ಸುಳ್ಯ: ಸುನ್ನೀ ಮಹಲ್‌ಗೆ ಪಾಣಕ್ಕಾಡ್ ಮುನವ್ವರಲಿ ಶಿಹಾಬ್ ತಂಙಳ್ ಭೇಟಿ

ಸುಳ್ಯ, ಸೆ.26: ಸುಳ್ಯ ಗಾಂಧಿನಗರದ ಕರಾವಳಿ ಕಾಂಪ್ಲೆಕ್ಸ್‌ನಲ್ಲಿರುವ ಸುನ್ನೀ ಮಹಲ್ ಸಮಸ್ತ ಕಾರ್ಯಲಯಕ್ಕೆ ಸಮಸ್ತ ನೇತಾರ ಪಾಣಕ್ಕಾಡ್ ಸೈಯದ್ ಮುನವ್ವರಲಿ ಶಿಹಾಬ್ ತಂಙಳ್ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಸ್ತದ ವಿದ್ಯಾರ್ಥಿ ಸಂಘಟನೆಯಾದ ಎಸ್ಕೆಎಸ್ಸೆಸ್ಸೆಫ್‌ನ ಕಾರ್ಯಕ್ರಮಗಳು ಸರಿಯಾದ ರೀತಿಯಲ್ಲಿ ನಡೆಯಲು ಎಲ್ಲ ಸಹಕರಿಸುತ್ತಿರುವುದು ಶ್ಲಾಘನೀಯ. ಮುಂದಕ್ಕೂ ಜನಪರ ಕಾರ್ಯಕ್ರಮಗಳನ್ನು ನಡೆಸಿ ಸಮಸ್ತ ಸಂಘಟನೆಯನ್ನು ಬಲಪಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಹಾಬ್ ತಂಙಳರ್‌ರನ್ನು ಎಸ್ಕೆಎಸ್ಸೆಸ್ಸೆಫ್‌ನ ಸುಳ್ಯ ವಲಯಾಧ್ಯಕ್ಷ ಶಾಫಿ ದಾರಿಮಿ ಅಜ್ಜಾವರ ಸನ್ಮಾನಿಸಿದರು.
ಈ ಸಂದರ್ಭ ಎನ್‌ಪಿಎಂ ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ, ಟಿ.ಎಂ. ಶಹೀದ್ ತೆಕ್ಕಿಲ್ ಅರಂತೋಡು, ಹಮೀದ್ ಹಾಜಿ ಸುಳ್ಯ, ಎಸ್ಕೆಎಸ್ಸೆಸ್ಸೆಫ್ ಸಂಘಟನಾ ಕಾರ್ಯದರ್ಶಿ ನಝೀರ್ ಸುಪ್ರೀಂ, ಕ್ಲಸ್ಟರ್ ಕಾರ್ಯದರ್ಶಿ ಅಕ್ಬರಲಿ ಸುಳ್ಯ, ಅಡ್ಕ ಶಾಖೆ ಅಧ್ಯಕ್ಷ ಶಾಫಿ ಮಡಿಕೇರಿ, ಶಾಫಿ ಕುತ್ತಮೊಟ್ಟೆ, ರಝಾಕ್ ಕರಾವಳಿ, ಶರೀಫ್ ಕೊಲ್ಲರಮಾಲೆ, ಝಬೈರ್ ಅರಂತೋಡು, ಹಾರಿಸ್ ಅರಂತೋಡು, ಅಬ್ದುಲ್ಲ ಪೈಝಿ ಪೈಂಬಚ್ಚಾಲು, ಶೈಖಾಲಿ ಕುಕ್ಕುಂಬಳ, ಆಶಿಕ್ ಸುಳ್ಯ, ಅಹ್ಮದ್ ಸುಳ್ಯ ಮುಂತಾದವರು ಉಪಸ್ಥಿತರಿದ್ದರು.







