Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ

ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ

ಕೀರ್ತಿರಾಜ್, ವಂದನಾಗೆ ಅಗ್ರಸ್ಥಾನ

ವಾರ್ತಾಭಾರತಿವಾರ್ತಾಭಾರತಿ26 Sept 2016 10:05 PM IST
share
ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ

ಚಿಕ್ಕಮಗಳೂರು, ಸೆ.26: ಪಶ್ಚಿಮಘಟ್ಟ ಸಂರಕ್ಷಣೆಗಾಗಿ ಗಾಲ್ಫ್ ಕ್ಲಬ್ ಆಯೋಜಿಸಿದ್ದ ರಾಜ್ಯಮಟ್ಟದ ಗುಡ್ಡಗಾಡು ಓಟದ ಪುರುಷರ ವಿಭಾಗದಲ್ಲಿ ಕೀರ್ತಿರಾಜ್ ಮತ್ತು ಮಹಿಳಾ ವಿಭಾಗದಲ್ಲಿ ವಂದನಾ ಅಗ್ರಸ್ಥಾನಗಳಿಸಿದ್ದು, ಇಬ್ಬರೂ ಸೇರಿದಂತೆ ಹೆಚ್ಚಿನ ಬಹುಮಾನಗಳು ಚಿಕ್ಕಮಗಳೂರಿನ ಜಿಲ್ಲೆಯ ಪಾಲಾಗಿವೆೆ.

 ಇಂದು ಚಿಕ್ಕಮಗಳೂರು ಗಾಲ್ಫ್ ಕ್ಲಬ್‌ನಿಂದ ಆರಂಭಗೊಂಡ ಗುಡ್ಡಗಾಡು ಓಟವನ್ನು ಎಸ್ಪಿ ಅಣ್ಣಾಮಲೈ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. 10 ಕಿ.ಮೀ.ದೂರದ ಪುರುಷರ ವಿಭಾಗದ ಮೊದಲ ತಂಡದ ಸ್ಪರ್ಧಿಗಳು ಕ್ಲಬ್ ಆವರಣದಲ್ಲೇ 1.5 ಕಿ.ಮೀ.ಓಡಿ ನಂತರ ಅಲ್ಲಂಪುರ, ಕೈಮರ ಮೂಲಕ ಗಿರಿರಸ್ತೆಯಲ್ಲಿ ಹಾದು ತಿಪ್ಪನಹಳ್ಳಿ ಎಸ್ಟೇಟಿನ ಪ್ರಕೃತಿ ಮನೆಯಂಗಳವನ್ನು ತಲುಪಿದರು. ಮೊದಲ ಸ್ಪರ್ಧಿ ಕಲ್ಲತ್ತಿಪುರದ ಗ್ರಾಮೀಣ ಪ್ರತಿಭೆ ಕೀರ್ತಿರಾಜ್ ಕೇವಲ 41ನಿಮಿಷದಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದರು. ಒಂದು ನಿಮಿಷ ತಡವಾಗಿ ತಲುಪಿದ ಪ್ರಥಮ ಬಿ.ಎ. ವಿದ್ಯಾರ್ಥಿ ರುದ್ರಪ್ಪ ದ್ವಿತೀಯ ಸ್ಥಾನ ಗಳಿಸಿದರೆ, 43 ನಿಮಿಷಗಳಲ್ಲಿ ಗುರಿತಲುಪಿದ ಉಜಿರೆ ಎಸ್‌ಡಿಎಂ ಕಾಲೇಜಿನ ಎಚ್.ಎಸ್.ಅಭಿಷೇಕ್ ತೃತೀಯಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದ 10ಕಿ.ಮೀ. ಗುಡ್ಡಗಾಡು ಓಟವನ್ನು ವಿಶ್ರಾಂತ ಜಿಲ್ಲಾಧಿಕಾರಿ ಚನ್ನಪ್ಪಗೌಡ ಉದ್ಘಾಟಿಸಿದರು. ನಗರದ ರಾಮಹಳ್ಳಿವಾಸಿ ವಂದನಾ 58 ನಿಮಿಷಗಳಲ್ಲಿ ಗುರಿತಲುಪಿ ಮೊದಲ ಸ್ಥಾನ ಗಳಿಸಿದರು. ಪ್ರಸ್ತುತ ಶಿವಮೊಗ್ಗದಲ್ಲಿ ಸಿಪಿಎಡ್ ವ್ಯಾಸಂಗ ಮಾಡುತ್ತಿರುವ ವಂದನಾ ಈವರೆಗೆ ಏಳುರಾಷ್ಟ್ರೀಯ ಬಹುಮಾನಗಳನ್ನು ಗಳಿಸಿರುವ ಅಥ್ಲಿಟ್. ಬೆಂಗಳೂರಿನ ಪ್ರಿಯಾಂಕಾಮಲ್ಲೇಗೌಡ ದ್ವಿತೀಯಸ್ಥಾನ ಗಳಿಸಿದರೆ ಶೃಂಗೇರಿಯ ಗಾನವಿ ತೃತೀಯ ಬಹುಮಾನ ಗಳಿಸಿದರು. ಮಹಿಳೆಯರ 5ಕಿ.ಮೀ.ಓಟದಲ್ಲಿ ನಗರದ ಶಿಶಿರಗೌಡ ಪ್ರಥಮ, ಬೆಂಗಳೂರಿನ ಸುಧಾಭಟ್ ದ್ವಿತೀಯ ಹಾಗೂ ಶಾನ್ಸಿ ತೃತೀಯಬಹುಮಾನ ಗಳಿಸಿದರು. ಮುಳ್ಳಯ್ಯನಗಿರಿ ತಪ್ಪಲಿನ ಹಸಿರು ವನಸಿರಿನಡುವಿನ ಪ್ರಕೃತಿ ಮನೆಯಂಗಳದಲ್ಲಿ ಬಹುಮಾನಗಳನ್ನು ಮಹಿಳಾ ಜಾಗೃತಿಸಂಘದ ಅಧ್ಯಕ್ಷೆ ಗೌರಮ ್ಮಬಸವೇಗೌಡ, ಗಾಲ್ಫ್ ಕ್ಲಬ್ ಅಧ್ಯಕ್ಷ ಎ.ಬಿ.ಸುದರ್ಶನ್ ಮತ್ತಿತರ ಗಣ್ಯರು ವಿತರಿಸಿದರು. ಪ್ರಥಮ ಸ್ಥಾನಗಳಿಸಿದವರಿಗೆ 15,000 ರೂ., ದ್ವಿತೀಯ 10,000ರೂ., ತೃತೀಯ 5,000ರೂ.ನಗದುಬಹುಮಾದೊಂದಿಗೆ ಆಕರ್ಷಕ ಶೀಲ್ಡ್ ನೀಡಿ ಗೌರವಿಸಲಾಯಿತು. ಪ್ರಾಯೋಜಕ ಲೆಗಸಿ ಮುಖ್ಯಸ್ಥ ಕೃಷ್ಣಮೂರ್ತಿ, ಗಾಲ್ಫ್ ಕ್ಲಬ್ ಪದಾಧಿಕಾರಿಗಳಾದ ಎ.ಬಿ.ಮಲ್ಲಿಕಾರ್ಜುನ, ಬಿ.ಎಚ್.ನರೇಂದ್ರ, ಟಿ.ಎಂ.ಜಯದೇವ್, ಸತ್ಯನಾರಾಯಣ, ವಿಜಯಕುಮಾರ್, ಗೋಪಾಲಕೃಷ್ಣ ಮತ್ತಿತರರು ಪದಕ ವಿತರಿಸಿದರು.

  ಪಶ್ಚಿಮಘಟ್ಟದ ಜಾಗೃತಿಗಾಗಿ ಆಯೋಜನೆಗೊಂಡ ಓಟದಲ್ಲಿ ಬೆಂಗಳೂರು ವಿವಿಧೆಡೆಯಿಂದ ಆಗಮಿಸಿದ್ದ 90ಕ್ಕೂಹೆಚ್ಚು ಮಂದಿಪಾಲ್ಗೊಂಡಿದ್ದರು. ಹಿರಿಯ ನಾಗರಿಕರಾದ ಹಿರೇಕೊಳಲೆಯ ಲೇಖಾ ಚಂದ್ರಶೇಖರ್, ಮೈಸೂರಿನ ಕೃಷ್ಣಮೂರ್ತಿ ಗುರಿ ತಲುಪಿ ಗಮನಸೆಳೆದರು. ಬೆಂಗಳೂರಿನ ಅಥ್ಲೆಟಿಕ್ ತರಬೇತುದಾರ ಧರ್ಮೇಂದರ್, ಐಎನ್‌ಎಸ್ ಕೋಚ್‌ಗಳಾಗಿದ್ದ ಭಾಸ್ಕರ್, ಫ್ರಾಂಕಿ ಮತ್ತಿತರರು ಸ್ಪರ್ಧೆಯನ್ನು ನಡೆಸಿಕೊಟ್ಟರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X