ಮಂಗಳೂರು ಮೀನುಗಾರರಿಗೆ ಮಾಂಜಿ ಜಾಕ್ ಪಾಟ್
ಟನ್ನುಗಟ್ಟಲೆ ತೂಕ, ಲಕ್ಷಗಟ್ಟಲೆ ಮೌಲ್ಯ

ಮಂಗಳೂರು, ಸೆ.26: ನಗರದ ಬಂದರ್ ಮೀನುಗಾರಿಕಾ ದಕ್ಕೆಯಲ್ಲಿ ಇಂದು ಮೀನಿನ ಸುಗ್ಗಿ. ಬೆಳಗ್ಗೆ ದಡಕ್ಕೆ ಬಂದ ಎರಡು ಬೋಟ್‌ಗಳಲ್ಲಿ ಸುಮಾರು 40 ಲಕ್ಷ ರೂ. ಮೌಲ್ಯದ ಮೀನು ಲಭಿಸಿರುವ ಬಗ್ಗೆ ವರದಿಯಾಗಿದೆ.
ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಅಬ್ದುರ್ರಝಾಕ್ ಎಂಬವರಿಗೆ ಸೇರಿದ ಅಲ್ ರಮೀಝ್ ಬೋಟ್ ಮತ್ತು ಎಂಪಿಎಚ್ ಎಂಬ ಎರಡು ಬೋಟ್‌ಗಳು ಇಂದು ಮುಂಜಾನೆ ದಕ್ಕೆಗೆ ಆಗಮಿಸಿತ್ತು. ಎರಡೂ ಬೋಟ್‌ಗಳಿಗೆ ಸುಮಾರು 16 ಟನ್‌ಗಳಷ್ಟು ಕಪ್ಪು ಪಾಂಫ್ಲೆಟ್ (ಮಾಂಜಿ), ಸುಮಾರು 6 ಟನ್‌ಗಳಷ್ಟು ರಿಬ್ಬನ್ ಫಿಶ್ (ಪಾಂಬಲ್) ಬೊಂಡಾಸ್ ಮತ್ತು ಕಪ್ಪೆ ಬೊಂಡಾಸ್‌ಗಳು ದೊರಕಿವೆ.
ಬಲೆಗೆ ಸಿಲುಕಿದ ಮೀನುಗಳ ಪೈಕಿ ಪಾಂಫ್ಲೆಟ್‌ಗೆ ದುಬಾರಿ ಬೆಲೆ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ.
Next Story





