ಫಳ್ನೀರ್ ವಾರ್ಡ್ ಕಾಂಗ್ರೆಸ್ ಸಮಿತಿಯಿಂದ ಸೆ.28ರಂದು ವೈದ್ಯಕೀಯ ತಪಾಸಣಾ ಶಿಬಿರ

ಮಂಗಳೂರು,ಸೆ.26: 39ನೆ ಫಳ್ನೀರ್ ವಾರ್ಡ್‌ನ ಕಾಂಗ್ರೆಸ್ ವಾರ್ಡ್ ಸಮಿತಿ ಆಶ್ರಯದಲ್ಲಿ ಸೆ.28 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ಜೆಪ್ಪು ಸ್ಪಂದನ ಟ್ರಸ್ಟ್ ಸಿಸ್ಟರ್ಸ್ ಆಫ್ ಚ್ಯಾರಿಟಿಯಲ್ಲಿ ಹಾಗೂ ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತ, ಜೆಪ್ಪು ಹಾಗೂ ಶಾಂತಿನಗರದ ಸೇವಾ ಸಮಿತಿ ಜೆಪ್ಪು ಆಶ್ರಯದಲ್ಲಿ ಅ.2 ರಂದು ಮಂಗಳೂರು ಸ್ಟೋರ್ ಬಳಿಯ ಸಹಕಾರಿ ಕಚೇರಿಯಲ್ಲಿ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಮಾಜಿ ಮನಪಾ ಸದಸ್ಯ ಜೆ.ನಾಗೇಂದ್ರ ಕುಮಾರ್ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವೈದ್ಯಕೀಯ ತಪಾಸಣಾ ಶಿಬಿರಗಳು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ನೇತೃತ್ವದಲ್ಲಿ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಮತು ದಂತ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆಯಲಿದೆ. ಶಿಬಿರದಲ್ಲಿ ಸ್ತ್ರೀ ರೋಗ ತಪಾಸಣೆ, ಮಕ್ಕಳ ರೋಗ ತಪಾಸಣೆ, ಚರ್ಮರೋಗ ತಪಾಸಣೆ, ಕಣ್ಣಿನ ಪರೀಕ್ಷೆ ಮತ್ತು ಚಿಕಿತ್ಸೆ, ದಂತ ಪರೀಕ್ಷೆ, ಸಾಮಾನ್ಯ ಆರೋಗ್ಯ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಫಳ್ನೀರ್ ಕಾಂಗ್ರೆಸ್ ವಾರ್ಡ್ ಸಮಿತಿಯ ಮುಖಂಡರುಗಳಾದ ಅನಿಲ್ ತೋರಸ್, ಐವನ್ ಡಿಸೋಜ, ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಕೆ.ಭಾಸ್ಕರ ರಾವ್, ನಿರ್ದೇಶಕ ಪುಂಡಲೀಕ ಸುವರ್ಣ, ಮಹೇಶ್ ಕೋಡಿಕಲ್ ಉಪಸ್ಥಿತರಿದ್ದರು.





