ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ್ ಪತ್ನಿಗೆ ಉಪ ನೋಂದಣಾಧಿಕಾರಿ ಹುದ್ದೆ

ಬೆಂಗಳೂರು, ಸೆ.26: ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ್ ಪತ್ನಿ ವಿದ್ಯಾ ಅವರಿಗೆ ರಾಜ್ಯ ಸರಕಾರ ಉಪ ನೋಂದಣಾಧಿಕಾರಿ ಹುದ್ದೆ ನೀಡಿದೆ.
ಚಿಕ್ಕಮಗಳೂರು ಡಿವೈಎಸ್‌ಪಿಯಾಗಿದ್ದ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅನುಕಂಪದ ಆಧಾರದಲ್ಲಿ ಅವರ ಪತ್ನಿ ವಿದ್ಯಾ ಅವರನ್ನು ರಾಜ್ಯ ಸರಕಾರ ಉಪ ನೋಂದಣಾಧಿಕಾರಿಯನ್ನಾಗಿ ನೇಮಕ ಮಾಡಿದೆ. ಮುಖ್ಯ ಮಂತ್ರಿ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಇಂದು ವಿದ್ಯಾಗೆ ನೇಮಕಾತಿ ಆದೇಶ ಪತ್ರ ನೀಡಿದರು.
Next Story





