ವೇದ ಪುರಾಣಗಳ ಸರಿಯಾದ ಅಧ್ಯಯನ ಅಗತ್ಯ: ಪೇಜಾವರ ಶ್ರೀ

ಉಡುಪಿ, ಸೆ.25: ರಾಮಾಯಣ, ಮಹಾಭಾರತ ಸೇರಿದಂತೆ ವೇದ ಪುರಾಣಗಳ ಬಗ್ಗೆ ಇಂದು ಸುಳ್ಳು ಆರೋಪಗಳು ಕೇಳಿಬರುತ್ತಿವೆ. ಅವುಗಳ ಸರಿಯಾದ ಅಧ್ಯಯನ ಅಗತ್ಯ ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಎಸ್‌ಎಂಎಸ್‌ಪಿ ಸಂಸ್ಕೃತ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶ್ರೀಕೃಷ್ಣ ಮಠದ ರಾಜ್ಯಾಂಗಣದಲ್ಲಿ ರವಿವಾರ ಆಯೋಜಿಸಲಾದ ‘ಶ್ರುತಿ ಮೀಮಾಂಸಾ’ ಏಕ ದಿನಾತ್ಮಕ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಗೋಷ್ಠಿಯಲ್ಲಿ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾ ಚಾರ್ಯ ‘ವೈದಿಕ ಛಂದಸ್ಸು’ ಹಾಗೂ ಶತಾವಧಾನಿ ಡಾ.ಆರ್.ಗಣೇಶ್ ಆರ್ಷದೃಷ್ಟಿ ವಿಷಯದ ಕುರಿತು ಮಾತನಾಡಿದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
Next Story





