ಸಾನಿಯಾ ಜೋಡಿ ಮೂರನೆ ಸುತ್ತಿಗೆ ಲಗ್ಗೆ
ವೂಹಾನ್ ಓಪನ್ ಟೆನಿಸ್ ಟೂರ್ನಮೆಂಟ್

ವೂಹಾನ್, ಸೆ.27: ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಝಾ ಝೆಕ್‌ನ ಜೊತೆಗಾರ್ತಿ ಬಾರ್ಬೊರಾ ಸ್ಟ್ರೈಕೋವಾರೊಂದಿಗೆ ವೂಹಾನ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಮೂರನೆ ಸುತ್ತಿಗೆ ಪ್ರವೇಶಿಸಿದ್ದಾರೆ.
ಮಂಗಳವಾರ ಇಲ್ಲಿ ನಡೆದ ಮಹಿಳೆಯರ ಡಬಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಇಂಡೋ-ಝೆಕ್ ಜೋಡಿ ಸಾನಿಯಾ-ಸ್ಟ್ರೈಕೋವಾ ಅವರು ಕೆನಡಾ-ಸ್ಪೇನ್‌ನ ಎದುರಾಳಿ ಗ್ಯಾಬ್ರಿಯೆಲಾ ಡಬ್ರೊಸ್ಕಿ ಹಾಗೂ ಮರಿಯಾ ಜೋಸ್ ಜೋಡಿಯನ್ನು 3-6, 6-3, 10-5 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ಸ್ವಿಸ್‌ನ ಮಾರ್ಟಿನಾ ಹಿಂಗಿಸ್‌ರನ್ನು ತೊರೆದ ಬಳಿಕ ಝೆಕ್‌ನ ಸ್ಟೈಕೋವಾರೊಂದಿಗೆ ಸಾನಿಯಾ ಡಬಲ್ಸ್ ಪಂದ್ಯ ಆಡುತ್ತಿದ್ದಾರೆ.
ಸಾನಿಯಾ-ಸ್ಟ್ರೈಕೋವಾ ಒಂದಾದ ಬಳಿಕ ಸಿನ್ಸಿನಾಟಿ ಓಪನ್‌ನಲ್ಲಿ ಮೊದಲ ಪ್ರಶಸ್ತಿಯನ್ನು ಜಯಿಸಿದ್ದರು. ಕಳೆದ ವಾರ ಟೋಕಿಯೊದಲ್ಲಿ ಪಾನ್ ಪೆಸಿಫಿಕ್ ಓಪನ್‌ನ್ನು ಗೆದ್ದುಕೊಂಡಿದ್ದರು.
ಉತ್ತಮ ಪ್ರದರ್ಶನ ನೀಡುತ್ತಿರುವ ಸಾನಿಯಾ ಮಹಿಳೆಯರ ಡಬಲ್ಸ್ ರ್ಯಾಂಕಿಂಗ್‌ನಲ್ಲಿ 9,730 ಅಂಕವನ್ನು ಗಳಿಸಿ ವಿಶ್ವದ ನಂ.1 ಆಟಗಾರ್ತಿ ಎನಿಸಿಕೊಂಡಿದ್ದಾರೆ.
Next Story





