಸಚಿವಾಲಯದಲ್ಲಿ ಕ್ಷೇತ್ರ ದಿನಾಚರಣೆಯನ್ನೂ ಆಚರಿಸಿದರು. ಆದರೆ ಇವರ ಕಾರ್ಯನಿರ್ವಹಣೆಗೆ ಮಾತ್ರ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗಿಲ್ಲ. ಅವರ ಕೆಲಸಕ್ಕೂ ಹೊಸ ಮನೆ ಅದೃಷ್ಟ ತರುತ್ತದೆಯೇ? ಕಾದುನೋಡಬೇಕು.

ಗಡ್ಕರಿ ಮನಸ್ಸು
ಮುಂಬೈನ ಕಹಿ ಶಬ್ದಗಳಿಗೆ ಒಂದಷ್ಟು ಖಾರ ಬೆರೆಸುವ ನುಡಿಗಳ ಮೂಲಕ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಪಕ್ಷದ ಮಂದಿಗೆ ಕೆಲವೊಮ್ಮೆ ಮುಜುಗರ ತರುತ್ತಾರೆ. ಆದರೆ ಕೆಲವೊಮ್ಮೆ ಅಷ್ಟೇ ಹಾಸ್ಯಪ್ರಿಯರು. ‘ಅಚ್ಛೇ ದಿನ್’ ಎಂಬ ಪದ ಸಂಯೋಜಿಸಿದವರು ಮನಮೋಹನ್ ಸಿಂಗ್ ಹಾಗೂ ನರೇಂದ್ರ ಮೋದಿ ಎಂದು ಗಡ್ಕರಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇಂಡಿಯಾ ಶೈನಿಂಗ್ ಪ್ರಚಾರ ಅಟಲ್ ಬಿಹಾರಿ ವಾಜಪೇಯಿ ಸರಕಾರಕ್ಕೆ ಉರುಳಾದಂತೆ ‘‘ಅಚ್ಛೇ ದಿನ್’’ ತಮ್ಮ ಸರಕಾರಕ್ಕೂ ಉರುಳಾಗುವುದನ್ನು ತಪ್ಪಿಸಿಕೊಳ್ಳಲು ಮೋದಿ ಪ್ರಯತ್ನಿಸುತ್ತಿದ್ದಾರೆಯೇ ಎಂಬ ಸಂಶಯ ಹುಟ್ಟಿಕೊಳ್ಳಲು ಇದು ಕಾರಣವಾಗಿದೆ. ಹಿರಿಯ ಪತ್ರಕರ್ತರೊಬ್ಬರು ಗಡ್ಕರಿಯವರ ಹಾಸ್ಯಪ್ರಜ್ಞೆ ಬಗ್ಗೆ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಬಿಹಾರ ಮೂಲದ ಬಿಜೆಪಿ ನಾಯಕರೊಬ್ಬರು ಹಲವು ಬಾರಿ ಮೋದಿ ಭೇಟಿಗೆ ಪ್ರಯತ್ನಿಸಿ ವಿಫಲರಾದ ಬಳಿಕ ಗಡ್ಕರಿಯವರಿಗೆ ದೂರು ನೀಡಿದರು. ಆಗ ಗಡ್ಕರಿ, ನಿರಾಶರಾಗಬೇಡಿ ಎಂದು ಅವರಿಗೆ ಸಲಹೆ ಮಾಡಿದರು. ಅದಕ್ಕೆ ಅವರು ನೀಡಿದ ಉದಾಹರಣೆ, ಅರೇ, ಮೋದಿ ಪ್ರಧಾನಿಯಾದ ಬಳಿಕ ತಮ್ಮನ್ನು ಹೆತ್ತ ತಾಯಿಯ ಭೇಟಿಗೇ ಅವಕಾಶ ನೀಡಿದ್ದು, ಎರಡು ವರ್ಷಗಳ ಬಳಿಕ. ಅಂಥ ತಾಳ್ಮೆ ನಿಮಗೆ ಬೇಕು. ಮೋದಿ 2014ರ ಮೇ ತಿಂಗಳಲ್ಲಿ ಪ್ರಧಾನಿಯಾದರೂ, ಅವರ ತಾಯಿ ದಿಲ್ಲಿಯಲ್ಲಿ ಮೊದಲ ಬಾರಿಗೆ ಪ್ರಧಾನಿಯನ್ನು ಭೇಟಿ ಮಾಡಿದ್ದು, ಈ ವರ್ಷದ ಮೇ ತಿಂಗಳಲ್ಲಿ. ಇದು ಗಡ್ಕರಿ ಹಾಸ್ಯಪ್ರಜ್ಞೆಗೆ ನಿದರ್ಶನ!

ಪಿಎಂಒ ಸೂಚನೆ-ಸಮಸ್ಯೆ
ದೊಡ್ಡ ಅಧಿಕಾರ ಸಿಕ್ಕಿದಾಗ ದೊಡ್ಡ ಜವಾಬ್ದಾರಿಯೂ ಹೆಗಲಿಗೇರು ತ್ತದೆ ಎನ್ನುವುದು ಕೇಂದ್ರ ಸಚಿವಾಲಯದ ಮುಖ್ಯಸ್ಥರಿಗೆ ನಿಧಾನವಾಗಿ ತಿಳಿಯುತ್ತಿದೆ. ಸಚಿವರು ಹಾಗೂ ಅವರ ಬಾಬೂಗಳು (ಉನ್ನತ ಅಧಿಕಾರಿಗಳು) ತಮ್ಮ ಸಾಧನೆಯನ್ನು ಪ್ರಚುರಪಡಿಸಲು ಸಾಮಾಜಿಕ ಜಾಲತಾಣಗಳನ್ನು ವಿಸ್ತೃತವಾಗಿ ಬಳಸಿಕೊಳ್ಳಬೇಕು ಎಂದು ಪ್ರಧಾನಿ ಕಚೇರಿ ಫರ್ಮಾನು ಹೊರಡಿಸಿದೆ. ಎಲ್ಲ ಸಹೋದ್ಯೋಗಿಗಳೂ ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯರಾಗಿರುವಂತೆ ಸ್ವತಃ ಪ್ರಧಾನಿಯವರು ಎಲ್ಲ ಸಚಿವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ತಮ್ಮ ಸಾಧನೆಗಳನ್ನು ಬಿಂಬಿಸುವ ಮೂಲಕ ಧನಾತ್ಮಕ ಪ್ರಚಾರ ಮಾಡುವಂತೆ ಸಲಹೆ ಮಾಡಿದ್ದಾರೆ. ಆದರೆ ಇದು ವಿಚಿತ್ರವಾಗಿ ಪರಿಣಮಿಸಿದೆ. ರೈಲ್ವೆ ಸರ್ಚಾರ್ಜ್ ದರವನ್ನು ಅನುಸರಿಸಲು ಮುಂದಾದಾಗ ಭಾರಿ ಪ್ರತಿರೋಧ ಎದುರಾಯಿತು. ಇದನ್ನು ಅಧಿಕೃತವಾಗಿ ನಿರ್ವಹಿಸುವವರು ಟೀಕೆಗಳನ್ನು ಮರು ಟ್ವೀಟ್ ಮಾಡುತ್ತಿದ್ದುದು ಪತ್ತೆಯಾಯಿತು. ಇದೀಗ ಪ್ರಧಾನಿ ಕಚೇರಿ, ಇಂಥ ಸಾಮಾಜಿಕ ಜಾಲತಾಣ ನಿರ್ವಹಿಸುವವರು ಏನು ಮಾಡಬೇಕು ಏನು ಮಾಡಬಾರದು ಎಂಬ ಮಾರ್ಗದರ್ಶಿ ಪಟ್ಟಿಯನ್ನು ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಮಾರ್ಗದರ್ಶಿ ಸೂತ್ರಗಳ ಹೊರತಾಗಿಯೂ ಬಾಬೂಗಳನ್ನು ನಂಬುವಂತಿಲ್ಲ. ಮತ್ತೆ ಹೊಸ ತಪ್ಪುಮಾಡಲು ದಾರಿ ಕಂಡುಕೊಳ್ಳಬಹುದು!

share
ವಾರ್ತಾಭಾರತಿ
ವಾರ್ತಾಭಾರತಿ
Next Story
X