ಒಂದು ಷರತ್ತಿನ ಮೇಲೆ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡಬಹುದು ಎಂದ ನ್ಯಾ. ಕಾಟ್ಜು !

ಒಂದು ಷರತ್ತಿನ ಮೇಲೆ ಕಾಶ್ಮೀರ ವನ್ನು ನಿಮಗೆ ಕೊಡುತ್ತೇವೆ ಎಂದು ಪಾಕಿಸ್ತಾನಕ್ಕೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಅವರು ಹೇಳಿದ್ದಾರೆ.
ಈ ಬಗ್ಗೆ ರವಿವಾರ ಫೇಸ್‌ಬುಕ್ ಪೋಸ್ಟ್ ಬರೆದಿರುವ ಅವರು ಬಿಹಾರವನ್ನೂ ನೀವು ತೆಗೆದುಕೊಳ್ಳಬೇಕು. ಹಾಗಿದ್ದರೆ ಮಾತ್ರ ಕಾಶ್ಮೀರ ವನ್ನು ಕೊಡುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗ್ರಾ ಶ್ರಂಗ ಸಭೆಯಲ್ಲಿ ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ ಈ ಕೊಡುಗೆ ನೀಡಿದ್ದರು. ಆದರೆ ಮುಷರಫ್ ಮೂರ್ಖತನದಿಂದ ಅದನ್ನು ತಿರಸ್ಕರಿಸಿದರು ಎಂದೂ ಕಾಟ್ಜು ಅವರು ಸೇರಿಸಿದ್ದಾರೆ.
ಅವರ ಫೇಸ್‌ಬುಕ್ ಪೋಸ್ಟ್ ಇಲ್ಲಿದೆ :
Next Story





