ಕಾಶ್ಮೀರಾದ್ಯಂತ ಕರ್ಫ್ಯೂ ಹಿಂದಕ್ಕೆ

ಶ್ರೀನಗರ, ಸೆ.25: ನಿನ್ನೆ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುದರಿಂದಾಗಿ ಕಾಶ್ಮೀರ ಕಣಿವೆಯ ಎಲ್ಲ ಭಾಗಗಳಿಂದ ಇಂದು ಕರ್ಫ್ಯೂವನ್ನು ಹಿಂದೆಗೆಯಲಾಗಿದೆ. ಆದಾಗ್ಯೂ, ಮುನ್ನೆಚ್ಚರಿಕೆಯ ಕ್ರಮವಾಗಿ ಹೆಚ್ಚಿನ ಪ್ರದೇಶಗಳಲ್ಲಿ ಜನರ ಸೇರುವಿಕೆಗಿರುವ ನಿರ್ಬಂಧ ಮುಂದುವರಿದಿದೆಯೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಣಿವೆಯಲ್ಲಿ ಇಂದು ಕೂಡ ಯಾವುದೇ ಅನಪೇಕ್ಷಿತ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.
ಕಾಶ್ಮೀರ ಹಿಂಸಾಚಾರ ಇಂದಿಗೆ 79 ದಿನಗಳನ್ನು ಪೂರೈಸಿದೆ. ಪ್ರತ್ಯೇಕತಾವಾದಿಗಳ ಬಂದ್ ಕರೆಯಿಂದಾಗಿ ಇಂದು ಅಂಗಡಿಗಳು ಹಾಗೂ ವ್ಯಾಪಾರ ಸಂಸ್ಥೆಗಳು ಮುಚ್ಚಿದ್ದವು.
ಆದಾಗ್ಯೂ, ಪ್ರತ್ಯೇಕತಾವಾದಿ ಗುಂಪುಗಳು ನಾಳೆ ಮುಂಜಾನೆ 6 ಗಂಟೆಯ ವರೆಗೆ 16 ತಾಸುಗಳ ಸಡಿಲಿಕೆ ಘೋಷಿಸಿರುವುದರಿಂದ ಅಪರಾಹ್ಣ 2ರಿಂದ ಮಾರುಕಟ್ಟೆಗಳು ತೆರೆಯುವ ನಿರೀಕ್ಷೆಯಿದೆ.
Next Story





