ಕೇರಳ: ವೆಳ್ಳಾಪಳ್ಳಿ ನಟೇಶನ್ ವಿರುದ್ಧ ಗುಡುಗಿದ ವಿಎಸ್ ಅಚ್ಯುತಾನಂದನ್

ಕೊಡುಮಣ್, ಸೆಪ್ಟಂಬರ್ 26: ಮೈಕ್ರೋಫೈನಾನ್ಸ್ ವಂಚನೆ ನಡೆಸಿದ ವೆಳ್ಳಾಪಳ್ಳಿ ನಟೇಶನ್ ಮುಖ್ಯಮಂತ್ರಿಯನ್ನು ಭೇಟಿಯಾದ್ದರಿಂದ ಅವರಿಗೆ ಯಾವ ಪ್ರಯೋಜನವೂ ಇಲ್ಲ ಎಂದು ಮಾಜಿಮುಖ್ಯಮಂತ್ರಿ ವಿಎಸ್ ಅಚ್ಯುತಾನಂದನ್ ಹೇಳಿದ್ದಾರೆಂದು ವರದಿಯಾಗಿದೆ.
ತಾನೀಗ ಮಾನ್ಯ ವ್ಯಕ್ತಿಯೆಂದು ಹೇಳುತ್ತಾ ವೆಳ್ಳಾಪಳ್ಳಿ ಮುಖ್ಯಮಂತ್ರಿಯನ್ನು ಆಗಾಗ ಭೇಟಿಯಾಗುತ್ತಿದ್ದಾರೆ. ವೆಳ್ಳಾಪಳ್ಳಿಯ ಉದ್ಧಾರಕ್ಕೆ ಶ್ರಮಿಸುವವರುಸತ್ಯಸಂಗತಿಗಳನ್ನು ಗಮನಿಸಬೇಕಾಗಿದೆ ಎಂದು ಐಕಾಡ್ ಜೈಹಿಂದ್ ಲೈಬ್ರರಿಯ ಸುವರ್ಣಮಹೋತ್ಸವವನ್ನು ಉದ್ಘಾಟಿಸುತ್ತಾ ಅಚ್ಯುತಾನಂದನ್ ಹೇಳಿದ್ದಾರೆ.
ಕೇರಳದಲ್ಲಿ ನೂರಾರುಮಹಿಳೆಯರನ್ನು ಸೇವೆಯ ಹೆಸರು ಹೇಳಿ ವಂಚಿಸಿರುವ ನಟೇಶನ್‌ರ ಕೃತ್ಯಗಳನ್ನು ಬಹಿರಂಗಪಡಿಸುವೆ. ಹಲವು ಮಹಿಳೆಯರ ಮನೆ ಜಫ್ತಿಗೆ ನೋಟಿಸು ಬರುತ್ತಿವೆ. ಇದರ ಕುರಿತು ಹಲವು ಸಹೋದರಿಯರು ತನಗೆ ಪತ್ರ ಬರೆದಿದ್ದಾರೆ. ಆದ್ದರಿಂದ ತಾನು ತಿರುವನಂತಪುರಂ ವಿಜಿಲೆನ್ಸ್ ಕೋರ್ಟಿನಲ್ಲಿ ದೂರು ಸಲ್ಲಿಸಿದ್ದೇನೆ. ಈಗಾಗಲೇ ಎಂಬತ್ತು ಕೋಟಿ ರೂಪಾಯಿಯ ವಂಚನೆ ನಡೆಸಿರುವುದನ್ನು ವಿಜಿಲೆನ್ಸ್ ಪತ್ತೆಹಚ್ಚಿದೆ ಎಂದು ಅಚ್ಯುತಾನಂದನ್ ಹೇಳಿದ್ದಾರೆಂದು ವರದಿಯಾಗಿದೆ.





