ಮಂಗಳೂರು: ಶಿಕ್ಷಕರ ಸೊಸೈಟಿಯ ಮಹಾಸಭೆ

ಮಂಗಳೂರು, ಸೆ. 25: ನಗರದ ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘ ನಿಯಮಿತ ಇದರ 2015-16ನೆ ಸಾಲಿನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಖಾಸಗಿ ಹೊಟೇಲ್ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಅಲೋಶಿಯಸ್ ಡಿಸೋಜಾ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು, ಸಂಘವು 1989ರಲ್ಲಿ ಸ್ಥಾಪನೆಗೊಂಡಿದ್ದು, ಪ್ರಸ್ತುತ 3,854 ಮಂದಿ ಸದಸ್ಯರನ್ನು ಹೊಂದಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಸಂಘವು ಆರ್ಥಿಕ ವರ್ಷದಲ್ಲಿ 44 ಕೋ.ರೂ. ದುಡಿಯುವ ಬಂಡವಾಳ ಹೊಂದಿದೆ. ಸಂಘವು ಬ್ರಹ್ಮಾವರದಲ್ಲಿ ಒಂದು ಶಾಖೆ ಮತ್ತು ಶಿಕ್ಷಕ್ ಹೆಸರಿನ ಪುಸ್ತಕ ಮಾರಾಟ ಮಳಿಗೆಯನ್ನು ಹೊಂದಿದೆ ಎಂದರು.
ಅಲ್ಲದೆ ಪ್ರಸ್ತುತ ಸಂಘದಲ್ಲಿ 4.48 ಕೋ.ರೂ. ಪಾಲುಬಂಡವಾಳ ಹಾಗೂ 33.58 ಕೋ.ರೂ. ಠೇವಣಿಯಿದ್ದು, ಸದಸ್ಯರಿಗೆ ಒಟ್ಟು 19.34 ಕೋಟಿ ರೂ. ಸಾಲ ನೀಡಿದೆ. ಸಂಘವು ಪ್ರಸ್ತುತ ಸಾಲಿನಲ್ಲಿ ಒಟ್ಟು 111 ಕೋ.ರೂ. ವಾರ್ಷಿಕ ವ್ಯವಹಾರ ನಡೆಸಿದೆ. 2015-16ನೆ ಸಾಲಿನಲ್ಲಿ ಸಂಘವು 1,22,84,095 ರೂ. ದಾಖಲೆಯ ನಿವ್ವಳ ಲಾಭವನ್ನು ಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡಲಾಗುವುದೆಂದು ಅಧ್ಯಕ್ಷರು ಘೋಷಿಸಿದರು.





