ರೆತರ ಸಂಕಷ್ಟಕ್ಕೆ ಸರಕಾರ ನೆರವಾಗಲಿ
ಮಾನ್ಯರೆ, ಕಳೆದ ವರ್ಷ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಇದ್ದ ಕಾರಣ ರೈತರು ತಮ್ಮ ಜಮೀನಿನಲ್ಲಿ ಏನನ್ನೂ ಬೆಳೆಯದೆ ಮಾಡಿದ ಸಾಲ ತೀರಿಸಲಾಗದೆ ಸಾವಿರಾರು ರೈತರು ಸರಣಿ ಆತ್ಮಹತ್ಯೆ ಮಾಡಿಕೊಂಡರು. ಈ ವರ್ಷವಾದರೂ ಮಳೆರಾಯ ನಮ್ಮ ಕೈ ಹಿಡಿದಾನು ಎಂಬ ನಂಬಿಕೆಯಲ್ಲಿ ಭೂಮಿ ಉಳುಮೆ ಮಾಡಿದ ಈ ಭಾಗದ ರೈತರು ಮತ್ತೆ ಸಂಕಷ್ಟ ಪಡುವಂತಾಗಿದೆ.ಆಂಧ್ರಪ್ರದೇಶದ ಉತ್ತರ ಕರಾವಳಿಯಲ್ಲಿ ವಾಯುಭಾರ ಕುಸಿತ ದಿಂದಾಗಿ ಸುರಿಯುತ್ತಿರುವ ಮಳೆಯಿಂದ ಉತ್ತರ ಕರ್ನಾಟಕದ ಬಾಗಲಕೋಟೆ,ಬೆಳಗಾವಿ, ಬೀದರ, ಕಲಬುರಗಿ,ರಾಯಚೂರು ಜಿಲ್ಲೆಗಳಲ್ಲಿ ಹಗಲು ರಾತ್ರಿ ಬಿಡದೆ ಮಳೆ ಸುರಿಯುತ್ತಿರುವುದರಿಂದ ನೂರಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ರೈತರ ಜಮೀನಿಗೆ ನುಗ್ಗಿರುವ ಮಳೆ ನೀರು ಬಿತ್ತಿದ ಬೆಳೆಯನ್ನು ಸಂಪೂರ್ಣವಾಗಿ ನಾಶವಾಗಿದೆ. ಇನ್ನೂ ಜನ ಜಾನುವಾರಗಳಿಗೆ ಪ್ರವಾಹದ ಭೀತಿ ಉಂಟಾಗಿದೆ. ಕೋಟ್ಯಂತರ ಆಸ್ತಿ ಪಾಸ್ತಿ ಕಳೆದುಕೊಂಡು ಪ್ರವಾಹದ ಭೀತಿಯಲ್ಲಿರುವ ಉತ್ತರ ಕರ್ನಾಟಕ ರೈತರ ಸಂಕಷ್ಟಕ್ಕೆ ಆ ಜಿಲ್ಲೆಗಳ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ತಕ್ಷಣ ರಕ್ಷಣೆಗೆ ಮುಂದಾಗಬೇಕು. ಬೆಳೆ ಕಳೆದುಕೊಂಡು ದುಃಖದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.





