ಸುಳ್ಯ: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಡೆಂಗ್ ಪೀಡಿತ ವಿದ್ಯಾರ್ಥಿ ರಾಹುಲ್‌ಗೆ ನೆರವು

ಸುಳ್ಯ, ಸೆ.26: ಸುಳ್ಯದ ರೋಟರಿ ಪ್ರಥಮ ಪಿಯು ವಿದ್ಯಾರ್ಥಿ ರಾಹುಲ್ (19) ಜಟ್ಟಿಪಳ್ಳ ಎಂಬ ಯುವಕ ಡೆಂಗ್ ಜ್ವರದಿಂದ ಬಳಲುತ್ತಿದ್ದು, ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ರಾಹುಲ್ ಕುಟುಂಬಕ್ಕೆ ಎಸ್ಕೆಎಸ್ಸೆಸ್ಸೆಫ್ ಸುಳ್ಯವಲಯ ವತಿಯಿಂದ ಧನಸಹಾಯವನ್ನು ವಿತರಿಸಲಾಯಿತು. ಸೈಯದ್ ಝೈನುಲ್ ಆಬೀದೀನ್ ತಂಙಳ್ ದುಗಲಡ್ಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಾಹೀದ್, ಎಸ್ಕೆಎಸ್ಸೆಸ್ಸೆಫ್ ಸುಳ್ಯ ವಲಯದ ಅಧ್ಯಕ್ಷ ಶಾಫಿ ದಾರಿಮಿ ಅಜ್ಜಾವರ, ಸುಳ್ಯ ಕ್ಲಸ್ಟರ್ ಎಸ್ಕೆಎಸ್ಸೆಸ್ಸೆಫ್ ಪ್ರ.ಕಾರ್ಯದರ್ಶಿ ಅಕ್ಪರಲಿ ಕರಾವಳಿ, ಎಸ್‌ವೈಎಸ್ ಸುಳ್ಯ ವಲಯ ಅಧ್ಯಕ್ಷ ಹಮೀದ್ ಹಾಜಿ, ಎಸ್ಕೆಎಸ್ಸೆಸ್ಸೆಫ್ ಸುಳ್ಯ ಕ್ಲಸ್ಟರ್ ಸಂಘಟನಾ ಕಾರ್ಯದರ್ಶಿ ನಝಿರ್ ಸುಪ್ರೀಂ, ಕಾರ್ಯಕರ್ತರಾದ ಶಾಫಿ ಕುತ್ತಮೊಟ್ಟೆ, ಅಹ್ಮದ್ ಸುಳ್ಯ, ಶಾಫಿ ಅಡ್ಕ, ಅಶಿಕ್ ಸುಳ್ಯ, ಶರೀಫ್ ಕೊಲ್ಲರಮೂಲೆ, ಶೈಖಾಲಿ ಕುಕ್ಕುಂಬಳ ಹಾಗೂ ಹರೀಶ್ ಬಂಟ್ವಾಳ, ಜಯರಾಮ ಸುಳ್ಯ ಮತ್ತಿತರರು ಹಾಜರಿದ್ದರು.
Next Story





