650 ರೂ.ಗೆ ಮಗುವಿನ ಮಾರಾಟ

ಅಗರ್ತಲಾ, ಸೆ.26: ತ್ರಿಪುರದ ಹಿಂದುಳಿದ ಧಲಾಯಿ ಜಿಲ್ಲೆಯಲ್ಲಿ ಬುಡಕಟ್ಟು ದಂಪತಿಯೊಂದು ತಮ್ಮ ಹೆಣ್ಣು ಮಗುವನ್ನು ಸಾಕಲಾರದೆ ಮಾರಾಟ ಮಾಡಿದ ಘಟನೆಯೊಂದು ವರದಿಯಾಗಿದ್ದು, ಅದು ರಾಜ್ಯದ ದಯನೀಯ ಸ್ಥಿತಿಯ ಮೇಲೆ ಬೆಳಕು ಚೆಲ್ಲಿದೆ.
ಬಡತನ ರೇಖೆಗಿಂತ ಕೆಳಗಿನ(ಬಿಪಿಎಲ್) ವರ್ಗಕ್ಕೆ ಸೇರಿರುವ ಕುಟುಂಬವು ಕೇವಲ ರೂ. 650ಕ್ಕೆ ಮಗುವನ್ನು ಮಾರಾಟಮಾಡಿದೆಯೆಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.
ಘಟನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಟಿಎಂಸಿ ಶಾಸಕ ಸುದೀಪ್ ರಾಯ್ ಬರ್ಮನ್, ಬುಡಕಟ್ಟು ವರ್ಗಗಳು ತೀರಾ ದುರ್ಗಮ ಪ್ರದೇಶಗಳಲ್ಲಿ ವಾಸಿಸುತ್ತಿವೆ. ಅವು ಆಹಾರವಿಲ್ಲದೆ ಸಾಯುತ್ತಿವೆ. ಇಂತಹ ಘಟನೆಗಳನ್ನು ಸರಕಾರ ಮುಚ್ಚಿ ಹಾಕುತ್ತಿರುವುದರಿಂದ ಮಾಧ್ಯಮಗಳಲ್ಲಿ ಪ್ರಕಟವಾಗುವುದು ವಿರಳ ಎಂದಿದ್ದಾರೆ.
Next Story





