Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಝುಕರ್ ಬರ್ಗ್ ಗುರುತಿಸಿ ಅಭಿನಂದಿಸಿದ...

ಝುಕರ್ ಬರ್ಗ್ ಗುರುತಿಸಿ ಅಭಿನಂದಿಸಿದ ಭಾರತದ ಈ ಹೊಸ ವಿಶ್ವ ಚಾಂಪಿಯನ್ ನನ್ನು ನಾವೇ ಗಮನಿಸಿಲ್ಲ !

ವಾರ್ತಾಭಾರತಿವಾರ್ತಾಭಾರತಿ26 Sept 2016 11:10 AM IST
share
ಝುಕರ್ ಬರ್ಗ್ ಗುರುತಿಸಿ ಅಭಿನಂದಿಸಿದ ಭಾರತದ ಈ ಹೊಸ ವಿಶ್ವ ಚಾಂಪಿಯನ್ ನನ್ನು ನಾವೇ ಗಮನಿಸಿಲ್ಲ !

ಬಾಲಾಜಿ ಬಾಜಿರಾವ್ ಅವರಿಗೆ ಮೂರನೇ ಪಾಣಿಪತ್ ಕದನಕ್ಕೆ ಖಡ್ಗ ತಯಾರಿಸಿಕೊಡಲು ಕೆಲ ಶತಮಾನಗಳ ಹಿಂದೆ ಈತನ ಪೂರ್ವಜನರು ಹರ್ಯಾಣಕ್ಕೆ ವಲಸೆ ಬಂದರು. ಜಾಟ್ ಪ್ರಾಬಲ್ಯದ ಈ ಭಾಗದಲ್ಲಿ ನೆಲೆಸಿರುವ ನೀರಜ್ ಛೋಪ್ರಾ, ಈ ಮರಾಠ ಕುಟುಂಬದ ಕುಡಿ. ಆಧುನಿಕ ಯುಗದ ಈಟಿ (ಜಾವೆಲಿನ್) ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಅಪರೂಪದ ಸಾಧಕ.

ಕಳೆದ ತಿಂಗಳು ಸಾಕ್ಷಿ ಮಲ್ಲಿಕ್ ಹಾಗೂ ಪಿ.ವಿ.ಸಿಂಧು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದುದನ್ನು ದೇಶ ಸಂಭ್ರಮಿಸುತ್ತಿದ್ದರೆ, ಅಭೂತಪೂರ್ವ ಸಾಧನೆಯೊಂದಿಗೆ ಈತ ಚಿನ್ನದ ಪದಕ ಬೇಟೆಯಾಡಿದ್ದು ಸುದ್ದಿಯಾಗಲೇ ಇಲ್ಲ. ಆರಡಿಗೆ ಒಂದಿಂಚು ಕಡಿಮೆ ಇರುವ ಈ ಅದ್ಭುತ ಪ್ರತಿಭೆಯ ಹದಿಹರೆಯದ ಯುವಕ ಐಎಎಎಫ್ ವಿಶ್ವ 20ರ ವಯೋಮಿತಿಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದಿದ್ದ.

ಇದು ಭಾರತದ ಅಥ್ಲೆಟಿಕ್ ಇತಿಹಾಸದಲ್ಲೇ ಐತಿಹಾಸಿಕ ಸಾಧನೆ. ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಈತ. ಡಿಸ್ಕಸ್ ಎಸೆತದಲ್ಲಿ ಎರಡು ಕಂಚಿನ ಪದಕ ಬಂದಿದ್ದರೆ, ಹಿರಿಯರ ವಿಭಾಗದಲ್ಲಿ ಅಂಜು ಬಾಬಿ ಜಾರ್ಜ್ ಚಿನ್ನ ಗೆದ್ದಿದ್ದರು. ಆದರೆ ಜಾವೆಲಿನ್‌ನಲ್ಲಿ? ಹಿಂದೆಂದೂ ಪದಕ ಗೆದ್ದ ನಿದರ್ಶನ ಇಲ್ಲ.

ಪ್ರಧಾನಿ ಮೋದಿ, ಹರ್ಯಾಣ ಸಿಎಂ ಖಟ್ಟರ್, ಒಲಿಂಪಿಕ್ಸ್ ಪದಕ ವಿಚೇತ ರಾಜ್ಯವರ್ಧನ್ ರಾಥೋಡ್, ಕ್ರಿಕೆಟಿಗರಾದ ವಿ.ವಿ.ಎಸ್.ಲಕ್ಷ್ಮಣ್, ಶಿಖರ್ ಧವನ್, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್, ಶಿಲ್ಪಾ ಶೆಟ್ಟಿ, ಕತ್ರಿನಾ ಕೈಫ್ ಅವರಿಂದಲೂ ಅಭಿನಂದನೆ ಬಂದಿದೆ. ಆದರೆ ಪೋಡಿಯಂನಲ್ಲಿ ನಿಂತ ಕ್ಷಣ ಮಾತ್ರ ಅವಿಸ್ಮರಣೀಯ. ಭಾರತದ ರಾಷ್ಟ್ರಗೀತೆ ಮೊಳಗಿದ ಆ ಕ್ಷಣ ಮರೆಯಲಾಗದ್ದು ಎಂದು ಚಾಂಪಿಯನ್ ಅನುಭವ ಹಂಚಿಕೊಂಡರು. ಈ ಸಾಹಸ ಮೆರೆದು ಬಂದ ಈತನನ್ನು ಜನ ಕೂಡಾ ಹಾರ್ದಿಕವಾಗಿಯೇ ಸ್ವಾಗತಿಸಿದ್ದಾರೆ.

11ನೇ ವರ್ಷದಲ್ಲೇ 80 ಕೆಜಿ ಇದ್ದ ಬಾಲಕ, ವ್ಯಾಯಾಮದ ಸಲುವಾಗಿ ಪಾಣಿಪತ್ ಕ್ರೀಡಾಂಗಣಕ್ಕೆ ರಜೆಯಲ್ಲಿ ಬಂದಿದ್ದ. 30 ರೂಪಾಯಿ ಪಾಕೆಟ್ ಮನಿ ಇರುತ್ತಿತ್ತು. ಕೆಲವೊಮ್ಮೆ ಜ್ಯೂಸ್ ಕುಡಿಯಲೂ ಇದು ಸಾಕಾಗುತ್ತಿರಲಿಲ್ಲ. 17 ಕಿಲೋಮೀಟರ್ ಪ್ರಯಾಣ ಮಾಡಿ ಸ್ಟೇಡಿಯಂಗೆ ಬರುತ್ತಿದ್ದ. ತೂಕ ಇಳಿಸುವ ಸಲುವಾಗಿ ಓಡುತ್ತಿದ್ದೆ. ಹಿರಿಯ ಜಾವೆಲಿನ್ ಪಟುಗಳು ಅಭ್ಯಾಸ ಮಾಡುತ್ತಿದ್ದುದನ್ನು ನೋಡಿ, ಆಸಕ್ತಿ ಮೂಡಿತು.

ಬಳಿಕ ಪಂಚಕುಲದ ಕ್ರೀಡಾ ನರ್ಸರಿ ಸೇರಿದಾಗ 14 ವರ್ಷ. ಮೊದಲ ಜ್ಯೂನಿಯರ್ ರಾಷ್ಟ್ರಮಟ್ಟದ ಕೂಟದಲ್ಲಿ 68.46 ಮೀಟರ್ ಜಾವೆಲಿನ್ ಎಸೆತು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದು ಹೆಗ್ಗಳಿಕೆ. ಬಳಿಕ ಗಾಯದಿಂದಾಗಿ ಕೆಲ ಕಾಲ ಅಭ್ಯಾಸದಿಂದ ಹೊರಗೆ ಉಳಿಯಬೇಕಾಯಿತು. ರಾಷ್ಟ್ರೀಯ ಹಿರಿಯರ ಕೂಟದಲ್ಲಿ ರಾಜೇಂದ್ರ ಕುಮಾರ್ 82.23 ಮೀಟರ್ ಎಸೆದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾಗ ಈತ 73.45 ಮೀಟರ್ ಎಸೆದಿದ್ದ.

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಪದಕ ಗೆದ್ದುಕೊಡುವ ವಿಶ್ವಾಸ ಹೊಂದಿರುವ ಚಾಂಪಿಯನ್, ಕಠಿಣ ಅಭ್ಯಾಸ ಮುಂದುವರಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X