ಭಾಸ್ಕರ್ ಶೆಟ್ಟಿ ಕೊಲೆ: ಅ.1ಕ್ಕೆ ಜಾಮೀನು ಅರ್ಜಿ ಆದೇಶ

ಉಡುಪಿ, ಸೆ.27: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಸಾಕ್ಷನಾಶ ಆರೋಪಿಗಳಾದ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರರ ಜಾಮೀನು ಅರ್ಜಿಯ ವಿಚಾರಣೆಯು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪೂರ್ಣಗೊಂಡಿದ್ದು, ನ್ಯಾಯಾಧೀಶರು ಈ ಕುರಿತ ಆದೇಶವನ್ನು ಅ.1ರಂದು ನೀಡಲಿದ್ದಾರೆ.
ಈ ಸಂಬಂಧ ಸೆ.24ರಂದು ಆರೋಪಿ ಪರ ವಕೀಲ ವೈ.ವಿಕ್ರಂ ಹೆಗ್ಡೆ ತಮ್ಮ ವಾದ ಮಂಡಿಸಿದ್ದರು. ಇಂದು ನಡೆದ ವಿಚಾರಣೆಯಲ್ಲಿ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಪ್ರತಿವಾದವನ್ನು ಮಂಡಿಸಿದರು.
ವಾದ ಪ್ರತಿ ವಾದವನ್ನು ಆಲಿಸಿದ ನ್ಯಾಯಾಧೀಶ ಶಿವಶಂಕರ್ ಅಮರಣ್ಣನವರ್ ಅರ್ಜಿ ಸಂಬಂಧ ಅಂತಿಮ ಆದೇಶವನ್ನು ಅ.1ಕ್ಕೆ ನೀಡುವುದಾಗಿ ವಿಚಾರಣೆಯನ್ನು ಮುಂದೂಡಿದರು.
Next Story





