ಧೈರ್ಯವಿದ್ದರೆ ಮಾನವಬಾಂಬುಗಳನ್ನು ಪಾಕ್‌ಗೆ ಕಳುಹಿಸಿ: ರಾಜ್‌ಠಾಕ್ರೆಗೆ ಸವಾಲು ಹಾಕಿದ ಸಮಾಜವಾದಿ ಪಾರ್ಟಿ

ಮುಂಬೈ,ಸೆಪ್ಟಂಬರ್ 25: ಪಾಕಿಸ್ತಾನದಿಂದ ಭಾರತಕ್ಕೆ ಬರುವ ಜನರನ್ನು ಬೆದರಿಸುವುದಕ್ಕಿಂತ ಮಾನವಬಾಂಬುಗಳನ್ನುಲಾಹೋರಿಗೋ ಕರಾಚಿಗೋ ಕಳುಹಿಸಿಕೊಡುವುದು ಉತ್ತಮ ಎಂದು ಮಹಾರಾಷ್ಟ್ರ ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಬೂಅಝ್ಮಿ ರಾಜ್‌ಠಾಕ್ರೆಗೆ ಸವಾಲು ಹಾಕಿದ್ದಾರೆ. ಪಾಕಿಸ್ತಾನದ ಕಲಾಕಾರರು 48ಗಂಟೆಯೊಳಗೆ ಭಾರತ ಬಿಟ್ಟು ತೊಲಗಬೇಕೆಂಬ ರಾಜ್‌ಠಾಕ್ರೆಯ ಎಂಎನೆಸ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆಂದು ವರದಿಯಾಗಿದೆ.
ಭಾರತಕ್ಕೆ ಪಾಕಿಸ್ತಾನದಿಂದ ಮಾನವಬಾಂಬ್‌ಗಳುಬರುತ್ತಿವೆ. ಪಾಕಿಸ್ತಾನದವಿರುದ್ಧ ಹೋರಾಡಲು ಲಾಹೋರ್, ಕರಾಚಿಗೆ ಮಾನವಬಾಂಬುಗಳನ್ನು ಕಳುಹಿಸುವುದು ಉತ್ತಮ. ಕಾನೂನುಬದ್ಧವಾಗಿ ಇಲ್ಲಿಗೆ ಬಂದ ಜನರಿಗೆ ಬೆದರಿಕೆ ಹಾಕಿ ಪಾಕಿಸ್ತಾನ ಉತ್ತರ ನೀಡಬೇಕಾಗಿದ್ದು ಎಂದು ಅಝ್ಮಿ ಹೇಳಿದ್ದಾರೆ. ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆಗೆ ಅವರು ತನ್ನ ಸಲಹೆಯನ್ನು ವರ್ಗಾಯಿಸಿದ್ದಾರೆ. ರಾಜ್‌ಠಾಕ್ರೆ ಓರ್ವ ಸಣ್ಣ ನಾಯಕ ಆಗಿದ್ದಾರೆ. ಅವರ ಪಾರ್ಟಿಗೆ ಮಹಾರಾಷ್ಟ್ರದಲ್ಲಿ ಮಾತ್ರ ಪ್ರಭಾವಗಳಿವೆ. ಮಹಾರಾಷ್ಟ್ರದಲ್ಲಿ ನಕ್ಸಲ್‌ಗಳು ಪೊಲೀಸರ ಮೇಲೆ ದಾಳಿ ನಡೆಸುತ್ತಿದ್ದಾರೆ. ಆದ್ದರಿಂದ ಪೊಲೀಸರ ರಕ್ಷಣೆಗಾಗಿ ನವನಿರ್ಮಾಣ ಸೇನೆ ಮೊದಲು ಆದ್ಯತೆ ನೀಡುವುದು ಅಗತ್ಯವಿದೆ ಎಂದು ಅಝ್ಮಿ ಸಲಹೆ ನೀಡಿದ್ದಾರೆ. ಉರಿಯಲ್ಲಿ ಭಯೋತ್ಪಾದನಾ ದಾಳಿಗೆ ಪ್ರತೀಕಾರವೆಸಗುವುದು ಅನಿವಾರ್ಯವೇ ಆದರೂ ಅದಕ್ಕಾಗಿ ಪಾಕಿಸ್ತಾನದ ಕಲಾಕಾರರಿಗೆ ಬೆದರಿಕೆ ಹಾಕಿ ಉತ್ತರ ನೀಡುವುದು ಬೇಡ ಎಂದು ಅಝ್ಮಿ ಖಾರವಾಗಿ ನುಡಿದಿದ್ದಾರೆ.
ಧೈರ್ಯವಿದ್ದರೆ ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯನ್ನು ರಾಜ್‌ಠಾಕ್ರೆ ಮುಚ್ಚಿಸಬೇಕು. ಪಾಕಿಸ್ತಾನಕ್ಕೆ ಭಾರತದ ರಾಯಭಾರ ಕಚೇರಿಯಲ್ಲಿ ವೀಸಾ ನೀಡುವ ಕ್ರಮವನ್ನು ಸ್ಥಗಿತಗೊಳಿಸಲಿ ಎಂದು ಅಝ್ಮಿ ಆಗ್ರಹಿಸಿದ್ದಾರೆ. ಭಾರತದ ಸಿನೆಮಾ, ಟಿವಿಗಳಲ್ಲಿ ಅಭಿನಯಿಸುತ್ತಿರುವ ಪಾಕಿಸ್ತಾನದ ನಟನಟಿಯರುಮತ್ತು ಕಲಾಕಾರರು 48ಗಂಟೆಯೊಳಗೆ ದೇಶತೊರೆಯಬೇಕೆಂದು ರಾಜ್‌ಠಾಕ್ರೆಯ ನವನಿರ್ಮಾಣ ಸೇನೆ ಈ ಹಿಂದೆ ಘೋಷಿಸಿತ್ತು ಎಂದು ವರದಿ ತಿಳಿಸಿದೆ.





