ಲೋಧಾ ಸಮಿತಿ ಶಿಫಾರಸು ಉಪಯುಕ್ತವಾಗಿಲ್ಲ: ಗವಾಸ್ಕರ್
ಕಾನ್ಪುರ, ಸೆ.25: ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಲೋಧಾ ಸಮಿತಿ ಬಿಸಿಸಿಐಗೆ ಮಾಡಿರುವ ಕೆಲವೊಂದು ಶಿಫಾರಸು ಕಠಿಣವಾಗಿದೆ. ಅವುಗಳು ಉಪಯುಕ್ತವಾಗಿಲ್ಲ ಎಂದು ಭಾರತದ ಮಾಜಿ ನಾಯಕರಾದ ಸುನೀಲ್ ಗವಾಸ್ಕರ್ ಹಾಗೂ ಕಪಿಲ್‌ದೇವ್ ಅಭಿಪ್ರಾಯಪಟ್ಟಿದ್ದಾರೆ.
ಲೋಧಾ ಸಮಿತಿ ಹಾಗೂ ಅದು ನೀಡಿರುವ ಶಿಫಾರಸಿನ ಬಗ್ಗೆ ತುಂಬಾ ಗೌರವವಿದೆ. ಒಂದು ರಾಜ್ಯ ಒಂದು ಮತ ಶಿಫಾರಸು ಮಂಡಳಿಯ ಸ್ಥಾಪಕ ಸದಸ್ಯ ಸಂಸ್ಥೆಗಳಿಗೆ ಕಷ್ಟಕರವಾಗಿದೆ. ಪ್ರತಿ ರಾಜ್ಯ ರಣಜಿಯಲ್ಲಿ ಆಡಿದರೆ, ಕ್ರಿಕೆಟ್‌ನ ಮಟ್ಟ ಕುಸಿಯಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ನೆರವಿಗೆ ಬಾರದು. ಜೂನಿಯರ್ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದರೆ, ರಣಜಿಗೆ ಭಡ್ತಿ ನೀಡಬಹುದು. ರಣಜಿಗೆ ನೇರ ಪ್ರವೇಶ ನೀಡುವುದು ಸರಿಯಲ್ಲ ಎಂದು ಗವಾಸ್ಕರ್ ತಿಳಿಸಿದರು.
ಲೋಧಾ ಸಮಿತಿಯ ಕೆಲವು ಶಿಫಾರಸುಗಳು ಉತ್ತಮವಾಗಿದ್ದರೆ, ಇನ್ನು ಕೆಲವು ಕಠಿಣವಾಗಿವೆ. ಕ್ರಿಕೆಟ್‌ಗೆ ದೊಡ್ಡ ಕೊಡುಗೆ ನೀಡಿರುವ ಮಹಾರಾಷ್ಟ್ರಕ್ಕೆ ಒಂದೇ ಮತ ನೀಡುತ್ತಿರುವುದು ಅರ್ಥವಾಗದ ವಿಷಯ ಎಂದು ಕಪಿಲ್‌ದೇವ್ ತಿಳಿಸಿದರು.
Next Story





