ಅಭಿನಂದನೀಯ ‘ಚಲೋ’
ಮಾನ್ಯರೆ, ರಾಜ್ಯಾದ್ಯಂತ ಉಡುಪಿ ಚಲೋ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ಬಹುಶಃ 80 ರ ದಶಕದ ರೈತ ಚಳವಳಿ ಮತ್ತು ದಲಿತ ಚಳವಳಿಯ ಬಳಿಕ ಇಡೀ ರಾಜ್ಯದಲ್ಲಿ ಒಂದು ಹೊಸ ಆವೇಶ ಹುಟ್ಟಿಕೊಂಡಿದೆ. ನಿಜಕ್ಕೂ ಇದು ಅಭಿನಂದನೀಯವಾಗಿದೆ. ಈ ಚಳವಳಿ ಮುಂದಿನ ದಿನಗಳಲ್ಲಿ ಕರ್ನಾಟಕದ ಪಾಲಿಗೆ ಒಂದು ರಾಜಕೀಯ ದಿಕ್ಸೂಚಿಯಾಗಿ ಮಾರ್ಪಾಡಬೇಕು. ಹಾಗೆಯೇ, ಈ ಚಳವಳಿಗೆ ನಡೆಯುತ್ತಿರುವ ತಯಾರಿ, ಸಭೆಗಳು ಸಮಾವೇಶದ ಬಳಿಕ ತಣ್ಣಗಾಗಬಾರದು. ಆ ಬಳಿಕವೂ ಅದು ಬೇರೆ ಬೇರೆ ರೂಪಗಳಲ್ಲಿ ಮುಂದುವರಿಯಬೇಕು. ಮುಖ್ಯವಾಗಿ ಸಂಘಪರಿವಾರದ ಬಲಿಪಶುಗಳಾಗಿರುವ ಶೋಷಿತ ಸಮುದಾಯದ ಯುವಕರನ್ನು ಹೊರ ತರುವುದಕ್ಕೆ ಈ ಸಮಾವೇಶ ಪ್ರೇರಣೆಯಾಗಬೇಕು. ಹಾಗೆಯೇ ಹೊಸ ಹುಡುಗರಿಗೆ ದಲಿತ ಮತ್ತು ಪ್ರಗತಿಪರ ಚಿಂತನೆಗಳನ್ನು ತಲುಪಿಸುವ ಕೆಲಸ ನಡೆಯಬೇಕು. ಮುಂದಿನ ತಲೆಮಾರು ಜಾಗೃತ ತಲೆಮಾರಾಗಿ ಮಾರ್ಪಾಡಾಗಬೇಕು. ಆರೆಸ್ಸೆಸ್‌ನಂತಹ ಸಂಘಟನೆಗಳಿಗೆ ದೊಂಬಿ ಎಬ್ಬಿಸಲು ಶೋಷಿತ ಸಮುದಾಯದ ಯುವಕರೇ ಸಿಗದಂತಹ ಸನ್ನಿವೇಶ ನಿರ್ಮಾಣವಾಗಬೇಕು.
Next Story





