ಬಡ ತರಕಾರಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ: ಖಂಡನೆ
ಪುತ್ತೂರು, ಸೆ.26: ಇಲ್ಲಿನ ನಗರಸಭಾ ಅಧಿಕಾರಿಗಳು ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸುತ್ತಿದ್ದು, ಹೊಟ್ಟೆ ಪಾಡಿಗಾಗಿ ತರಕಾರಿ ವ್ಯಾಪಾರ ನಡೆಸುತ್ತಿದ್ದ ಸಣ್ಣ ಪುಟ್ಟ ಬಡ ವ್ಯಾಪಾರಿಗಳನ್ನು ಪೊಲೀಸ್ ಬಲ ಪ್ರಯೋಗದಲ್ಲಿ ಬಲವಂತದಲ್ಲಿ ತೆರವುಗೊಳಿಸುತ್ತಿರುವುದು ಖಂಡನೀಯ ಎಂದು ಪುತ್ತೂರು ನಗರಸಭಾ ಸದಸ್ಯ ರಾಜೇಶ್ ಬನ್ನೂರು ದೂರಿದ್ದಾರೆ. ಅವರು ಸೋಮವಾರಮಾಧ್ಯಮಗಳೊಂದಿಗೆ ಮಾತನಾಡಿ, ರವಿವಾರ ಕೆಲವು ಸಣ್ಣ ಪುಟ್ಟ ತರಕಾರಿ ವ್ಯಾಪಾರಿಗಳು ಮುಚ್ಚಿರುವ ಅಂಗಡಿ ಬದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವುದು ಕಳೆದ ಹಲವು ವರ್ಷಗಳಿಂದ ನಡೆದು ಬಂದಿದೆ. ಇವರು ಯಾರೂ ಫುಟ್‌ಪಾತ್‌ನಲ್ಲಿ ತರಕಾರಿ ಹರಡುವುದಿಲ್ಲ. ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಆಗುತ್ತಿರಲಿಲ್ಲ. ಆದರೂ ಪೊಲೀಸರ ಮೂಲಕ ಬಲವಂತದಿಂದ ತೆರವುಗೊಳಿಸಲಾಗಿದೆ ಎಂದವರು ಆರೋಪಿಸಿದರು.
Next Story





