ಸಯೀದ್ ಕಂಪ್ಯೂಟರ್ಸ್ ಆಯೋಜಿಸಿದ ಸ್ಕೋಮ್ಸಿಸ್ ಟ್ರೋಫಿ-2016 ಮುಡಿಗೇರಿಸಿಕೊಂಡ "ಬ್ಲೂಸ್ಟಾರ್"

ಜುಬೈಲ್,ಸೆ.28: ವರ್ಷಂಪ್ರತಿ ಸಯೀದ್ ಕಂಪ್ಯೂಟರ್ಸ್ ಆಯೋಜಿಸುವ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ "ಸ್ಕೋಮ್ಸಿಸ್ ಟ್ರೋಫಿ-2016" ಚಾಂಪಿಯನ್ ಆಗಿ ಬ್ಲೂಸ್ಟಾರ್ ಮೂಡಿ ಬಂತು.ರನ್ನರ್ಸ್ ಪ್ರಶಸ್ತಿಯು ಸಯೀದ್ ಕಂಪ್ಯೂಟರ್ ತಂಡದ ಪಾಲಾಯಿತು.ಟಾಸ್ ಗೆದ್ದು ಮೊದಲು ಕ್ಷೇತ್ರರಕ್ಷಣೆ ಆಯ್ದುಕೊಂಡ ಸಯೀದ್ ಕಂಪ್ಯೂಟರ್ಸ್ 33 ರನ್ನುಗಳನ್ನು ಬಿಟ್ಟುಕೊಟ್ಟಿತ್ತು,ಆದರೆ ಮೊತ್ತವನ್ನು ಬೆನ್ನಟ್ಟುವಲ್ಲಿ ಎಡವಿ 10 ರನ್ನುಗಳ ಸೋಲು ಅನುಭವಿಸಿತು ಮತ್ತು ಈ ಮೂಲಕ ಬ್ಲೂಸ್ಟಾರ್ ಸ್ಕೋಮ್ಸಿಸ್ ಟ್ರೋಫಿ-2016ನ್ನು ಮುಡಿಗೇರಿಸಿಕೊಂಡಿತು.
ಮೊದಲ ಸೆಮಿಫೈನಲ್ ಪಂದ್ಯವು ಸಯೀದ್ ಕಂಪ್ಯೂಟರ್ಸ್ ಮತ್ತು ಅಯಾನ್ ಫ್ಯೂಚರ್ ನಡುವೆ ನಡೆಯಿತು ಮತ್ತು ಸಯೀದ್ ಕಂಪ್ಯೂಟರ್ಸ್ ಭರ್ಜರಿ ವಿಜಯಿಯಾಗುವ ಮೂಲಕ ಫೈನಲ್ ಪ್ರವೇಶಿಸಿತು.ಎರಡನೇ ಸೆಮಿಫೈನಲ್ ಬ್ಲೂಸ್ಟಾರ್ ಮತ್ತು ಡೈಮಂಡ್ ಕ್ರಿಕೆಟರ್ಸ್ ನಡುವೆ ನಡೆಯಿತು ಮತ್ತು ಬ್ಲೂಸ್ಟಾರ್ ರೋಮಾಂಚಕಾರಿ ಅರ್ಹ ವಿಜಯದ ಮೂಲಕ ಫೈನಲ್ ಹಾದಿ ಸುಗಮಗೊಳಿಸಿತು.
ಅಂತಿಮ ಪಂದ್ಯದಲ್ಲಿ ಮನ್ಸೂರ್ ಪಂದ್ಯಶ್ರೇಷ್ಠರಾದರು,ಉತ್ತಮ ಬ್ಯಾಟ್ಸ್ ಮೆನ್ ಆಗಿ ಜಬ್ಬಾರ್ ಹಾಗೂ ಉತ್ತಮ ಬೌಲರ್ ಆಗಿ ಶಾಕಿರ್ ಸಯೀದ್ ಕಂಪ್ಯೂಟರ್ಸ್ ಮೂಡಿ ಬಂದರು.ಬ್ಲೂಸ್ಟಾರ್ ತಂಡದ ಸಲ್ಮಾನ್ ಸರಣಿ ಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು.
ಸಮಾರೋಪ ಸಮಾರಂಭದಲ್ಲಿ ಮುಹಮ್ಮದ್ ಫಾರೂಕ್ ಪೋರ್ಟ್ಫೋಲಿಯೋ-ಜುಬೈಲ್ ಮಾತನಾಡಿ ಸಯೀದ್ ಕಂಪ್ಯೂಟರ್ಸ್ ಆಯೋಜಿಸಿರುವ ಕರಾವಳಿಯ ಪ್ರಸಿದ್ದ ಕ್ರಿಕೆಟ್ ಪ್ರಕಾರ ಅಂಡರ್ ಆರ್ಮ್ ಪಂದ್ಯಾಟವನ್ನು ಶ್ಲಾಘಿಸಿದರು.ಓವರ್ ಆರ್ಮ್ ಪಂದ್ಯಾಟಗಳು ವ್ಯಾಪಕವಾಗಿರುವಾಗ ವಿಶಿಷ್ಟ ರೀತಿಯಲ್ಲಿ ವರ್ಷಪ್ರಂತಿ ನಡೆಸುವ ಈ ಸರಣಿ ಜುಬೈಲ್ ನಲ್ಲೂ ಪ್ರಸಿದ್ದಿಯಾಗಲೆಂದು ಹಾರೈಸಿದರು.ಎರಡು ವರ್ಷಗಳಿಂದ ಉತ್ಸಾಹದಿಂದ ಪಂದ್ಯಾಟ ನಡೆಸುತ್ತಿರುವ ಸಯೀದ್ ಕಂಪ್ಯೂಟರ್ಸ್ ನ ಅಸ್ರಾರ್ ಅಹ್ಮದ್ ಮತ್ತು ಹಮೀದ್ ಎಂ.ಪಿ ಅವರನ್ನು ಅಭಿನಂದಿಸಿದರು.
ಶಮೀಮ್ ರಿಯಲ್ ಟೆಕ್ ಮಾತನಾಡಿ,ಕಳೆದೆರಡು ವರ್ಷಗಳಿಂದ ಈ ಸರಣಿಯ ಭಾಗವಾಗಲು ಸಾಧ್ಯವಾಗಿರುವುದಕ್ಕೆ ಅಭಿಮಾನವಿದೆ,ಸಯೀದ್ ಕಂಪ್ಯೂಟರ್ಸ್ ನ ಅಪರೂಪದ ಶ್ರಮ ನಿಜಕ್ಕೂ ಪ್ರಶಂಸಾರ್ಹ ಎಂದು ಕೊಂಡಾಡಿದರು.ಮುನೀರ್ ಎಸ್.ಆರ್ ಇಂಜಿನಿಯರಿಂಗ್,ಅಬ್ದುಲ್ ಖಾದರ್ ಜಿ.ಎಂ.ಗ್ಲೋಬಲ್ ಟೆಕ್,ಸಯೀದ್ ಕಂಪ್ಯೂಟರ್ಸ್ ನ ಎಂ.ಡಿ ಅಸ್ರಾರ್ ಅಹ್ಮದ್,ಐ.ಟಿ ಮ್ಯಾನೇಜರ್ ಹಮೀದ್ ಎಂ.ಪಿ. ಮೊದಲಾದವರು ಉಪಸ್ಥಿತರಿದ್ದರು.
ವರದಿ: ಇರ್ಷಾದ್ ಬೈರಿಕಟ್ಟೆ







