ಕಡಲತೀರ ಸ್ವಚ್ಛತಾ ಕಾರ್ಯಕ್ರಮ
ಕಾರವಾರ, ಸೆ.27: ಇಲ್ಲಿನ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಎಂಟನೆ ನೇವಲ್ ಎನ್‌ಸಿಸಿ ಇವರ ಸಹಯೋಗದಲ್ಲಿ ನಡೆಸಲಾಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಾರವಾರದ ಸೇಂಟ್ ಜೋಸೆಫ್ ಪ್ರೌಢಶಾಲೆ, ಶಿವಾಜಿ ಪ್ರೌಢ ಶಾಲೆ ಹಾಗೂ ಹಿಂದೂ ಪ್ರೌಢ ಶಾಲೆ ಮತ್ತು ಕಾಲೇಜಿನ ನೂರಾರು ಕೆಡೆಟ್‌ಗಳು ಭಾಗವಹಿಸಿ ಸ್ವಚ್ಛತೆಯ ಅರಿವನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಕಡಲತೀರವನ್ನು ಸ್ವಚ್ಛಗೊಳಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಚೀಫ್ ಆಫೀಸರ್ ಅನಿಲ್ ಮಡಿವಾಳ ಹಾಗೂ ದೇವಿದಾಸ ಸಾವಂತ ವಹಿಸಿ, ಕೆಡೆಟ್‌ಗಳಿಗೆ ಮಾರ್ಗದರ್ಶನ ನೀಡಿದರು. ಎನ್‌ಸಿಸಿ ಕಚೇರಿಯ ಸಿಬ್ಬಂದಿ ಭಾಗವಹಿಸಿದ್ದರು.
Next Story





