ನವಜಾತ ಶಿಶು = 80 ವರ್ಷದ ವೃದ್ಧ !

ಈಗಷ್ಟೇ ಹುಟ್ಟಿದ ಮಗುವಿಗೆ ಗುಳಿಬಿದ್ದ ಕಣ್ಣುಗಳು, ಸುಕ್ಕುಗಟ್ಟಿದ ಚರ್ಮ, ದುರ್ಬಲ ಮೈಕಟ್ಟು - ಹೆಚ್ಚು ಕಡಿಮೆ 80 ವರ್ಷದ ವೃದ್ಧನ ಲುಕ್ ! ಇದೇನು ಆಂಗ್ಲ ಚಿತ್ರ ' ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟ್ಟನ್ ' ಚಿತ್ರದ ದೃಶ್ಯವಲ್ಲ ! ಇದು ಬಾಂಗ್ಲಾ ದೇಶದ ಮಗುರ ಜಿಲ್ಲೆಯಲ್ಲಿ ರವಿವಾರ ಮಧ್ಯಾಹ್ನ ಜನ್ಮ ತಾಳಿದ ಅತ್ಯರೂಪದ ಪ್ರೊಜೆರಿಯ ಕಾಯಿಲೆ ಪೀಡಿತ ಮಗುವಿದು. ಈ ಕಾಯಿಲೆ ಪೀಡಿತರು ಸಾಮಾನ್ಯ ವಯಸ್ಸಿಗಿಂತ ಎಂಟು ಪಟ್ಟು ಹೆಚ್ಚು ವಯಸ್ಸಿನವರಾಗಿ ಕಾಣುತ್ತಾರೆ.
ಇಲ್ಲಿನ ಬಡ ರೈತ ದಂಪತಿ ಪಾರುಲ್ ಪತ್ರೊ ಹಾಗು ಬಿಸ್ವಜಿತ್ ಪತ್ರೊ ಅವರ ಈ 'ವೃದ್ಧ ' ಪುತ್ರನನ್ನು ನೋಡಲು ಜನರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ವಿಶೇಷವೆಂದರೆ ಈ ಬಡ ದಂಪತಿಗೆ ತಮ್ಮ ಮಗು ಇಂತಹ ಕಾಯಿಲೆ ಪೀಡಿತವಾಗಿರುವ ಕುರಿತು ದುಖ: ವಿಲ್ಲ. ಬದಲಿಗೆ ಪುತ್ರ ನನ್ನನ್ನೇ ಹೋಲುತ್ತಾನೆ ಎಂದು ಬಂದವರು ಹೇಳಿದಾಗ ತಂದೆಯಲ್ಲಿ ಮುಖದಲ್ಲಿ ದೊಡ್ಡ ನಗು. " ಈ ಬಗ್ಗೆ ನನಗೇನೂ ಬೇಸರವಿಲ್ಲ " ಎಂದೇ ಹೇಳುತ್ತಾರೆ ಬಿಸ್ವಜಿತ್.
ಹೆಚ್ಚಿನ ಪ್ರೊಜೆರಿಯ ಪೀಡಿತ ಮಕ್ಕಳು ಬೇಗ ಸಾವಿಗೀಡಾಗುತ್ತಾರೆ. ಆದರೆ " ನಮ್ಮ ಮಗು ಆರೋಗ್ಯವಾಗಿ ಬೆಳೆಯುತ್ತದೆ " ಎಂಬ ಭರವಸೆಯಲ್ಲಿದ್ದಾರೆ ಈ ದಂಪತಿ. " ಆತನ ತಂದೆಯೂ ಹೆಚ್ಚು ವಯಸ್ಸಾದಂತೆ ಕಾಣುತ್ತಾನೆ . ಹಾಗಾಗಿ ಆತನೂ ಹಾಗೆ ಕಾಣುತ್ತಿದ್ದಾನೆ. ಮುಂದೆ ಆತ ಸಾಮಾನ್ಯರಂತೆ ಆಗುತ್ತಾನೆ " ಎಂದು ಹೇಳುತ್ತಾರೆ ಮಗುವಿನ ಚಿಕ್ಕಪ್ಪ ಅರಬಿಂದು ಮೊಂಡಲ್.
ವೈದ್ಯರಿಗೆ ಅಚ್ಚರಿ ಎಂದರೆ ಇಂತಹ ಅಪರೂಪದ ಕಾಯಿಲೆಯಿದ್ದೂ ತಾಯಿ ಹಾಗು ಮಗು ಈಗ ' ಆರೋಗ್ಯವಾಗಿದ್ದಾರೆ'.







