ವೈಮಾನಿಕ ದಾಳಿಯಲ್ಲಿ ಪವಾಡಸದೃಶವಾಗಿ ಪಾರಾದ ಬಾಲಕಿ

ಅಲಪ್ಪೊ, ಸೆಪ್ಟಂಬರ್ 28: ನಿರ್ಬಂಧ ವಿಧಿಸಲಾದ ಅಲಪ್ಪೊದ ಪೂರ್ವದ ಪ್ರದೇಶದಲ್ಲಿ ಸಿರಿಯನ್ ಸರಕಾರ ಮತ್ತುರಷ್ಯ ನಡೆಸಿದ ವೈಮಾನಿಕ ದಾಳಿಯಲ್ಲಿ ಒಂದೇ ಕುಟಂಬದ ಹದಿನಾರು ಮಂದಿ ಹತರಾಗಿದ್ದು, ಗಝಾಲ್ ಎಂ ಹೆಸರಿನ ಬಾಲಕಿ ಪವಾಡಸದೃಶವಾಗಿ ಬದುಕುಳಿದಿದ್ದಾಳೆ ಎಂದು ವರದಿಯಾಗಿದೆ.
ಬಲಿಷ್ಠ ಮಿಸೈಲ್ ಆಕ್ರಮಣದಲ್ಲಿ ಗಝಾಲಳ ಮನೆ ನೆಲಸಮ ಆಗಿತ್ತು. ಈ ದಾಳಿಯಲ್ಲಿ ಇಪ್ಪತ್ತನಾಲ್ಕು ಮಂದಿ ಹತರಾಗಿದ್ದರು. ಆಕ್ರಮಣ ನಡೆಯುವಾಗ ಮನೆಯಿಂದ ಹೊರಗೆ ಹೋಗಿದ್ದ ಬಾಲಕಿಯ ತಂದೆ ಹಸನ್ ಮರಳಿ ನೋಡುವಾಗ ಮನೆಯ ಅವಶೇಷಗಳ ನಡುವೆ ಮಕ್ಕಳ ಮೃತದೇಹ ಕಂಡು ಬಂದಿತ್ತು. ಗಝಾಲ್ ಬದುಕುಳಿದಿದ್ದು, ಅವಳ ಮೂವರು ಸಹೋದರರು, ತಾಯಿ, ತಂದೆಯ ಸಹೋದರಿ ಕುಟುಂಬ, ದೊಡ್ಡಮ್ಮ ಮುಂತಾದ ಹದಿನಾರು ಮಂದಿ ರಷ್ಯಾ - ಸಿರಿಯ ಸೇನೆಯ ದಾಳಿಯಲ್ಲಿ ಅಸುನೀಗಿದ್ದಾರೆಂದು ವರದಿ ತಿಳಿಸಿದೆ.
Next Story





