ಈ ಐದನ್ನು ಅನುಸರಿಸಿದರೆ ತೆಳ್ಳಗಿರುವುದು ಕಷ್ಟವಲ್ಲ!
ಕೆಲವರು ಪ್ರಯತ್ನವೇ ಹಾಕದೆ ಸುಂದರವಾಗಿರುತ್ತಾರೆ. ಅವರ ರಹಸ್ಯಗಳು ಏನೆಂದು ನಿಮಗೆ ಅಚ್ಚರಿಯಾಗುತ್ತಿದ್ದಲ್ಲಿ, ಕೆಲವು ವಿಷಯಗಳನ್ನು ಇತ್ತೀಚೆಗಿನ ಅಧ್ಯಯನ ಹೊರ ಹಾಕಿದೆ. ಬಹಳಷ್ಟು ತೆಳುಕಾಯದ ವ್ಯಕ್ತಿಗಳು ಬಹಳ ತೀಕ್ಷ್ಣವಾದ ಶಿಸ್ತಿನ ಆಹಾರ ಸೇವಿಸುವುದು ಅಥವಾ ತೀಕ್ಷ್ಣ ಆರೋಗ್ಯ ಕಾಪಾಡುವ ಪ್ರಯತ್ನವನ್ನು ಆರೋಗ್ಯಕರ ತೂಕಕ್ಕಾಗಿ ಮಾಡುವುದಿಲ್ಲ ಎನ್ನುತ್ತಾರೆ ಡಾ ಬ್ರಿಯಾನ್ ವಾನ್ಸಿಂಕ್. ಸರಳವಾದ ಆರೋಗ್ಯಕರ ನಿತ್ಯದ ಅಭ್ಯಾಸವನ್ನು ಹೊಂದಿದ್ದರೆ ಉತ್ತಮ ಆರೋಗ್ಯ ಪಡೆಯುವುದು ಸುಲಭ. 147 ಮಂದಿ ವಯಸ್ಕರನ್ನು ಅಧ್ಯಯನ ಮಾಡಿ ಈ ಕೆಳಗಿನ ವಿವರಗಳನ್ನು ತಿಳಿದುಕೊಳ್ಳಲಾಗಿದೆ. ಆರೋಗ್ಯಕರ ಶಿಸ್ತಿನ ಆಹಾರ ಅಭ್ಯಾಸವಾದರೆ ಅದು ನಮ್ಮ ಸ್ವಭಾವವೇ ಆಗಿ ಹೋಗುತ್ತದೆ. ಆರಂಭದಲ್ಲಿ ಇದು ಸಹಜವಾಗಿ ಕಾಣದೆ ಇದ್ದರೂ ನಿಧಾನವಾಗಿ ಅದು ಅಭ್ಯಾಸವಾಗಲಿದೆ. ಇಂತಹ ಐದು ವಿಷಯಗಳು ಇಲ್ಲಿವೆ.
ಬೆಳಗಿನ ಉಪಹಾರ
ಶೇ. 96ರಷ್ಟು ಮಂದಿ ನಿತ್ಯವೂ ಬೆಳಗಿನ ಉಪಾಹಾರ ಸೇವಿಸುತ್ತಾರೆ. ಇದು ಅಗತ್ಯವೇ ಅಲ್ಲವೇ ಎನ್ನುವುದು ಬೇರೆ ಮಾತು. ಆದರೆ ಬೆಳಗಿನ ಉಪಾಹಾರ ಬಿಟ್ಟವರು ಮಧ್ಯಾಹ್ನದ ಊಟ ಹೆಚ್ಚು ಮಾಡುತ್ತಾರೆ. ಬೆಳಗಿನ ಉಪಾಹಾರ ಬಿಡುವುದು ತೂಕವನ್ನು ಹೆಚ್ಚಿಸಿ ನಿಧಾನವಾಗಿ ಬೊಜ್ಜಿಗೆ ಕಾರಣವಾಗಲಿದೆ. ಆದರೆ ಬೆಳಗ್ಗೆ ಆಹಾರ ಸೇವಿಸುವುದು ಆರೋಗ್ಯಕರ.
ವ್ಯಾಯಾಮ
ಶೇ. 42ರಷ್ಟು ಮಂದಿ ವಾರಕ್ಕೆ ಐದರಿಂದ ಹೆಚ್ಚು ಕಾಲ ವ್ಯಾಯಾಮ ಮಾಡುವುದಾಗಿ ಹೇಳಿದ್ದಾರೆ. ವ್ಯಾಯಾಮ ನಮ್ಮ ದೇಹ ಮತ್ತು ಮೆದುಳಿಗೆ ಸಾಕಷ್ಟು ಬಲ ಕೊಡುತ್ತದೆ. ಒತ್ತಡ ಮತ್ತು ಹತಾಶೆಯನ್ನು ದೂರ ಮಾಡುತ್ತದೆ. ಮಧುಮೇಹ ಮೊದಲಾದ ರೋಗದಿಂದಲೂ ಕಾಪಾಡುತ್ತದೆ. ಮುಖ್ಯವಾಗಿ ಇದರಿಂದ ಆರೋಗ್ಯಕರ ಆಹಾರವನ್ನು ಸೇವಿಸುವಂತೆ ಮಾಡುತ್ತದೆ. ಆಲ್ಕೋಹಾಲ್, ಚಾಕಲೇಟ್ ಕೇಕ್ ಮೊದಲಾದುವುಗಳಿಂದ ತುಂಬಿಕೊಳ್ಳಬಹುದಾದ ಕೊಬ್ಬನ್ನು ವ್ಯಾಯಾಮ ನಿವಾರಿಸಲಿದೆ.
ತೂಕ ನೋಡುವುದು
ತೆಳುಕಾಯರು ಪದೇ ಪದೇ ತಮ್ಮ ತೂಕವನ್ನು ಪರೀಕ್ಷಿಸುತ್ತಿರುತ್ತಾರೆ. ಸುಮಾರು ಶೇ. 50ರಷ್ಟು ಮಂದಿ ವಾರಕ್ಕೊಮ್ಮೆಯಾದರೂ ತೂಕ ನೋಡಿರುತ್ತಾರೆ. ನಿತ್ಯವೂ ತೂಕ ನೋಡುವುದು ಆರೋಗ್ಯಕರವಾಗಿರಲು ಪ್ರೇರಣೆ ಕೊಡುತ್ತದೆ. ನಿತ್ಯವೂ ತೂಕ ನೋಡಿಕೊಳ್ಳುವುದೆಂದರೆ ಹಲ್ಲನ್ನು ಬ್ರಷ್ ಮಾಡಿದಂತೆ ಎಂದು ಪೌಷ್ಠಿಕಾಂಶ ಮತ್ತು ಮನಶ್ಶಾಸ್ತ್ರ ಪ್ರೊಫೆಸರ್ ಡೇವಿಡ್ ಲೆವಿಟ್ಸಕಿ ಹೇಳುತ್ತಾರೆ. ತೂಕ ಕಡಿಮೆಯಾಗುತ್ತಿದ್ದರೆ ಆರೋಗ್ಯಕರ ಜೀವನಶೈಲಿ ಎಂದುಕೊಳ್ಳಬೇಕು. ಆದರೆ ಕೆಲವರಿಗೆ ಹೆಚ್ಚು ತೂಕ ಕಂಡು ಬಂದು ಹತಾಶೆಗೆ ಕಾರಣವಾಗಲಿದೆ. ಭಾವನಾತ್ಮಕವಾಗಿ ಹೆಚ್ಚು ತಿನ್ನಬಹುದು. ಹೀಗೆ ಸೋಲಿನ ಭಾವನೆ ಸಿಕ್ಕ ಯಶಸ್ಸನ್ನೂ ದೂರ ಮಾಡಬಹುದು. ಹೀಗಾಗಿ ತೂಕ ನೋಡುವುದು ನಿಮಗೆ ನಷ್ಟವನ್ನೇ ಮಾಡುತ್ತಿದ್ದರೆ ಈ ಸಲಹೆಯನ್ನು ಪಾಲಿಸಬೇಡಿ.
ತಿನ್ನುವ ಬಗ್ಗೆ ಮಿತಿ ಬೇಡ
ಸಂಶೋಧನೆ ಪ್ರಕಾರ ಶೇ. 44ರಷ್ಟು ಮಂದಿ ತಿನ್ನುವುದಕ್ಕೆ ಮಿತಿ ಹೇರಲಿಲ್ಲ. ಆದರೆ ಅಧಿಕ ಗುಣಮಟ್ಟ ಮತ್ತು ಕಡಿಮೆ ಸಂಸ್ಕರಿತ ಆಹಾರವನ್ನು ಮತ್ತು ಮನೆಯಲ್ಲಿ ಬೇಯಿಸಿದ ಅಡುಗೆ ಹೆಚ್ಚು ತಿಂದಿದ್ದಾರೆ. ಇದು ಅವರ ಆರೋಗ್ಯಕರ ಜೀವನಕ್ಕೆ ಕಾರಣವಾಗಿದೆ. ಕೆಲಸದಲ್ಲಿದ್ದು ನಿಮಗೆ ಹಸಿವೆಯಾಗಿದ್ದರೆ ಮನೆಯಿಂದ ತೆಗೆದುಕೊಂಡ ಪೌಷ್ಠಿಕ ಆಹಾರವನ್ನೇ ಸೇವಿಸಬೇಕೇ ವಿನಾ ಯಂತ್ರದಲ್ಲಿ ಸಿರುವ ಸ್ನಾಕ್ಸ್ ಅಲ್ಲ. ಮನೆಯಲ್ಲಿ ಊಟ ಮಾಡುವುದು ಕ್ಯಾಲರಿ ಕಡಿಮೆ ಮಾಡುವ ಜಾಣ ವಿಧಾನವಾಗಿದೆ.
ಯೋಚಿಸಿ ಆಹಾರ ಸೇವನೆ
ಮಿತಿ ಹೇರುವ ಶಿಸ್ತಿನ ಆಹಾರಕ್ಕೆ ಗಮನ ಕೊಡುವುದಿಲ್ಲ. ಬದಲಾಗಿ ದೇಹಕ್ಕೆ ಏನು ಕೊಡುತ್ತೇವೆ ಎನ್ನುವ ಬಗ್ಗೆ ಗಮನ ಕೊಡುತ್ತಾರೆ. ಶೇ. 74ರಷ್ಟು ಮಂದಿ ಎಂದೂ ಡಯಟ್ ಮಾಡೇ ಇಲ್ಲ. ಅಥವಾ ಅಪರೂಪಕ್ಕೆ ಸೇವಿಸಿದ್ದಾರೆ. ಶೇ. 92ರಷ್ಟು ಮಂದಿ ಆಹಾರದ ಬಗ್ಗೆ ಜಾಗರೂಕರಾಗಿದ್ದರು. ಹೀಗಾಗಿ ತೆಳುವಾಗಬೇಕೆಂದರೆ ಯೋಚಿಸದೆ ತಿನ್ನುವುದಲ್ಲ, ಅಥವಾ ಬೋರ್ ಆಗುತ್ತದೆ ಎಂದು ತಿನ್ನುವುದಲ್ಲ ಅಥವಾ ಹಸಿವೆಯಲ್ಲದ ಕಾರಣಕ್ಕೆ ತಿನ್ನುವುದೂ ಅಲ್ಲ.
ಹೀಗಾಗಿ ಸಹಜವಾಗಿ ತೆಳುವಾಗಿರುವವರು ತಮ್ಮ ಆರೋಗ್ಯದ ಕಡೆಗೆ ನೀಡಿದ ಕಾಳಜಿಯಿಂದಲೇ ಹಾಗಿದ್ದಾರೆ. ಆರೋಗ್ಯಕರ ಆಹಾರಾಭ್ಯಾಸವೇ ಅವರ ರಹಸ್ಯ. ನೀವು ಅದೇ ಜೀವನಶೈಲಿ ಪಾಲಿಸಿದರೆ ಉತ್ತಮ.
ಕೃಪೆ: http://timesofindia.indiatimes.com/