ವ್ಯಕ್ತಿಯನ್ನು ಥಳಿಸಿ ಕೊಲೆ
ರಾಜಸ್ಥಾನ, ಸೆ.27:ಮಹಿಳೆಗೆ ಪೀಡನೆ ನೀಡಿದ ವ್ಯಕ್ತಿಯನ್ನು ಗ್ರಾಮಸ್ಥರು ಮಾರಣಾಂತಿಕವಾಗಿ ಥಳಿಸಿದ್ದು ಬಳಿಕ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ. ಬರಾನ್ ಜಿಲ್ಲೆಯ ಸೇತ್‌ಕೊಲ್ಹಾ ಎಂಬ ಗ್ರಾಮದಲ್ಲಿ ಬುಡಕಟ್ಟು ಪಂಗಡಕ್ಕೆ ಸೇರಿದ 25ರ ಹರೆಯದ ಶ್ಯಾಮಲಾಲ್ ಭೀಲ್ ಎಂಬಾತ ವಿಪರೀತ ಮದ್ಯಸೇವಿಸಿ ಪರಿಸರದಲ್ಲಿ ಕಿರಿಕಿರಿ ಮಾಡುತ್ತಿದ್ದ. ಬಳಿಕ ಕಾಲನಿಯ ಕೆಲ ಮಹಿಳೆಯರನ್ನು ಚುಡಾಯಿಸುತ್ತಾ ಪೀಡಿಸತೊಡಗಿದಾಗ ಕೆರಳಿದ ಗ್ರಾಮಸ್ಥರು ಸೇರಿ ಥಳಿಸಿದ್ದಾರೆ. ಮಾರಣಾಂತಿಕವಾಗಿ ಗಾಯಗೊಂಡ ಶ್ಯಾಮಲಾಲ್‌ನನ್ನು ಚಿಪಬರೋಡ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟಿದ್ದಾನೆ . ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರೂ ಸೇರಿದಂತೆ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಚಿಪಬರೋಡ್ ಠಾಣೆಯ ಅಧಿಕಾರಿ ಬೃಜ್‌ಪ್ರಕಾಶ್ ನಮ ತಿಳಿಸಿದ್ದಾರೆ.
Next Story





