ಮಕ್ಕಳು ಉನ್ನತ ಸ್ಥಾನದಲ್ಲಿ, ತಂದೆ ಬೀದಿ ಬದಿಯಲ್ಲಿ… !

ಪತ್ತನಾಪುರಂ ಸೆಪ್ಟಂಬರ್ 26: ಮಕ್ಕಳನ್ನು ಉತ್ತಮ ಸ್ಥಿತಿಗೆ ತಂದು ನಿಲ್ಲಿಸಿದ ಕುವೈಟ್ ಅಚ್ಚಾಯನ್ ಎಂದು ಕರೆಯುವ ತೊಂಬತ್ತು ವರ್ಷ ವಯಸ್ಸಿನ ಜಾನ್ಶ್ಯಾಮುವೇಲ್ ಎಂಬ ಅಜ್ಜನಿಗೆ ಈಗ ಬೀದಿ ಬದಿಯೇ ಗತಿಯಾಗಿದೆ. ಹೆಸರಿನ ಮುಂದೆ ಕುವೈಟ್ ಎನ್ನುವ ವಿಶೇಷಣವಿದ್ದರೂ ಅಜ್ಜ ಅಪ್ಪಟ ರೈತನೇ. ಮಣ್ಣಲ್ಲಿ ಚಿನ್ನ ಬೆಳೆದ ಅಜ್ಜನ ಕತೆ ಊರಿನ ಎಲ್ಲರಿಗೂ ಗೊತ್ತಿರುವಂಥದ್ದೇ. ಅವರು ಕೃಷಿ ಮಾಡಿ ಮಕ್ಕಳಿಗೆ ಉನ್ನತ ಶಿಕ್ಷಣೌರ್ಣಣೂ ಕೊಡಿಸಿದ್ದಾರೆ. ಮಕ್ಕಳು ಶ್ರೀಮಂತರಾಗಿದ್ದು, ತಂದೆಯ ಎಲ್ಲ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿದ್ದಾರೆ. ನಂತರ ಈ ವಯೋವೃದ್ಧ ಅಜ್ಜನನ್ನು ಬೀದಿಗೆ ತಳ್ಳಿರುವುದರಿಂದ ಅಜ್ಜನಿಗೆ ಈಗ ಅಂಗಡಿ ಬಾಗಿಲೇ ಗತಿಯಾಗಿದೆ ಎಂದು ವರದಿಯೊಂದು ತಿಳಿಸಿದೆ.
ಎರಡು ವರ್ಷ ಮೊದಲು ಅಜ್ಜನ ಪತ್ನಿ ಮರಿಯಮ್ಮ ಎಂಬವರು ನಿಧನರಾಗುವುದರೊಂದಿಗೆ ಅಜ್ಜನಿಗೆ ತಾಪತ್ರಯ ಅಂಟಿಕೊಂಡಿತು. ಆನಂತರ ಇವರನ್ನು ಮಕ್ಕಳು ಮತ್ತು ಅಳಿಯಂದಿರು ಮನೆಯಿಂದ ಹೊರದಬ್ಬಿದ್ದಾರೆ. ಹಾಗೆಂದುಅಜ್ಜ ಜಾನ್ ಶ್ಯಾಮುವೇಲ್ ಹೇಳುತ್ತಾರೆ. ಕೆಲವುದಿವಸಗಳಿಂದ ಇವರು ಪತ್ತಾನಪುರಂನ ಅಂಗಡಿ ಬಾಗಿಲಲ್ಲೇ ರಾತ್ರೆಯನ್ನು ಬೆಳಗುಮಾಡುತ್ತಿದ್ದಾರೆ. ಯಾರಾದರೂ ಆಹಾರ ಕೊಟ್ಟರೆ ತಿನ್ನುತ್ತಾರೆ. ಇಲ್ಲದಿದ್ದರೆ ಇಲ್ಲ. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಇವರು ಹೇಳುತ್ತಾರೆ.
ಮಂಕೋಟ್ ತೈವಡಕೇತಿಲ್ನ ಕುವೈಟ್ ಅಚ್ಚಾಯನ ಕತೆ ಮಕ್ಕಳಿಗೆ ಆಸ್ತಿ ಬರೆದು ಕೊಡುವ ತಂದೆತಾಯಂದಿರಿಗೊಂದು ಪಾಠವಾಗುವಂತಿದೆ. ಇಪ್ಪತ್ತಮೂರನೆ ವಯಸ್ಸಿನಲ್ಲಿ ಎಲಿಯರಯ್ಕಿಲ್ನಿಂದ ವಂಕೋಟ್ ಎಂಬ ಅರಣ್ಯಪ್ರದೇಶಕ್ಕೆ ಬರುವಾಗ ಮಣ್ಣಿನಲ್ಲಿ ದುಡಿಯುವ ಗಟ್ಟಿ ಮನಸು ಅವರಲ್ಲಿತ್ತು.
ಪತ್ನಿ ಮರಿಯಂ ಜೊತೆ ಮಣ್ಣಿನಲ್ಲಿ ಚಿನ್ನವನ್ನೇ ಅವರು ಬೆಳೆದರು. ಜೀವನ ಹಸಿರಾಯಿತು. ನಾಲ್ಕು ಮಕ್ಕಳೂ ಹುಟ್ಟಿದರು. ತನಗೆ ಸಿಗದ ಶಿಕ್ಷವನ್ನು ಮಕ್ಕಳಿಗೆ ಕೊಡಿಸಿದರು. ಉನ್ನತ ಶಿಕ್ಷಣ ಪಡೆದ ಮಕ್ಕಳೂ ಅಮೆರಿಕ ಸಹಿತ ವಿದೇಶಗಳಲ್ಲಿ ಉನ್ನತ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇತ್ತೀಚೆಗೆ ತಂದೆಯ ಹೆಸರಿನಲ್ಲಿರುವ ವಸ್ತು ಮತ್ತು ಮನೆಯನ್ನು ಮಕ್ಕಳು ಹಂಚಿಕೊಂಡು ದಾಖಲೆ ಮಾಡಿಟ್ಟುಕೊಂಡಿದ್ದಾರೆ.
ಬದುಕಿನಲ್ಲಿಉಳಿದಿರುವಷ್ಟು ಕಾಲ ಮಕ್ಕಳ ಜೊತೆಯೇ ಜೀವಿಸಬೇಕೆಂದು ಈ ಅಜ್ಜನ ಆಸೆಯಾಗಿದೆ. ಆದರೆ ಪೊಲೀಸರಿಗೆ ದೂರು ನೀಡಿರುವುದರಿಂದ ಅಂತಹ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ ಎಂದು ವರದಿ ತಿಳಿಸಿದೆ.







