ಖ್ಯಾತ ಕಾಮಿಡಿ ಶೋನಲ್ಲಿ ನಟಿಯ ಬಣ್ಣದ ಕುರಿತು ಲೇವಡಿ !
ಇದು ಕಾಮಿಡಿ ಅಲ್ಲ
.jpg)
ಮುಂಬೈ : ತಮಗೆ ಭಾಗವಹಿಸುವಂತೆ ಆಹ್ವಾನ ನೀಡಲಾಗಿದ್ದ ಕಾಮಿಡಿ ಶೋ ಒಂದರಲ್ಲಿ ತಮ್ಮ ಮೈ ಬಣ್ಣದ ಕುರಿತು ಲೇವಡಿ ಮಾಡಿದ್ದಕ್ಕೆ ನಟಿ ತನಿಷ್ಠಾ ಚಟರ್ಜಿಈ ಶೋ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ತಮ್ಮ ಚಿತ್ರ‘ಪಾರ್ಚ್ಡ್’ ಇದರ ಪ್ರಮೋಶನ್ ಗಾಗಿ ತನಿಷ್ಠಾ, ನಿರ್ದೇಶಕಿ ಲೀನಾ ಯಾದವ್ ಹಾಗೂ ಸಹ ನಟಿ ರಾಧಿಕಾ ಆಪ್ಟೆಗೆ ‘ಕಾಮಿಡಿ ನೈಟ್ಸ್ ಬಚಾವೋ’ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ ಈ ಶೋ ನಲ್ಲಿ ತಮ್ಮ ಕಪ್ಪು ಚರ್ಮದ ಬಗ್ಗೆ ಅವಹೇಳನ ಮಾಡಲಾಗಿದೆಯೆಂದು ತನಿಷ್ಠಾ ತಮ್ಮ ಫೇಸ್ಬುಕ್ ಪಸ್ಟ್ ಒಂದರಲ್ಲಿ ಹೇಳಿಕೊಂಢಿದ್ದಾರೆ.
‘‘ಕಾರ್ಯಕ್ರಮದಲ್ಲಿ ನನ್ನ ವಿಚಾರದಲ್ಲಿ ಹಾಸ್ಯ ಚಟಾಕಿ ಹಾರಿಸಲಾಗುವುದೆಂದು ನನಗೆ ತಿಳಿದಿತ್ತು, ಅದು ಅಮೇರಿಕಾದ ಟಿವಿ ಶೋ ‘ಸ್ಯಾಟರ್ಡೇ ನೈಟ್ ಲೈವ್’ ನಂತಿರಬಹುದೆಂದು ಕೊಂಡಿದ್ದೆ. ಆದರೆ ನನ್ನ ಆಘಾತಕ್ಕೆ ಅವರು ಹಾಸ್ಯ ಮಾಡಲು ನನ್ನ ಮೈಬಣ್ಣವನ್ನೇ ಆಯ್ದುಕೊಂಡಿದ್ದರು.ನಿಮಗೆ ಜಾಮೂನ್ ಖಂಡಿತವಾಗಿ ಬಹಳ ಇಷ್ಟವಾಗಿರಬಹುದು. ನೀವು ಬಾಲ್ಯದಲ್ಲಿ ಎಷ್ಟು ಜಾಮೂನ್ ತಿಂದಿದ್ದೀರಿ ? ಎಂಬಂತಹ ಪ್ರಶ್ನೆಗಳನ್ನು ನನ್ನತ್ತ ಎಸೆಯಲಾಗಿತ್ತು.’’ ಎಂದು ತನಿಷ್ಠಾ ಬರೆದಿದ್ದಾರೆ.
ಸ್ವಲ್ಪ ಹೊತ್ತಿನ ತನಕಈ ಎಲ್ಲಾ ಅಪಹಾಸ್ಯವನ್ನು ತಾಳ್ಮೆಯಿಂದ ಕೇಳಿದ 35 ವರ್ಷದ ನಟಿಗೆ ಕೊನೆಗೊಂದು ಕ್ಷಣ ತಡೆದುಕೊಳ್ಳುವುದು ಅಸಾಧ್ಯವಾಗಿತ್ತು. ‘‘ನಾನು ಶೋ ದಿಂದ ಹೊರ ನಡೆಯಲು ಬಯಸುವುದಾಗಿ ಹೇಳಿದಾಗ ಅವರುತಾವು ಈ ಬಗ್ಗೆ ಮೊದಲೇ ನಿಮಗೆ ಹೇಳಿದ್ದಾಗಿ ನುಡಿದರು. ‘‘ಆದರೆ ಮೈಬಣ್ಣದ ಬಗ್ಗೆ ಅಪಹಾಸ್ಯ ಮಾಡುವುದನ್ನು ಶುದ್ಧ ತಮಾಷೆಯೆಂದು ಹೇಳಲು ಸಾಧ್ಯವೇ?’’ ಎಂದು ತನಿಷ್ಠಾಪ್ರಶ್ನಿಸಿದ್ದಾರೆ.







