ಪಟಾಕಿ ದುರಂತಕ್ಕೆ ಐವರ ಸಾವು

ಭುವನೇಶ್ವರ್, ಸೆಪ್ಟಂಬರ್ 25: ಒಡಿ ಒಡಿಶಾದ ನಯಾಗಡ್ ಜಿಲ್ಲೆಯ ಪಟಾಕಿಕಾರ್ಖಾನೆಯಲ್ಲಿ ಉಂಟಾದ ಬೆಂಕಿ ಅನಾಹುತದಿಂದ ಮೃತರಾದವರ ಸಂಖ್ಯೆಯ ಐದಕ್ಕೆ ಏರಿದೆ. ಓರ್ವನಮೃತದದೇಹ ನಿನ್ನೆಪತ್ತೆಯಾಗಿತ್ತು. ಗಾಯಾಳುಗಳಲ್ಲಿ ಓರ್ವ ಶುಕ್ರವಾರ ರಾತ್ರಿ ಮೂವರು ಶನಿವಾರ ಮೃತರಾದರು ಎಂದು ವರದಿಯೊಂದು ತಿಳಿಸಿದೆ. ಗಾಯಾಳುಗಳಲ್ಲಿ ಇನ್ನೂ ಆರುಮಂದಿಯ ಆರೋಗ್ಯಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ಸಂಜೆ ಡಾಂತಿ ಸಾಹಿಯ ಪಟಾಕಿ ತಯಾರಿಕಾರ್ಖಾನೆಯಲ್ಲಿಬೆಂಕಿ ಆಕಸ್ಮಿಕ ನಡೆದಿತ್ತು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂದು ಈವರೆಗೂ ಪತ್ತೆಯಾಗಿಲ್ಲ. ಕಾರ್ಖಾನೆಮಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ವರದಿಯಾಗಿದೆ.
Next Story





