‘ಮುರುಘಾ ಶ್ರೀ ಪ್ರಶಸ್ತಿ’ಗೆ ಐವರ ಆಯ್ಕೆ
ಚಿತ್ರದುರ್ಗ, ಸೆ. 27: ನಗರದ ಮುರುಘಾಮಠದ ವತಿಯಿಂದ ಅ.7ರಿಂದ 13ರ ವರೆಗೆ ‘ಶರಣಸಂಸ್ಕತಿ ಉತ್ಸವ’ ನಡೆಯಲಿದ್ದು, ಪ್ರತಿಷ್ಠಿತ ‘ಮುರುಘಾಶ್ರೀ ಪ್ರಶಸ್ತಿ’ಯನ್ನು ಐದು ಮಂದಿಗೆ ನೀಡಲಾಗುವುದು ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.
ಮಂಗಳವಾರ ಶ್ರೀಮಠದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿರಿಯ ರಂಗಕರ್ಮಿ ಪ್ರಸನ್ನ, ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಮದಕರಿ ನಾಯಕ ವಿದ್ಯಾಸಂಸ್ಥೆ ಡಿ.ಬೋರಪ್ಪ, ಹಿರಿಯ ಸಾಹಿತಿ ಗೀತಾ ನಾಗಭೂಷಣ, ಮಹಾದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರೇಶ್ ಸೊಬರದ ಮಠ ಇವರುಗಳನ್ನು ‘ಮುರುಘಾಶ್ರೀ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದರು.
ಕೊಪ್ಪಳದ ಕು.ಮಲ್ಲಮ್ಮ, ಕು.ಮಾಧವಿ ಮತ್ತು ಕು.ಲಾವಣ್ಯ ಇವರುಗಳಿಗೆ ‘ಶೌರ್ಯ ಪ್ರಶಸ್ತಿ’ ನೀಡಿ ಗೌರಸಲಾಗುವುದು. ಈ ಬಾರಿ ವಿವಿಧ ಚಿಂತನಾಗೋಷ್ಟಿಗಳನ್ನು ನಡೆಸಲಾಗುತ್ತಿದ್ದು, ಗೋಷ್ಟಿಗಳಲ್ಲಿ ರಾಜಕೀಯ ಮುಖಂಡರು, ಹೆಸರಾಂತ ಲೇಖಕರು, ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆಂದರು.
ಸುದ್ದಿಗೋಷ್ಟಿಯಲ್ಲಿ ಪ್ರಸನ್ನ ವಾಲ್ಮೀಕಿ ಮಹಾಸ್ವಾಮಿ, ಎಂಎಲ್‌ಸಿ ಜಯಮ್ಮ ಬಾಲರಾಜ್, ಪಾತ್ಯರಾಜನ್, ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಎಂ.ವೀರೇಶ್, ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್, ಎಸ್‌ಜೆಎಂ ವಿದ್ಯಾಪೀಠ ಕಾರ್ಯದರ್ಶಿ ಕೆ.ವಿ. ಪ್ರಭಾಕರ್, ಕಾರ್ಯ ನಿರ್ವಹಣಾ ನಿರ್ದೇಶಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಶೇಷಣ್ಣ ಕುಮಾರ್, ನಿರಂಜನಮೂರ್ತಿ, ಮಲ್ಲಿಕಾರ್ಜುನಯ್ಯ, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.






