ವಿದ್ಯಾರ್ಥಿಗಳು ಪ್ರಜ್ಞ್ಞಾವಂತ ನಾಗರಿಕರಾಗಿ: ಶಾಸಕ ದತ್ತ
ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಕಡೂರು, ಸೆ.26: ಯುವಕರು ದೇಶದ ಭವಿಷ್ಯ ರೂಪಿಸುವವರು. ವಿದ್ಯಾರ್ಥಿಗಳು ಪ್ರಜ್ಞ್ಞಾವಂತ ನಾಗರಿಕರಾಗಬೇಕಿದೆ. ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಕೈಯಲ್ಲಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಪಠ್ಯೇತರರಾಗುವುದು ಮುಖ್ಯವಲ್ಲ. ಉತ್ತಮ ನಾಗರಿಕ ಸಮಾಜದವರಾಗಿರಬೇಕು. ಯಾವುದೇ ಡಿಗ್ರಿಗಳಿಗೆ ಅರ್ಥವಿಲ್ಲ. ಅದೇ ರೀತಿ ರಾಜಕೀಯ ಪದವಿಗಳಿಗೂ ಅರ್ಥವಿಲ್ಲ. ಇವುಗಳು ತಾತ್ಕಾಲಿಕವಾದವು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಂಕುಚಿತ ಮನೋಭಾವಗಳೇ ಹೆಚ್ಚಾಗಿವೆ. ಜನವಿರೋಧಿಗಳಾಗಿದ್ದವರೂ ಸಹ ಜನಪ್ರಿಯವಾಗಿರುತ್ತಾರೆ. ರಾಜಕಾರಣಿಗಳು ಪ್ರಚಾರಪ್ರಿಯರು. ಮನ್ನಣೆಯ ಹುಚ್ಚು ಎಲ್ಲರಲ್ಲೂ ಮೂಡಿದೆ, ಸಮಾಜದ ವ್ಯವಸ್ಥೆ ದರಿದ್ರ ಸ್ಥಿತಿಗೆ ತಲುಪಿದೆ. ಸೇವಾ ಶಿಬಿರಗಳು ಪರಿಪೂರ್ಣ ನಾಗರಿಕರನ್ನಾಗಿ ರೂಪಿಸುವುದು. ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಉತ್ತಮರನ್ನು ರೂಪಿಸುತ್ತದೆ. ಅಭಿವೃದ್ಧಿ ಶ್ರೀಮಂತಿಕೆ ಕೈಬಿಡಬೇಕು. ಸರಳತೆಯ ವೌಲ್ಯ ಎಲ್ಲರಲ್ಲೂ ಆಗಬೇಕಿದೆ ಎಂದು ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಲಯದ ಡಾ. ನಿತ್ಯಾನಂದ ಬಿ. ಶೆಟ್ಟಿ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಎಂ.ಮಾದಪ್ಪ, ಉಪಾಧ್ಯಕ್ಷ ರಾಜೇಶ್, ಕಾಲೇಜು ಪ್ರಾಂಶುಪಾಲ ಎ.ಜಿ. ಶ್ರೀಧರಬಾಬು, ಸಾಂಸ್ಕೃತಿಕ ವೇದಿಕೆ ಸಂಚಾಲಕ ದೊರೇಶ್, ಕಾಲೇಜು ನಿರ್ದೇಶಕರಾದ ಎಂ. ರೇಣುಕಾರಾಧ್ಯ, ಸಿ.ಕೆ. ಬಸವರಾಜಪ್ಪ, ನೀಲಪ್ಪ, ಸಿ.ಕೆ. ಸ್ವಾಮಿ, ಮಂಜುನಾಥ್‌ಗುಪ್ತ, ರಾಜಶೇಖರ್, ವಸಂತ್‌ಕುಮಾರ್, ಮಂಜುನಾಥ್. ಕೆ.ಎಚ್., ಅಬ್ದುಲ್ ಮಜೀದ್, ನಟರಾಜ್, ಎಂ.ಆರ್. ಬಸವರಾಜ್, ಗೋಪಾಲ್. ಕೆ.ಎಚ್. ಮತ್ತಿತರರು ಉಪಸ್ಥಿತರಿದ್ದರು.







