ನೀರಿನ ಘಟಕ ಮುಚ್ಚುವಂತೆ ಅಧಿಕಾರಿಗಳ ಕಿರುಕುಳ: ಆರೋಪ
ಕಿರುಕುಳ: ಆರೋಪ

ಸೊರಬ, ಸೆ. 27: ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅಧಿಕಾರಿಗಳು ಅನಗತ್ಯ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ದಂಡಾವತಿ ಫ್ರೆಂಡ್ಸ್ ಅಸೋಸಿಯೇಶನ್ ವತಿಯಿಂದ ತಹಶೀಲ್ದಾರ್ ಎಲ್.ಬಿ. ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು. ಪರಿಶುದ್ಧ ನೀರು ಸಿಗಲಿ ಎಂಬ ಉದ್ದೇಶದಿಂದ ಸಂಸ್ಥೆಯ ವತಿಯಿಂದ 2013ರ ಮಾರ್ಚ್ 29 ರಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಆದರೇ, ಯಾವುದೇ ವಾಣಿಜ್ಯ ಉದ್ದೇಶದ ಗುರಿಯನ್ನು ಸಂಸ್ಥೆ ಹೊಂದಿಲ್ಲ. ಬದಲಿಗೆ ನಿರ್ಮಾಣದ ವೆಚ್ಚವನ್ನು ನಾವುಗಳೇ ಭರಿಸಿಕೊಂಡು ಉಪಯೋಗಿಸಲಾಗುತ್ತಿದೆ. ಇತ್ತೀಚೆಗೆ ಶುದ್ಧ ನೀರಿನ ಘಟಕ ಮುಚ್ಚಿರುವುದರಿಂದ ಕುಡಿಯಲು ಪರಿಶುದ್ಧ ನೀರು ಸಿಗದೆ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ಸದಸ್ಯರು ತಿಳಿಸಿದರು. ಇತ್ತೀಚೆಗೆ ಆಹಾರ ಸಂರಕ್ಷಣಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಿಂದ ಘಟಕವನ್ನು ಮುಚ್ಚವಂತೆ ಕಿರುಕುಳ ನೀಡುತ್ತಿರುವುದು ಖಂಡನೀಯ. ಪರಿಶುದ್ಧ ನೀರು ಸಿಗದೆ ಸಂಕಷ್ಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಎಲ್ಲಿಯೂ ನೀರನ್ನು ಮಾರದೇ ಇರುವುದರಿಂದ ಸಂಸ್ಥೆಯ ಸದಸ್ಯರಿಗೆ ಮಾತ್ರ ನೀರಿನ ಪೂರೈಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಸರ್ವರಿಗೂ ಸರಕಾರದ ವತಿಯಿಂದಲೇ ಶುದ್ಧ ನೀರನ್ನು ಪೂರೈಕೆ ಮಾಡುವತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಇ.ಎಚ್. ಮಂಜುನಾಥ್, ಫಕ್ಕೀರಪ್ಪ ಹುಲ್ತಿಕೊಪ್ಪ, ಆರ್. ಅಬ್ದುಲ್ ರಶೀದ್, ಮಂಜಪ್ಪ ಕಾನಕೇರಿ, ರಷೀದ್ ಸಾಬ್, ದೀಪಕ್ ಮತ್ತಿತರರಿದ್ದರು.





