Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಪ್ಪಿನಂಗಡಿ: ಮೆಸ್ಕಾಂ ಅವ್ಯವಸ್ಥೆಗೆ...

ಉಪ್ಪಿನಂಗಡಿ: ಮೆಸ್ಕಾಂ ಅವ್ಯವಸ್ಥೆಗೆ ಗ್ರಾಹಕರ ಪರದಾಟ

ವಾರ್ತಾಭಾರತಿವಾರ್ತಾಭಾರತಿ27 Sept 2016 11:52 PM IST
share
ಉಪ್ಪಿನಂಗಡಿ: ಮೆಸ್ಕಾಂ ಅವ್ಯವಸ್ಥೆಗೆ ಗ್ರಾಹಕರ ಪರದಾಟ

ಉಪ್ಪಿನಂಗಡಿ, ಸೆ.27: ಮೆಸ್ಕಾಂನವರು ಈ ಬಾರಿ ಉಪ್ಪಿನಂಗಡಿ ಸುತ್ತಮುತ್ತಲಿನ ಹೆಚ್ಚಿನ ಗ್ರಾಹಕರಿಗೆ ವಿದ್ಯುತ್ ಬಿಲ್ ಅನ್ನು ಪಾವತಿ ಅವಧಿ ಮುಗಿದ ಬಳಿಕ ನೀಡಿರುವುದರಿಂದ ವಿದ್ಯುತ್ ಗ್ರಾಹಕರು ಬಿಲ್‌ನ ಮೂಲ ಮೊತ್ತಕ್ಕಿಂತ ಹೆಚ್ಚುವರಿ ಬಡ್ಡಿ ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದ್ದು, ವಿದ್ಯುತ್ ಬಿಲ್ ಕಟ್ಟಲು ಪುತ್ತೂರಿಗೆ ತೆರಳಬೇಕಾದ ಸ್ಥಿತಿ ಎದುರಾಗಿದೆ. ಈ ಭಾಗದಲ್ಲಿ ವಿದ್ಯುತ್ ಮಾಪಕ ಓದುವವರು ನೀಡಿದ ಬಿಲ್‌ನಲ್ಲಿ ವಿದ್ಯುತ್ ಬಿಲ್ ಗ್ರಾಹಕರ ಕೈ ಸೇರುವ ಮೊದಲೇ ಬಿಲ್ ಕಟ್ಟುವ ಅವಧಿ ಮುಗಿದಿರುವುದು ಕಂಡು ಬಂದಿದೆ. ಉದಾಹರಣೆಗೆ ರಾಮನಗರದ ಮಹೇಶ್ ಮಸ್ಕರೇನ್ಹಸ್ ಎಂಬವರಿಗೆ ಸೆ.26ರಂದು ಮಾಪಕ ಓದುವವರು ಮನೆಗೆ ಬಂದು ವಿದ್ಯುತ್ ಬಿಲ್ ನೀಡಿದ್ದು, ಅದರಲ್ಲಿ ಮಾಪಕ ಓದಿದ ದಿನಾಂಕ ಸೆ.26 ಎಂದು ನಮೂದಾಗಿದ್ದರೆ, ಬಿಲ್ ಪಾವತಿ ಮಾಡುವ ಕೊನೆಯ ದಿನಾಂಕ ಸೆ.24 ಎಂದು ನಮೂದಾಗಿದೆ.
ಗಾಂಧಿಪಾರ್ಕ್ ಬಳಿಯ ವಿದ್ಯುತ್ ಗ್ರಾಹಕಿ ಜಾಸ್ಪೀನ್ ಮಿನೇಜಸ್ ಎಂಬವರಿಗೆ ನೀಡಿದ ವಿದ್ಯುತ್ ಬಿಲ್‌ನಲ್ಲೂ ದೋಷ ಕಂಡು ಬಂದಿದ್ದು, ಅವರಿಗೆ ಸೆ.26ಕ್ಕೆ ಬಿಲ್ ಸಿಕ್ಕಿದರೆ, ಬಿಲ್ ಪಾವತಿ ಮಾಡುವ ಕೊನೆಯ ದಿನಾಂಕವನ್ನು ಸೆ.25 ಎಂದು ನಮೂದಿಸಲಾಗಿದೆ. ಇನ್ನೂ ಯು.ಟಿ.ಆಸೀಯಮ್ಮ ಎಂಬವರಿಗೆ ಸೆ.27ರಂದು ವಿದ್ಯುತ್ ಬಿಲ್ ಸಿಕ್ಕಿದ್ದು, ಅದರ ಬಿಲ್ ಪಾವತಿ ಕೊನೆಯ ದಿನಾಂಕ ಸೆ.25 ಎಂದು ನಮೂದಾಗಿದೆ.
ತಿಂಗಳ ಮೊದಲ ದಿನಾಂಕದಿಂದ 6ನೆ ತಾರೀಕಿನಂದು ಮೆಸ್ಕಾಂನವರು ಉಪ್ಪಿನಂಗಡಿ ಪಂಚಾಯತ್ ಕಚೇರಿಯಲ್ಲಿ ವಿದ್ಯುತ್ ಬಿಲ್ ವಸೂಲು ಮಾಡುವ ವ್ಯವಸ್ಥೆ ಕಲ್ಪಿಸಿದ್ದಾರೆ. ಅಲ್ಲದೆ ತಿಂಗಳ 25ನೆ ತಾರೀಕಿನಂದು ರಾಮನಗರ ಬಳಿಯ ಲಕ್ಷ್ಮೀನಗರದ ಮೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಬಿಲ್ ವಸೂಲಿ ಮಾಡಲಾಗುತ್ತದೆ. ಉಳಿದ ದಿನಗಳಲ್ಲಿ ಕಚೇರಿ ಅವಧಿಯಲ್ಲಿ ಉಪ್ಪಿನಂಗಡಿಯ ಅಂಚೆ ಕಚೇರಿಯಲ್ಲಿ ಬಿಲ್ ಪಾವತಿಸುವ ಸೌಲಭ್ಯವಿದೆ.
ಆದರೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಬಿಲ್ ಪಾವತಿಯ ಅವಧಿ ಮುಗಿದ ಬಳಿಕ ಅಂಚೆ ಕಚೇರಿಯಲ್ಲಿ ವಿದ್ಯುತ್ ಬಿಲ್ ಸ್ವೀಕರಿಸುವುದಿಲ್ಲ. ಒಂದು ಮೆಸ್ಕಾಂನವರು ತಿಂಗಳಲ್ಲಿ ಎರಡು ಬಾರಿ ಪಂಚಾಯತ್‌ನಲ್ಲಿ ಬಿಲ್ ವಸೂಲು ಮಾಡುವ ಸಂದರ್ಭ ಅಲ್ಲಿಗೆ ತೆರಳಬೇಕು. ಇಲ್ಲದಿದ್ದಲ್ಲಿ ತಿಂಗಳಲ್ಲಿ ಒಂದು ಬಾರಿ ಬಿಲ್ ಪಾವತಿ ವ್ಯವಸ್ಥೆ ಇರುವ ರಾಮನಗರ ಬಳಿಯ ಲಕ್ಷ್ಮೀನಗರಕ್ಕೆ ತೆರಳಬೇಕು. ಇದು ಸಾಧ್ಯವಾಗದಿದ್ದರೆ ಪುತ್ತೂರಿಗೆ ತೆರಳಬೇಕಾದ ಸ್ಥಿತಿ ಎದುರಾಗಿದೆ.
ಈ ತಿಂಗಳು ಮೆಸ್ಕಾಂನವರು ಬಿಲ್ ವಸೂಲಿಗೆ ಪಂಚಾಯತ್‌ಗೆ ಹಾಗೂ ಮೆಸ್ಕಾಂ ಕಚೇರಿಗೆ ಬಂದು ಹೋಗಿಯಾಗಿದ್ದು, ಮುಂದೆ ಅವರು ಬರುವುದು ಮುಂದಿನ ತಿಂಗಳಾಗಿದೆ. ಆದ್ದರಿಂದ ಪಾವತಿ ಅವಧಿ ಮುಗಿದ ಬಳಿಕ ವಿದ್ಯುತ್ ಮಾಪನ ಓದುವವರು ಬಿಲ್ ನೀಡಿದ್ದರಿಂದ ಈ ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಸಲು ದೂರದ ಪುತ್ತೂರಿಗೆ ತೆರಳಬೇಕಾಗಿದ್ದು, ಇದಕ್ಕಾಗಿ ಅನಗತ್ಯ ಶ್ರಮ, ಸಮಯವನ್ನು ವ್ಯರ್ಥ ಮಾಡಬೇಕಾಗಿದೆ. ಅಲ್ಲದೆ ಅವಧಿ ಮುಗಿದ ಬಳಿಕ ವಿದ್ಯುತ್ ಬಿಲ್ ಪಾವತಿಗೆ ಬಡ್ಡಿಯನ್ನು ಕಟ್ಟಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X