ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಕ್ಲೀನ್ ಸಿಟಿ-ಗ್ರೀನ್‌ಸಿಟಿ ವಾಕಥಾನ್

ಮಂಗಳೂರು, ಸೆ.25: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನೇತೃತ್ವದಲ್ಲಿ ಇಂದು ಕ್ಲೀನ್ ಸಿಟಿ-ಗ್ರೀನ್‌ಸಿಟಿ ವಾಕಥಾನ್ ನಡೆಯಿತು. ನಗರದ ನೆಹರೂ ಮೈದಾನದಲ್ಲಿ ವಾಕಥಾನ್‌ಗೆ ಶಾಸಕ ಜೆ.ಆರ್. ಲೋಬೊ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಹಸಿರೀಕಿರಣದ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಈ ಬಗ್ಗೆ ಮೊದಲಿಗೆ ನಮ್ಮಲ್ಲಿ ಜಾಗೃತಿ ಮೂಡಿ, ಇತರರಿಗೆ ಈ ಬಗ್ಗೆ ಜಾಗೃತಿ ಮೂಡಿಸಿ, ಪ್ರೋತ್ಸಾಹ ನೀಡಬೇಕು. ನಗರಕ್ಕೆ ಮತ್ತು ಗ್ರಾಮೀಣ ಭಾಗಗಳಿಗೆ ಹಸಿರೀಕರಣ ಅವಿಭಾಜ್ಯ ಅಂಗ. ಎಲ್ಲರೂ ಸೇರಿ ಹಸಿರೀಕರಣಕ್ಕೆ ಕೈ ಜೋಡಿಸಬೇಕು. ಸರಕಾರ ಮಾತ್ರವಲ್ಲದೆ ಜನರೂ ಈ ಬಗ್ಗೆ ತಮ್ಮ ಕೊಡುಗೆಯನ್ನು ನೀಡಬೇಕು ಎಂದರು.
ಬಿಐಟಿ ಪ್ರಾಂಶುಪಾಲ ಅಬ್ದುಲ್ ಕರೀಂ ಮಾತನಾಡಿ, ಸಾಮಾಜಿಕ ಜಾಗೃತಿ ಮೂಡಿಸಿವುದು ಇಂದಿನ ಅಗತ್ಯ. ಗ್ರೀನ್ ಮತ್ತು ಕ್ಲೀನ್‌ಸಿಟಿಯನ್ನು ಮಾಡುವುದು ನಮ್ಮ ಜವಾಬ್ದಾರಿ. ಮುಂದಿನ ಪೀಳಿಗೆಗೆ ನಾವು ಕ್ಲೀನ್ ಮತ್ತು ಗ್ರೀನ್‌ಸಿಟಿಯನ್ನು ನೀಡಬೇಕಿದೆ ಎಂದರು.
ನೆಹರೂ ಮೈದಾನದಿಂದ ಮಂಗಳಾ ಸ್ಟೇಡಿಯಂವರೆಗೆ ನಡೆದ ವಾಕಥಾನ್‌ನಲ್ಲಿ ಸುಮಾರು 600 ವಿದ್ಯಾರ್ಥಿಗಳು ಪಾಲ್ಗೊಂಡರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಮುಸ್ತಫಾ ಬಸ್ತಿಕೋಡಿ ಮೊದಲಾದವರು ಉಪಸ್ಥಿತರಿದ್ದರು.







