ಬ್ಯಾಡ್ಮಿಂಟನ್‌ನಲ್ಲಿ ನಾಟೆಕಲ್ ಮುಸ್ಲಿಮ್ ವಸತಿ ಶಾಲೆ ಪ್ರಥಮ

ಕೊಣಾಜೆ, ಸೆ.25: ಮೂಡುಬಿದಿರೆ ಧರೆಗುಡ್ಡೆಯಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ನಾಟೆಕಲ್ ಸರಕಾರಿ ಮುಸ್ಲಿಮ್ ವಸತಿ ಶಾಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಂಡದ ನಾಯಕ ಮುಹಮ್ಮದ್ ನಿಸಾರ್, ನಿಝಾರ್ ಅಹ್ಮದ್, ಮುಹಮ್ಮದ್ ಸಿನಾನ್, ಮುಹಮ್ಮದ್ ರಾಝಿಕ್, ಮುಹಮ್ಮದ್ ಝಮೀರ್, ಮುಹಮ್ಮದ್ ಫರ್ವಾಝ್, ಮುಹಮ್ಮದ್ ಫೈಝಲ್, ಮುಹಮ್ಮದ್ ಶಫೀಕ್ ಭಾಗವಹಿಸಿದ್ದರು.
ಓಝ್ವಲ್ಟ್ ತಂಡಕ್ಕೆ ತರಬೇತಿ ನೀಡಿದ್ದು, ಶಾಲೆಯ ಪ್ರಾಂಶುಪಾಲ ಮುರುಗಯ್ಯ ಕೊಗನೂರಮಠ, ದೈಹಿಕ ಶಿಕ್ಷಣ ಶಿಕ್ಷಕಿ ಗೀತಾ ಪೂಂಜಾ, ನಿಲಯ ಪಾಲಕ ಶಾಹುಲ್ ಹಮೀದ್, ಸಿಬ್ಬಂದಿ ಹಸನಬ್ಬ ಉಪಸ್ಥಿತರಿದ್ದರು.
Next Story





