ಸೌದಿಅರೇಬಿಯ: ಫಾರ್ಮಸಿಯಲ್ಲಿ ಕಳ್ಳತನ ನಡೆಸಿದ ಮುಖವಾಡಧಾರಿ ಕಳ್ಳರ ಬಂಧನ

ಜಿದ್ದ,ಸೆಪ್ಟಂಬರ್ 25: ಜಿದ್ದಾದ ಒಂದು ಫಾರ್ಮಸಿಯಲ್ಲಿ ಮುಖವಾಡ ಧರಿಸಿ ಕಳ್ಳತನ ನಡೆಸಿದ ಮೂವರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ನಡೆಸುತ್ತಿರುವ ಸಿಸಿಟಿವಿ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆ ನಂತರ ಪೊಲೀಸರು ತನಿಖೆ ನಡೆಸಿದ್ದು, ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆಂದು ವರದಿಯಾಗಿದೆ.
ಕಳ್ಳರು ಫಾರ್ಮಸಿ ಕೆಲಸಗಾರನಿಗೆ ಚಾಕು ತೋರಿಸಿ ಕೆಲಸಗಾರನನ್ನು ಬೆದರಿಸಿ ಹಣದ ಪೆಟ್ಟಿಗೆಯನ್ನು ಒಯ್ದಿದ್ದರು ಎಂದು ಜಿದ್ದಾ ಪೊಲೀಸ್ ಅಧಿಕೃತ ವಕ್ತಾರ ಜನರಲ್ ಆದಿ ಬಿನ್ ಅತಿಯ್ಯ ಅಲ್‌ಕುರೈಶಿ ಹೇಳಿದ್ದಾರೆ. ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಆರೋಪಿಗಳು ಬಲೆಗೆ ಬಿದ್ದಿದ್ದಾರೆ.
ಕಳ್ಳತನ ನಡೆಸಿದವರು 20-30ವರ್ಷ ವಯಸ್ಸಿನ ಸ್ವದೇಶಿ ಪ್ರಜೆಗಳಾಗಿದ್ದು, ಕದ್ದ ಹಣ ಮತ್ತು ಮುಖವಾಡಗಳನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆಂದು ವರದಿ ತಿಳಿಸಿದೆ.
Next Story





