1.83 ಕೋ. ವೆಚ್ಚದಲ್ಲಿ ರವೀಂದ್ರ ಕಲಾಭವನ ನವೀಕರಣ: ಮೊಯ್ಲಿ
ಮಂಗಳೂರು ವಿವಿ ಕಾಲೇಜಿನ ಸಂಸ್ಥಾಪನಾ ದಿನಾಚರಣೆ

ಮಂಗಳೂರು, ಸೆ.27: ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ 150ನೆ ವರ್ಷಾ ಚರಣೆಯನ್ನು 2017ರಲ್ಲಿ ಆಚರಿಸಲಾಗು ವುದು. ಈ ಸಂದರ್ಭ 1.83 ಕೋ.ರೂ. ವೆಚ್ಚ ದಲ್ಲಿ ಕಾಲೇಜಿನ ರವೀಂದ್ರ ಕಲಾಭವನ ವನ್ನು ನವೀಕರಿಸಲು ಯುಜಿಸಿ ಅನುದಾನ ಬಿಡುಗಡೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.
ಅವರು ಇಂದು ಮಂಗಳೂರು ವಿಶ್ವವಿದ್ಯಾ ನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ ಕಾಲೇಜಿನ ಸಂಸ್ಥಾಪನಾ ದಿನಾಚರಣೆ, ಬಿಸಿಯೂಟಕ್ಕೆ ಚಾಲನೆ, ಕೊಠಡಿ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಈ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿ ತಾನು ಸಾಕಷ್ಟು ಜ್ಞಾನ ಸಂಪತ್ತನ್ನು ಪಡೆದಿದ್ದೇನೆ. ಉತ್ತಮ ಶಿಕ್ಷಕರು, ಉತ್ತಮ ಗ್ರಂಥಾಲಯದ ಸೌಲಭ್ಯ ನನ್ನನ್ನು ರಾಷ್ಟ್ರಮಟ್ಟದಲ್ಲಿ ಬೆಳೆಯಲು ತಳಹದಿಯನ್ನು ಮಾಡಿಕೊಟ್ಟಿತು ಎಂದವರು ಸ್ಮರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾ ಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ, ಸಾಕಷ್ಟು ಮಹಾನ್ ವ್ಯಕ್ತಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿರುವ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿಗೆ 2017ರಲ್ಲಿ 150 ವರ್ಷ ತುಂಬ ಲಿದೆ. ಈ ಸಂದರ್ಭದಲ್ಲಿ ವರ್ಷವಿಡೀ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗುವುದು. ಅಲ್ಲದೆ ಕಾಲೇಜಿನ ಅಭಿವೃದ್ಧಿಗೆ ಸಂಬಂಧಿಸಿದಂತೆ 175 ವರ್ಷ ತುಂಬುವ ಕಾಲಾವಧಿಗೆ ಸೂಕ್ತ ವಾಗುವ ಯೋಜನೆಯನ್ನು ಈ ಸಂದರ್ಭದಲ್ಲಿ ತಯಾರಿಸಲಾಗುವುದು. ಕಾಲೇಜಿನ ಗ್ರಂಥಾಲಯವನ್ನು ಡಿಜಿಟ ಲೈಶನ್ ಆಗಿ ಪರಿವರ್ತಿಸುವ ಹಾಗೂ ಇನ್ನಷ್ಟು ಅಭಿವೃದ್ಧಿಪಡಿಸುವ ಯೋಜನೆ ಹೊಂದಲಾಗಿದೆ. ಶೀಘ್ರದಲ್ಲಿ ರವೀಂದ್ರ ಕಲಾ ಭವನವನ್ನು ನವೀಕರಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಡಾ.ಶಿವರಾಮ ಕಾರಂತ ಪೀಠ ಮುಂದಿನ ದಿನಗಳಲ್ಲಿ ಈ ಕಾಲೇಜಿನಲ್ಲಿ ಕಾರ್ಯಾರಂಭ ಮಾಡಲಿದೆ ಎಂದ ಅವರು, ಕಾಲೇಜಿನ ಬಿಸಿ ಯೂಟ ಯೋಜನೆಗೆ 25 ಸಾವಿರ ರೂ. ವೈಯ ಕ್ತಿಕ ದೇಣಿಗೆ ನೀಡುವುದಾಗಿ ಭೈರಪ್ಪ ತಿಳಿಸಿದರು.
ವಿವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆರಂ ಭಿಸಲಾದ ಮಧ್ಯಾಹ್ನದ ಊಟದ ಯೋಜ ನೆಯನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಿದರು. ಈ ಯೋಜನೆಗೆ ತಾನು ವೈಯಕ್ತಿವಾಗಿ 25 ಸಾವಿರ ರೂ. ದೇಣಿಗೆ ನೀಡುವುದಾಗಿ ಅವರು ಪ್ರಕಟಿಸಿದರು.
ಮೀಡಿಯಾ ಲ್ಯಾಬ್ ಕೊಠಡಿಯನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾ ಟಿಸಿ ಶುಭ ಹಾರೈಸಿದರು. ಕಾಲೇಜಿನಲ್ಲಿ ಅರ್ಥ ಶಾಸ್ತ್ರದ ಸ್ನಾತಕೋತ್ತರ ವಿಭಾಗವನ್ನು ವೀರಪ್ಪ ಮೊಯ್ಲಿ ಸಾಂಕೇತಿಕವಾಗಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರಾದ ಸುಂದರ ನಾಯ್ಕ, ಪ್ರಸನ್ನ ಕುಮಾರ್, ಮೋಹನ್ ನಂಬ್ಯಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರ್ಮಣ್ಣ ನಾಯ್ಕಾ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎ. ಉದಯ ಕುಮಾರ್ ಸ್ವಾಗತಿಸಿದರು. ಜಯವಂತ್ ನಾಯ್ಕಾ ವಂದಿಸಿದರು.





